Sunday, April 20, 2025
Homeಸುದ್ದಿಗಳುಸಕಲೇಶಪುರ : ಮಕ್ಕಿಹಳ್ಳಿ ಗ್ರಾಮಕ್ಕೆ ನೂತನ ಬಸ್ ಸಂಚಾರ ಆರಂಭ.  ಬಿಜೆಪಿ ಮಂಡಲ ಅಧ್ಯಕ್ಷ...

ಸಕಲೇಶಪುರ : ಮಕ್ಕಿಹಳ್ಳಿ ಗ್ರಾಮಕ್ಕೆ ನೂತನ ಬಸ್ ಸಂಚಾರ ಆರಂಭ.  ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್ ಸಂಘಿ ಅವಿರತಶ್ರಮಕ್ಕೆ ಸಂದ ಫಲ

ಸಕಲೇಶಪುರ : ಮಕ್ಕಿಹಳ್ಳಿ ಗ್ರಾಮಕ್ಕೆ ನೂತನ ಬಸ್ ಸಂಚಾರ ಆರಂಭ.

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್ ಸಂಘಿ ಅವಿರತಶ್ರಮಕ್ಕೆ ಸಂದ ಫಲ

ಸಕಲೇಶಪುರ ತಾಲೂಕು ಹಾನುಬಾಳು ಹೋಬಳಿ ಮಕ್ಕಿಹಳ್ಳಿ ಗ್ರಾಮಕ್ಕೆ ಮಂಗಳವಾರದಿಂದ ನೂತನ ಬಸ್ ಸಂಚಾರ ಪ್ರಾರಂಭವಾಗಿದೆ.

ಅನೇಕ ವರ್ಷಗಳಿಂದ ಈ ಭಾಗಕ್ಕೆ ಸಾರಿಗೆ ಸಂಸ್ಥೆಯ ಬಸ್ಗಳ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು,ಮಹಿಳೆಯರು, ಸಾರ್ವಜನಿಕರು ಪರದಾಡುವಂತಾಗಿತ್ತು. ಈ ಬಗ್ಗೆ ಗ್ರಾಮದ ಯುವಕ ಪರಮೇಶ್ ಹಾಗೂ ಅವರು ತಂಡದವರು ಪಕ್ಷದ ಕಚೇರಿಗೆ ಬಂದು ಸಮಸ್ಯೆಯನ್ನ ವಿವರಿಸಿದ್ದರು. ಈ ಕುರಿತಂತೆ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದರ ಫಲವಾಗಿ ಮಂಗಳವಾರ ದಿಂದ ನೂತನ ಬಸ್ ಸಂಚಾರ ಪ್ರಾರಂಭವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್ ಸಂಘಿ ಮಾಹಿತಿ ನೀಡಿದ್ದಾರೆ.

ಗ್ರಾಮಕ್ಕೆ ಬಸ್ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಸ್ಸಿಗೆ ತಳಿರುತೋರಣಗಳಿಂದ ಸಿಂಗರಿಸಿ ಪೂಜೆ ನಿರ್ವಹಿಸಿ ಸಂಚಾರಕ್ಕೆ ಮುಕ್ತಗೊಳಿಸಿದರು.

ಈ ಸಂದರ್ಭದಲ್ಲಿ ಹಾನುಬಾಳು ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ವಿಮಲಾ. ಉಪಾಧ್ಯಕ್ಷರಾದ ಸಂತೋಷ್. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಂಗನಾಥ್. ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಗಳು ಊರಿನ ಯುವಕರು ಹಿರಿಯರು ಗ್ರಾಮಸ್ಥರು ಭಾಗವಹಿಸಿದ್ದರು.

RELATED ARTICLES
- Advertisment -spot_img

Most Popular