ಸಕಲೇಶಪುರ :- ಭೀಮಾ ಕೋರೆಗಾವ್ ವಿಜಯೋತ್ಸವ ದಲಿತ ಸಮುದಾಯ ವತಿಯಿಂದ ಇಂದು ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿತು.
205ನೇ ವರ್ಷದ ಭೀಮಾ ಕೋರೆಂಗಾವ್ ವಿಜಯೋತ್ಸವದ ಆಚರಣೆಯನ್ನು ಸಕಲೇಶಪುರದಲ್ಲಿ 6ನೇ ಬಾರಿಗೆ ಭೀಮ ಕೋರೆಗಾಂವ್ ವಿಜಯೋತಸ್ವದ ಸ್ಥಂಭದ ಮೆರವಣಿಗೆಯನ್ನು ಸಂಭ್ರಮಾಚರಣೆ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಹೊರಟು ಸಕಲೇಶ್ವರ ಸ್ವಾಮಿ ದೇವಸ್ಥಾನದ ವರೆಗೆ ರಾಜಬೀದಿಯಲ್ಲಿ ಭೀಮ ಕೋರೆಂಗಾವ್ ವಿಜಯಸ್ತಂಭದ ಮಾದರಿ ರಥವನ್ನು ಎಳೆಯುವ ಮೂಲಕ ವಿವಿಧ ಕಲಾತಂಡಗಳು ,ಹಾಗೂ ವಾದ್ಯಗೋಷ್ಠಿ ಮತ್ತು ಡಿಜೆಯ ಹಾಡಿಗೆ ಯುವಕರು ಹಾಗೂ ಮಹಿಳೆಯರು ನೃತ್ಯ ಮಾಡುವ ಮೂಲಕ ಬೃಹತ್ ಮೆರವಣಿಗೆಗೆ ಸಾಕ್ಷಿಯಾದರು
ದಲಿತ ಸಮುದಾಯದ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ. ರಾಷ್ಟ್ರೀಯ ನಾಟಕ ಸಮಿತಿ ಸದಸ್ಯ ಹಾಗೂ ಚಿಂತಕ ಬಸವಲಿಂಗಯ್ಯ ಮಾತನಾಡಿ ಭೀಮ
ಕೋರೆಂಗಾವ್ ಯುದ್ಧದ ಮೂಲಕವೇ ಭಾರತದಲ್ಲಿ ಶ್ರೀಮಂತ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣದ ಹಕ್ಕು ಸರ್ವರಿಗೂ ಸಿಗುವಂತಾಯಿತು, ಹಾಗೆಯೇ ಈ ಆಧಾರದಲ್ಲಿಯೇ ಜ್ಯೋತಿ ಬಾಪುಲೆ, ಸಾವಿತ್ರಿ ಬಾಯಿಮೂಲೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್‌ರವರು ಶಿಕ್ಷಣ ಪಡೆಯಲು ಸಹಕಾರವಾಯಿತು, ಇಂತಹ ಅವಕಾಶವನ್ನು ಬಳಸಿಕೊಂಡು ಬಾಬಾ ಸಾಹೇಬರು ಸಂವಿಧಾನದಲ್ಲಿ 6-ರಿಂದ 14 ವರ್ಷದ ಎಲ್ಲಾ ಮಕ್ಕಳು ಕಡ್ಡಾಯ ಶಿಕ್ಷಣ ಪಡೆಯಲೇಬೇಕು ಎಂಬ ಕಾನೂನನ್ನು ರೂಪಿಸಿದರು. ಈ ಇತಿಹಾಸವನ್ನು ಎಲ್ಲರಿಗೂ ತಿಳಿಸುವ ಜೊತೆಗೆ ಎಲ್ಲರಲ್ಲೂ ಶಿಕ್ಷಣದ ಜಾಗೃತಿ ಮೂಡಿಸುತ್ತಾ, ಶಿಕ್ಷಣ ಮತ್ತು ಉದ್ಯೋಗದ ಅವಕಾಶ ಮಾಡಿಕೊಟ್ಟ ಮಹಾರ್ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಇಂದು ಜಾತಿ ಧರ್ಮಗಳ ಆದಾರದ ಮೇಲೆ ಈ ದೇಶವನ್ನು ಕಟ್ಟಲು ಹೊರಟಿರುವುದು ಪ್ರಜಾಪ್ರಭುತ್ವದ ನಾಶಕ್ಕೆ ಕಾರಣವಾಗುತ್ತದೆ ಇದಕ್ಕೆ ಈ ದೇಶದ ಸಂವಿಧಾನವನ್ನು ಗೌರವಿಸುವ ನಾವುಗಳು ಅವಕಾಶ ಮಾಡಿಕೊಡಬಾರದು ಮುಂದಿನ ದಿನಗಳಲ್ಲಿ ಮತ್ತೊಂದು ಭೀಮ ಕೋರೆಗಾಂವ್ ಯುದ್ದಕ್ಕೆ ಯುವಕರು ಅಣಿಯಾಗಬೇಕು ಎಂದರು.
ಈ ಸಂದರ್ಬದಲ್ಲಿ ಶ್ರಿದರ್ ಕಲ್ವೀರ್, ನಲ್ಲುಳ್ಳಿ ಈರಯ್ಯ, ಯಶೋದ, ನಿರ್ದೇಶಕ ಮಹೇಂದರ್ ಇನ್ನಿತರರು ಇದ್ದರು