ವೀರಶೈವ ಲಿಂಗಾಯತ ನೌಕರರ ಸಂಘದಿಂದ 2023 ನೇ ವರ್ಷದ ಕ್ಯಾಲೆಂಡರ್ ಅನಾವರಣ.
ಸಕಲೇಶಪುರ : ವೀರಶೈವ ಲಿಂಗಾಯತದಡಿ ನಮ್ಮನ್ನು ಗುರುತಿಸಿಕೊಂಡು ಸಂಘಟಿತರಾಗೋಣ. ನಮ್ಮ ಸಂಘಟನೆ ನಮ್ಮ ರಕ್ಷಣೆಗಾಗಿಯೇ ಹೊರತು ಯಾರದೋ ವಿರೋಧಕ್ಕಲ್ಲ ಎಂದು ವೀರಶೈವ ಲಿಂಗಾಯತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಓಂಕಾರ್ ಮೂರ್ತಿ ಹೇಳಿದರು.
ಗುರುವಾರ ಸಂಜೆ ಪಟ್ಟಣದ ಗುರುವೇಗೌಡ ಸಮುದಾಯ ಭವನದಲ್ಲಿ ನೆಡೆದ ಸಂಘದ 2023 ರ್ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಶಾಖೆಯಿಂದ ಪ್ರತಿವರ್ಷ ಸಮಾಜದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು. ಅಕಾಲಿಕ ಮರಣಕ್ಕೆ ತುತ್ತದ ನೌಕರರಿಗೆ ಅಲ್ಪ ಪ್ರಮಾಣದ ಸಹಾಯ ಧನ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಇದಕ್ಕೆ ವೀರಶೈವ ಲಿಂಗಾಯತ ಸಮಾಜದ ಅಂಗ ಸಂಸ್ಥೆಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಕುಂಬರಡಿ ಶಾಲೆಯ ನಿವೃತ್ತ ದೈಹಿಕ ಶಿಕ್ಷಕರಾದ ಬಸವರಾಜ್, ಸೇರಿದಂತೆ ಮೂವವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ನೌಕರರ ಸಂಘದ ಗೌರವಾಧ್ಯಕ್ಷ, ಜೆ.ಎಸ್. ಎಸ್ ಶಾಲೆಯ ಪ್ರಾಧ್ಯಾಪಕರಾದ ಮಂಜುನಾಥ್,
ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದೇವರಾಜ್(ದಿವಾನ್), ಗುರುವೇಗೌಡ ಕಲ್ಯಾಣ ಮಂಟಪ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ಡಿ ಬಸವಣ್ಣ,ಅಖಿಲ ಭಾರತ ವೀರಶೈವ ಮಹಾ ಸಭಾ ತಾಲೂಕು ಅಧ್ಯಕ್ಷ ಯತೀಶ್ ಬಾಳುಗೋಡು,ಕಸಾಪ ಅಧ್ಯಕ್ಷ ಶಾರದಾ ಗುರುಮೂರ್ತಿ, ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಕೌಡಳ್ಳಿ ಲೋಹಿತ್, ತಾಲೂಕು ಅಕ್ಕಮಹಾದೇವಿ ಮಹಿಳಾ ವೇದಿಕೆ ತಾಲೂಕು ಅಧ್ಯಕ್ಷೆ ಶಶಿಕಲಾ ಲೋಕೇಶ್, ಬೆಳಗೋಡು ಹೋಬಳಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಬಿ. ಎನ್ ಬಸವಣ್ಣ, ಸಂಘದ ಖಜಾಂಚಿ ತೇಜಸ್,ಸಹ ಕಾರ್ಯದರ್ಶಿ ಜಗದೀಶ್,ಮಾಜಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಹಡಿಮನೆ ಜಯಣ್ಣ (ಮಂಜುನಾಥ್) ಮುಂತಾದವರು ಇದ್ದರು.