Saturday, November 23, 2024
Homeಸುದ್ದಿಗಳುಸಕಲೇಶಪುರ :ಒಳ್ಳೆಯದು ಮಾಡದಿದ್ದರೂ ಪರವಾಗಿಲ್ಲ ಕೆಡಿಸುವ ಕೆಲಸ ಮಾಡಬೇಡಿ: ತಣ್ಣೀರುಹಳ್ಳ ಶ್ರೀಗಳು

ಸಕಲೇಶಪುರ :ಒಳ್ಳೆಯದು ಮಾಡದಿದ್ದರೂ ಪರವಾಗಿಲ್ಲ ಕೆಡಿಸುವ ಕೆಲಸ ಮಾಡಬೇಡಿ: ತಣ್ಣೀರುಹಳ್ಳ ಶ್ರೀಗಳು

 

 

 

ಒಳ್ಳೆಯದು ಮಾಡದಿದ್ದರೂ ಪರವಾಗಿಲ್ಲ ಕೆಡಿಸುವ ಕೆಲಸ ಮಾಡಬೇಡಿ: ತಣ್ಣೀರುಹಳ್ಳ ಶ್ರೀಗಳು

 

ಸಕಲೇಶಪುರ : ದೇವರ ಜಪ, ತಪ, ಸ್ಮರಣೆ ಮಾಡದಿದ್ದರೂ ಪರವಾಗಿಲ್ಲ. ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡೋಣ. ಅದೂ ಸಾಧ್ಯ ಆಗದಿದ್ದರೆ ಒಳ್ಳೆಯದನ್ನು ಕೆಡಿಸದಿದ್ದರೆ ಸಾಕು, ಇದರಿಂದ ಬದುಕು ಸಾರ್ಥಕ ಆಗಲಿದೆ ಎಂದು ಹಾಸನದ ತಣ್ಣೀರುಹಳ್ಳ ಮಠದ ಸ್ವಾಮಿಗಳು ಹೇಳಿದರು.

 

ಗುರುವಾರ ತಾಲೂಕಿನ ಬಾಳ್ಳುಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ, ಸಿ,ಟ್ರಸ್ಟ್, (ರಿ), ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ನವ ಜೀವನ ಸಮಿತಿ,ಶೌರ್ಯ ವಿಪತ್ತು ನಿರ್ವಹಣಾ ಘಟಕ, ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕಿನ ಬಾಳ್ಳುಪೇಟೆ ವಲಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು,

 

ಭಾರತ ದೇಶದಲ್ಲಿ ಬಹುಪಾಲು ಭಾಗಗಳಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಿಸುತ್ತಾರೆ. ಇದರಿಂದ ಹಿಂದೂ ಧರ್ಮದ ಉಳಿವಿಗೆ ಸಹಕಾರಿ ಯಾಗುವುದರ ಜೊತೆಗೆ ಜನರನ್ನು ಒಂದೆಡೆ ಸೇರಿಸಿ ಭಕ್ತಿ ಮಾರ್ಗದಡೆ ಕರೆದುಕೊಂಡು ಹೋಗಲು ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಅಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದು ಹೇಳಿದರು.

 

 ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲ ಕುಮಾರಸ್ವಾಮಿ ಮಾತನಾಡಿ,ಗ್ರಾಮಾಭ್ಯುದಯ, ಆರ್ಥಿಕ ಸಬಲತೆ, ಕೃಷಿ, ಸಾಮಾಜಿಕ ಕ್ಷೇತ್ರ, ಜನರ ಜೀವನಮಟ್ಟ ಸುಧಾರಣೆ ಸೇರಿದಂತೆ ಹಲವು ಸಮಾಜಮುಖೀ ಚಿಂತನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯವಾದದ್ದು. ಮಹಿಳಾ ಸಬಲೀಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮಹಿಳೆ ಪ್ರಗತಿ ಸಾಧಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಮಹತ್ವದ ಪಾತ್ರ ನಿಭಾಯಿಸುತ್ತಿದೆ ಎಂದರು.

 

 ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ಮಾತನಾಡಿ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತಾಲೂಕಿನಲ್ಲಿ ಹಲವು ಮಹಿಳಾ ಮತ್ತು ಪುರುಷ ಸಂಘಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಬಡಜನರಿಗೆ ಮಾರ್ಗ ದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯವಾಗಿದೆ. ಧರ್ಮಸ್ಥಳ ಯೋಜನೆಯಿಂದ ಒಳ್ಳೆಯ ಕೆಲಸ ಆಗುತ್ತದೆ. ಜನರು ಒಳ್ಳೆಯ ರೀತಿಯಲ್ಲಿ ಸಾಲವನ್ನು ಉಪಯೋಗಿಸಿ ಮರು ಪಾವತಿಸಬೇಕು ಎಂದರು.ದುಂದು ವೆಚ್ಚ ಮಾಡದೇ, ಇತೀ ಮಿತಿಯಲ್ಲಿ ಖರ್ಚು ಮಾಡಬೇಕು. ಸಾಲಗಾರರಾಗದೇ ಪಡೆದುಕೊಂಡಿರುವ ಸಾಲವನ್ನು ಪ್ರಾಮಾಣಿಕತೆಯಿಂದ ಮರು ಪಾವತಿಸ ಬೇಕು ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾ ಭಿವೃದ್ಧಿಯೋಜನೆ ಮುಖಾಂತರ ಮಹಿ ಳೆಯರಿಗೆ ಸ್ವಾವಲಂಬನೆಯ ಬದುಕು ಕಟ್ಟಿ ಕೊಳ್ಳಲು ಸಹಕಾರಿಯಾಗಿದೆ. ಮಹಿಳೆ ಅಬಲೆಯಲ್ಲಿ ಸಬಲೆ ಎಂದು ನಿರೂಪಿಸಬೇಕು. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದುವರಿದಿದ್ದು, ಯೋಜನೆಯ ಮುಖಾಂತರ ಬ್ಯಾಂಕ್ ಗಳಿಂದ ಪಡೆದುಕೊಂಡ ಸಾಲವನ್ನು ಸದುದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು. ಪ್ರಾಮಾಣಿಕತೆ ವ್ಯಕ್ತಪಡಿಸಬೇಕು ಎಂದರು. ನಾನು ಕೂಡ ಒಬ್ಬ ಉದ್ಯಮಿಯಾಗಿ ಬೆಳೆಯಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರಕಾರ ಬಹು ಮುಖ್ಯವಾಗಿತ್ತು ಎಂದು ನೆನಪು ಮಾಡಿಕೊಂಡರು.

 

 

 ಈ ಸಂದರ್ಭದಲ್ಲಿತಹಸೀಲ್ದಾರ್ ಮೇಘನಾ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್, ಬೆಳಗೋಡು ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷ ಉಮಾನಾಥ್ ಸುವರ್ಣ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ದಿನೇಶ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ರತ್ನ, ಯೋಜನೆಯ ತಾಲೂಕು ಯೋಜನಾಧಿಕಾರಿ ಪುರುಷೋತ್ತಮ್, ಬಾಳ್ಳುಪೇಟೆ ವಲಯ ಮೇಲ್ವಿಚಾರಕಿ ಗೀತಾ, ನಳಿನಿ, ಕೋಮಲ ಸೇರಿದಂತೆ ಎಲ್ಲ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಾರ್ವಜನಿಕರು ಇದ್ದರು.

RELATED ARTICLES
- Advertisment -spot_img

Most Popular