Saturday, November 23, 2024
Homeಸುದ್ದಿಗಳುಸಕಲೇಶಪುರಬಾಗೆ ಗ್ರಾಮದಲ್ಲಿ ಒಂಟಿ ಕಾಡಾನೆ ಪ್ರತ್ಯಕ್ಷ

ಬಾಗೆ ಗ್ರಾಮದಲ್ಲಿ ಒಂಟಿ ಕಾಡಾನೆ ಪ್ರತ್ಯಕ್ಷ

 

ಸಕಲೇಶಪುರ :- ಒಂಟಿ ಕಾಡಾನೆಯೊಂದು ತಾಲ್ಲೂಕಿನ ಬಾಗೆ ಗ್ರಾಮದಲ್ಲಿ ಕಂಡು ಬಂದಿದ್ದರಿಂದ ಗ್ರಾಮಸ್ಥರು ಭಯದಿಂದ ಮನೆಯೊಳಗೇ ಓಡಿ ಹೋದ ಘಟನೆ ನೆಡೆದಿದೆ.

ಕಳೆದ ಆರು ತಿಂಗಳ ಹಿಂದೆ ತಾಲೂಕಿನ ಉದಯವಾರ ಗ್ರಾಮದಲ್ಲಿ ಸೆರೆಹಿಡಿದಿದ್ದ ಮಖ್ನಾ ಆನೆಯನ್ನು ದೂರದ ಮಲೆ ಮಾದೇಶ್ವರ ಬೆಟ್ಟಕ್ಕೆ ಬಿಟ್ಟು ಬಂದಿದ್ದರು ಪುನ: ಮಲೆನಾಡು ಭಾಗಕ್ಕೆ ಎಂಟ್ರಿ ಕೊಟ್ಟಿರುವ ಈ ಆನೆಯೂ ಹಗಲು ರಾತ್ರಿ ಎನ್ನದೆ ವಸತಿ ಪ್ರದೇಶಗಳಿಗೆ ದಾಳಿ ಇಡುತ್ತಿರುವುದರಿಂದ ಗ್ರಾಮಸ್ಥರು ಸಹಜವಾಗಿ ಭಯಭೀತರಾಗಿದ್ದಾರೆ.

ಈ ಕಾಡಾನೆಯ ಕುತ್ತಿಗೆಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು ಇದರ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇಟ್ಟಿರುವುದರಿಂದ ಆನೆಯನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತಿದೆ.

ಏನೇ ಆದರೂ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳದಿಂದ ಜನರು ಬೇಸತ್ತು ಹೋಗಿದ್ದು ಸಂಪೂರ್ಣ ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದಾರೆ

RELATED ARTICLES
- Advertisment -spot_img

Most Popular