Friday, April 4, 2025
Homeಸುದ್ದಿಗಳುಗ್ರಾಮೀಣಕಾಡುಕೋಣ ತಿವಿದು ಕಾಫಿ ಬೆಳೆಗಾರ ಸಾವು

ಕಾಡುಕೋಣ ತಿವಿದು ಕಾಫಿ ಬೆಳೆಗಾರ ಸಾವು

ಕಳಸ: ಕಾಡು ಕೋಣ ತಿವಿದು ಕಾಫಿ ಬೆಳೆಗಾರನೋರ್ವ ಸಾವನ್ನಪ್ಪಿರುವ ಘಟನೆ ಕಳಸ ತಾಲ್ಲೂಕಿನ ತೋಟದೂರು ಸಮೀಪ ನಡೆದಿದೆ.

ತೋಟದೂರು ಸಮೀಪದ ಕಳಿಹಿತ್ಲು ಎಂಬಲ್ಲಿ ತಮ್ಮ ತೋಟದಲ್ಲಿದ್ದ ಸೋಮಶೇಖರ್ (45ವರ್ಷ) ಎಂಬುವವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಇಂದು ಬೆಳಿಗ್ಗೆ 10-30ರ ಸಮಯದಲ್ಲಿ ತನ್ನ ತೋಟಕ್ಕೆ ತೆರಳಿದ್ದ ಸೋಮಶೇಖರ್ ಮೇಲೆ ಕಾಡುಕೋಣ ದಾಳಿಮಾಡಿ ಕೊಂಬಿನಿಂದ ತಿವಿದಿದೆ.

ದಾಳಿಯಿಂದ ತೀವ್ರವಾಗಿ ಗಾಯಗೊಂಡು ಅತೀವ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸೋಮಶೇಖರ್ ಜಯಪುರ ನಿವಾಸಿಯಾಗಿದ್ದು ಕಳಿಹಿತ್ಲಿನ ತನ್ನ ಅಡಿಕೆ ತೋಟಕ್ಕೆ ಬಂದಿದ್ದಾಗ ಕಾಡುಕೊಣ ದಾಳಿಮಾಡಿದೆ.ಅ

ಅಪೂರ್ವ ಸೌಹಾರ್ದ ಸಹಕಾರಿ ಅಧ್ಯಕ್ಷರು ಆಗಿದ್ದ ಸೋಮಶೇಖರ್ ಈ ಭಾಗದಲ್ಲಿ ಚಿರಪರಿಚಿತರಾಗಿದ್ದರು. ಅವರ ಸಾವಿನಿಂದ ಜಯಪುರ ಭಾಗದ ಜನತೆ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಕಾಡಾನೆಗಳ ದಾಳಿಯಿಂದ ಜನ ಸಾವನ್ನಪ್ಪುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದು ಆದರೆ ಕಾಡುಕೋಣದ ದಾಳಿಯಿಂದ ರೈತ ಸಾವನ್ನಪ್ಪಿರುವುದು ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

RELATED ARTICLES
- Advertisment -spot_img

Most Popular