Monday, November 25, 2024
Homeಸುದ್ದಿಗಳುಗುಂಡಿ ಬಿದ್ದ ರಸ್ತೆಯಿಂದ ಟ್ರಾಫಿಕ್ ಜಾಮ್ : ಕಣ್ಣಿದ್ದು ಕುರುಡಾದ ಅಧಿಕಾರಿಗಳು  ರಸ್ತೆ ದುರಸ್ತಿಗಾಗಿ...

ಗುಂಡಿ ಬಿದ್ದ ರಸ್ತೆಯಿಂದ ಟ್ರಾಫಿಕ್ ಜಾಮ್ : ಕಣ್ಣಿದ್ದು ಕುರುಡಾದ ಅಧಿಕಾರಿಗಳು  ರಸ್ತೆ ದುರಸ್ತಿಗಾಗಿ ರಾಜ್ಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದ ಸಾರ್ವಜನಿಕರು 

 

ಗುಂಡಿ ಬಿದ್ದ ರಸ್ತೆಯಿಂದ ಟ್ರಾಫಿಕ್ ಜಾಮ್ : ಕಣ್ಣಿದ್ದು ಕುರುಡಾದ ಅಧಿಕಾರಿಗಳು

 ರಸ್ತೆ ದುರಸ್ತಿಗಾಗಿ ರಾಜ್ಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದ ಸಾರ್ವಜನಿಕರು 

ಸಕಲೇಶಪುರ :. ಪಟ್ಟಣದ ತೇಜಸ್ವಿ ಚಿತ್ರಮಂದಿರದ ಬಳಿ ಅರೇಹಳ್ಳಿ,ಬೇಲೂರಿಗೆ ಸಂಪರ್ಕಿಸುವ ರಸ್ತೆ ಗುಂಡಿ ಬಿದ್ದು ತಿಂಗಳುಗಟ್ಟಲೇ ಕಳೆದರೂ ಗುಂಡಿ ಮುಚ್ಚದೆ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವಾಹನ ಸವಾರರು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತೇಜಸ್ವಿ ಚಿತ್ರಮಂದಿರದಿಂದ ನಮ್ಮ ಕ್ಲಿನಿಕ್ ವರೆಗೆ ಕೇವಲ 150 ಮೀಟರ್ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು ದ್ವಿಚಕ್ರ ವಾಹನ ಸವಾರರು ತಮ್ಮ ಜೀವವನ್ನು ಕೈಲಿಹಿಡಿದು ಸಂಚರಿಸಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳಿಗೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಟ್ರಾಫಿಕ್ ಜಾಮ್ ನಿಂದ ಆಂಬುಲೆನ್ಸ್ ಗಳು ಸಹ ವಾಹನಗಳ ಮಧ್ಯೆ ಸಿಲುಕುತ್ತಿರುವುದು ಆತಂಕದ ವಿಷಯವಾಗಿದೆ.

ಈ ರಸ್ತೆಯಲ್ಲಿ ಲಘು ವಾಹನ ಸೇರಿದಂತೆ ಭಾರಿ ವಾಹನಗಳು ಸಂಚರಿಸುತ್ತವೆ.ಇದಲ್ಲದೆ ರಸ್ತೆ ಬದಿಯಲ್ಲಿ ಕೆಲ ವಾಹನ ಸವಾರರು ಬೇಕಾಬಿಟ್ಟಿ ವಾಹನಗಳು ನಿಲ್ಲಿಸಿ ಹೋಗುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸುವಂತೆಯೂ ಸಾರ್ವಜನಿಕರು ಒತ್ತಾಯಿಸಿದ್ದಾರೆ

ಗುಂಡಿ ಬಿದ್ದಿರುವ ರಸ್ತೆಗೆ ಇನ್ನೆರಡು ದಿನಗಳಲ್ಲಿ ಕಾಯಕಲ್ಪ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಅರೇಹಳ್ಳಿ ರಸ್ತೆ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ವಕೀಲ ಕುಡುಗರಹಳ್ಳಿ ಸುದೀಶ್ ಎಚ್ಚರಿಸಿದ್ದಾರೆ.

RELATED ARTICLES
- Advertisment -spot_img

Most Popular