ಸಕಲೇಶಪುರ : ಮಲೆನಾಡು ಭಾಗದಲ್ಲಿ ಹೆಚ್ಚಾದ ಕಾಡಾನೆಗಳ ಉಪಟಳ ತಡೆಯಲು ಬೆಳೆಗಾರರು ಬಾರಿ ಗಾತ್ರದ ಕಂದಕ ತೋಡುತ್ತಿರುವ ಘಟನೆ ಬೆಳಗೊಡು ಹೋಬಳಿಯ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಅಮೃತ್ ಎಂಬುವವರ ಭತ್ತದ ಗದ್ದೆಯಲ್ಲಿ 20 ಅಡಿ ಅಗಲ, 20 ಅಡಿ ಆಳದ ಕಂದಕವನ್ನು ಗ್ರಾಮಸ್ಥರು ತೋಡಿದ್ದಾರೆ.
ಜೆಸಿಬಿ ಮೂಲಕ ಕಂದಕ ತೋಡಿ ಕಾಡಾನೆ ಖೆಡ್ಡಾಗೆ ಕೆಡವಲು ಯೋಜನೆ ರೂಪಿಸಿದ್ದಾರೆ.ಕಂದಕದ ಮೇಲೆ ಸೊಪ್ಪು ಬಿದಿರು ಕಟ್ಟಿ ಕಾಡಾನೆ ಆಳಕ್ಕೆ ಬೀಳಿಸುವ ಮೂಲಕ ಕಾಡಾನೆ ನಿಯಂತ್ರಣ ಯೋಜನೆಯನ್ನು ರೂಪಿಸಿದ್ದಾರೆ ಗ್ರಾಮಸ್ಥರು
ಕಂದಕಕ್ಕೆ ಕಾಡಾನೆ ಬಿದ್ದು ಅನಾಹುತ ಸಂಭವಿಸಿ ಇಲಾಖೆ ಮತ್ತು ಸರ್ಕಾರ ನಮ್ಮ ಮೇಲೆ ಕ್ರಮ ಕೈಗೊಂಡರೆ ಗ್ರಾಮಸ್ಥರು ತಯಾರಿದ್ದಾರೆ ಎಂದು ಸರಕಾರಕ್ಕೆ ಸವಾಲು ಹಾಕಿದರು
ಗ್ರಾಮಸ್ಥರ ಹೋರಾಟಕ್ಕೆ ಕರವೇ ನಾರಾಯಣ ಗೌಡ ಬಣ, ಪ್ರವೀಣ್ ಗೌಡ ಬಣ ಬೆಂಬಲ ವ್ಯಕ್ತಪಡಿಸಿತು.