Monday, November 25, 2024
Homeಸುದ್ದಿಗಳುಸಕಲೇಶಪುರ: ನಿವೇಶನ ರಹಿತರ ಹೋರಾಟ ಸಮಿತಿ ಹಾಗೂ ಯೂತ್ ಕಾಂಗ್ರೇಸ್ ವತಿಯಿಂದ ಪುರಸಭಾ ಮುಂಭಾಗ ಡಿಸೆಂಬರ್...

ಸಕಲೇಶಪುರ: ನಿವೇಶನ ರಹಿತರ ಹೋರಾಟ ಸಮಿತಿ ಹಾಗೂ ಯೂತ್ ಕಾಂಗ್ರೇಸ್ ವತಿಯಿಂದ ಪುರಸಭಾ ಮುಂಭಾಗ ಡಿಸೆಂಬರ್ 26 ಡಿಸೆಂಬರ್ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿಗೆ ನಿರ್ಧಾರ

ಸಕಲೇಶಪುರ: ನಿವೇಶನ ರಹಿತರ ಹೋರಾಟ ಸಮಿತಿ ಹಾಗೂ ಯೂತ್ ಕಾಂಗ್ರೇಸ್ ವತಿಯಿಂದ ಪುರಸಭಾ ಮುಂಭಾಗ ಡಿಸೆಂಬರ್ 26 ಡಿಸೆಂಬರ್ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿಗೆ ನಿರ್ಧಾರ

ಸಕಲೇಶಪುರ ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿವೇಶನ ಮತ್ತು ವಸತಿಗಾಗಿ ಸಾವಿರಾರು ಅರ್ಹ ಕುಟುಂಬಗಳು ಆರ್ಜಿ ಸಲ್ಲಿಸುತ್ತಿದ್ದು, ಪ್ರತಿ ವರ್ಷವೂ ನಿವೇಶನ ರಹಿತರ ಪಟ್ಟಿಯನ್ನು ಬಿಡುಗಡೆ ಮಾಡುವುದು ಪುರಸಭೆಯ ಜವಾಬ್ದಾರಿಯಾಗಿದ್ದು, ಇದುವರೆಗೂ ಪುರಸಭೆ ನಿವೇಶನ ರಹಿತರ ಯಾವುದೇ ಪಟ್ಟಿ ಬಿಡುಗಡೆ ಮಾಡುವುದಾಗಲೀ, ನಿವೇಶನ ಹಂಚಿಕೆ ಮಾಡುವುದಾಗಲಿ ಮಾಡಿರುವುದಿಲ್ಲ.ಇದರ ಪರಿಣಾಮದಿಂದ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ, ವಾಸಕ್ಕಾಗಿ ಬಾಡಿಗೆ ಮನೆಯನ್ನು ಅವಲಂಬಿಸಿ, ಕಷ್ಟದಿಂದ ಜೀವನ ನಡೆಸಿಕೊಂಡು ಬಂದಿರುತ್ತಾರೆ.ಹಾಗೂ ನಿವೇಶನ ರಹಿತರ ವಸತಿ ಉದ್ದೇಶಕ್ಕೆ ಅನುಕೂಲವಾಗುವಂತೆ ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವೇಶನ ರಹಿತರ ಪಟ್ಟಿಯನ್ನು ಬಿಡುಗಡೆಗೊಳಿಸಿ, ವಾಸಕ್ಷ ಮನೆ ನಿರ್ಮಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸುವಂತೆ ನಿರಂತರವಾಗಿ ಮನವಿಗಳನ್ನು ಸಲ್ಲಿಸುತ್ತಾ ಬಂದರೂ ಸಹ, ಪುರಸಭೆಯು ಪಟ್ಟಿ ಬಿಡುಗಡೆ ಮಾಡದೆ ಕಾಲಾಹರಣ ಮಾಡುತ್ತಿದೆ.

 

ಸಕಲೇಶಪುರ ಪಟ್ಟಣದಲ್ಲಿ ನಿವಾಸಿಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ನಿವೇಶನ ರಹಿತರು ಈವರೆಗೆ ಸಾವಿರಾರು ಅರ್ಜಿಗಳನ್ನು ಸಲ್ಲಿಸಿದ್ದು, ಈ ಸಂಬಂಧ ಹಲವಾರು ಬಾರಿ ಪ್ರತಿಭಟನೆಗಳನ್ನು ಮಾಡಿ, ಪತ್ರಿಕಾ ಹೇಳಿಕೆಗಳನ್ನು ನೀಡಿ, ಮನವಿಗಳನ್ನು ಸಲ್ಲಿಸಿದ್ದರೂ ಕೂಡ ಏನೂ ಪ್ರಯೋಜನವಾಗಿರುವುದಿಲ್ಲ. ಹಾಗೆಯೇ ದಿನಾಂಕ 3-3-2022 ರಂದು ನಿವೇಶನ ರಹಿತರ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡು ಸಕಲೇಶಮರದ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್, ಸುರಸಭೆ ಅಧ್ಯಕ್ಷರು ಮತ್ತು ಪತ್ರಕರ್ತರ ಸಮ್ಮುಖದಲ್ಲಿ ಮಾನ್ಯ ಸಕಲೇಶಪುರದ ಶಾಸಕರು 1 ತಿಂಗಳ ಒಳಗೆ ನಿವೇಶನ ರಹಿತರ ಪಟ್ಟಿ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದು, ಇಂದಿನವರೆಗೂ ಸುಮಾರು 9 ತಿಂಗಳು ಕಳೆದರೂ ಆಶ್ವಾಸನೆ ಈಡೇರಿಸದ ಕಾರಣ, ನಿವೇಶನ ರಹಿತರ ಪಟ್ಟಿ ಮತ್ತು ಪಟ್ಟಣದಲ್ಲಿ ಕಸವಿಲೇವಾರಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ, ಸುಭಾಷ್ ಮೈದಾನದ ಬಳಿ ಒಂದು ರುದ್ರಭೂಮಿಗೆ ಹೊಂದಿಕೊಂಡಂತೆ ಪಟ್ಟಣದ ಕಸವನ್ನು ಇಲ್ಲಿ ವಿಲೇವಾರಿ ಮಾಡುತ್ತಿರುವುದನ್ನು ನಿಲ್ಲಿಸಿ ಬೇರೆಕಡೆಗೆ ಸ್ಥಳಾಂತರಿಸಬೇಕು, ಕುಡುಗರಹಳ್ಳಿ ಮತ್ತು ಆಚೆಂ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸ್ಮಶಾನಕ್ಕೆ ಜಾಗ ಕಲ್ಪಿಸುವಂತೆ ಇತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ದಿನಾಂಕ 26 ಡಿಸೆಂಬರ್ 2012 ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಸಕಲೇಶಮರ ಪುರಸಭೆ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ಹಮ್ಮಿಕೊಂಡಿದ್ದು, ಎಲ್ಲಾ ಸಂಘ ಸಂಸ್ಥೆಯವರು ಮತ್ತು ಸಾರ್ವಜನಿಕರು ಈ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ನಮ್ಮ ಪಟ್ಟಣದ ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಕರಿಸಬೇಕಾಗಿ ಮುಖಂಡ ಯೂನಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular