Sunday, November 24, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ : ಒಲಂಪಸ್ ಶಾಲೆಯಲ್ಲಿ ವಿಂಟರ್ ಸೆಲಬ್ರೇಷನ್ ಕಾರ್ಯಕ್ರಮ

ಸಕಲೇಶಪುರ : ಒಲಂಪಸ್ ಶಾಲೆಯಲ್ಲಿ ವಿಂಟರ್ ಸೆಲಬ್ರೇಷನ್ ಕಾರ್ಯಕ್ರಮ

ಸಕಲೇಶಪುರ : ಚಳಿಗಾಲವು ಕೇವಲ ಒಂದು ಋತವಲ್ಲ ಅದೊಂದು ಸಂಭ್ರಮ ಎಂದು ಒಲಂಪಸ್ ಶಾಲೆಯ ಮುಖ್ಯಸ್ಥೆ ಸಮತ ಹೇಳಿದರು.
ಪಟ್ಟಣದ ಹಳೆ ಸಂತವೇರಿ ಬಡಾವಣೆಯಲ್ಲಿರುವ ಒಲಂಪಸ್ ಶಾಲೆಯಲ್ಲಿ ನಡೆದ ವಿಂಟರ್ ಸೆಲಬ್ರೇಷನ್ ಕಾರ್ಯಕ್ರಮದಲ್ಲಿ ಮಾತನಾಡಿ, ಚಲಿಗಾಲವು ಹೊಸ ವರ್ಷವನ್ನು ಸಂತೋಷ ಮತ್ತು ಸಡಗರದಿಂದ ಸ್ವಾಗತಿಸುವ ದಿನವನ್ನಾಗಿ ಆಚರಿಸುತ್ತೇವೆ, ನಾವು ಮಕ್ಕಳಲ್ಲಿ ಈ ಸಮಯದಲ್ಲಿ ಧರಿಸುವ ಉಡುಪಗಳು ಮತ್ತು ಸೇವಿಸಬೇಕಾದ ಅಹಾರದ ಮತ್ತು ಪರಿಸರದಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ಮಕ್ಕಳಿಗೆ ಹೇಳಿಕೊಡುವ ಮೂಲಕ ಅರಿವು ಮೂಡಿಸುತ್ತಿದ್ದೇವೆ ಎಂದು ಹೇಳಿದರು.

ಒಲಂಪಸ್ ಶಾಲೆ ಮಕ್ಕಳಿಗೆ ಪಾಠವನ್ನು ಹೊರೆಯನ್ನಾಗಿಸದೆ ಬಹಳ ಸರಳವಾಗಿ ಪಾಠಗಳನ್ನು ಹೇಳಿ ಕೊಡುತ್ತೇವೆ. ಶಾಲೆಯಲ್ಲಿ ಕೌಶಲ್ಯಪೂರ್ಣ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಮೌಲ್ಯಧಾರಿತ ಶಿಕ್ಷಣವನ್ನು ನೀಡುತ್ತಿದ್ದಾರೆ. ಆಕರ್ಷಕ ಕೊಠಡಿಯನ್ನು ನಿರ್ಮಿಸಿ, ಅದನ್ನು ವಿಭಿನ್ನ ಬೋಧನಾ ಉಪಕರಣಗಳಿಂದ ಸಿಂಗರಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುವಂತಹ ಪ್ರಯತ್ನ ನಡೆಯುತ್ತಿದೆ ಎಂದರು.
ಮಕ್ಕಳು ಜರ್ಕಿನ್, ಕೋಟು, ಸ್ವೆಟರ್, ಮಪ್ಲರ್ ಧರಿಸಿ ಪೋಷಕರ ಗಮನ ಸೆಳೆದರು

RELATED ARTICLES
- Advertisment -spot_img

Most Popular