Saturday, November 23, 2024
Homeಸುದ್ದಿಗಳುಸಕಲೇಶಪುರ :ವರ್ಣರಂಜಿತ ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥಕ್ಕೆ ಸ್ವಾಗತ.

ಸಕಲೇಶಪುರ :ವರ್ಣರಂಜಿತ ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥಕ್ಕೆ ಸ್ವಾಗತ.

ಸಕಲೇಶಪುರ :ವರ್ಣರಂಜಿತ ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥಕ್ಕೆ ಸ್ವಾಗತ.

ಸಕಲೇಶಪುರ : ಮೈಸೂರಿನ ಸುತ್ತೂರು
ಜಾತ್ರಾ ಮಹೋತ್ಸವದ ಅಂಗವಾಗಿ ನಗರಕ್ಕೆ ಆಗಮಿಸಿದ ಪ್ರಚಾರ ರಥಕ್ಕೆ ಸಕಲೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಮಲೆನಾಡು ವೀರಶೈವ ಸಮಾಜದ ಪದಾಧಿಕಾರಿಗಳು ಹಾಗೂವೀರಶೈವ ಮುಖಂಡರು ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದೇವರಾಜ್ (ದಿವಾನ್ ) ಮಾತನಾಡಿ,ಜಗದ್ಗುರು ಶ್ರೀ ಶಿವರಾತ್ರೀಶ್ವೇರ ಶಿವಯೋಗಿಗಳ ಜಾತ್ರಾ ಮಹೋತ್ಸವವು ಜನವರಿ 18 ರಿಂದ 23ರ ವರೆಗೂ ಬಹಳ ಅದ್ಧೂರಿಯಾಗಿ ಜಾತ್ರ ಮಹೋತ್ಸವ ಜರುಗಲಿದೆ. 40 ದಿನದಿಂದ ಪ್ರಚಾರದ ವಾಹನವು ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಹೋತ್ಸವಕ್ಕೆ ಆಹ್ವಾನಿಸುತ್ತಿದೆ. ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ
ವಿವಾಹ , ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು, ದೋಣಿ ವಿಹಾರ,ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ಛಾಯ ಚಿತ್ರ ಸ್ಪರ್ದೆ, ನಡೆಯಲಿದೆ ಎಂದರು.
ಸಮಾಜದ ಮುಖಂಡರಾದ ಎಡೇಹಳ್ಳಿ ಮಂಜುನಾಥ್ ಮಾತನಾಡಿ,ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳನ್ನುಹಮ್ಮಿಕೊಳ್ಳಲಾಗಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಡಿನ ಮಠಾಧೀಶರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರುಗಳೂ, ಸಂಸದರು, ಕಲಾವಿದರು, ಪ್ರಗತಿಪರ ರೈತರು,ಹಾಗೂ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.
ಇದೆ ವೇಳೆ ಮಲೆನಾಡು ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಧರ್ಮಪ್ಪ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಡಿ ಬಸವಣ್ಣ ಸಮಾಜದ ಮುಖಂಡರುಗಳಾದ ನರೇಶ್, ರೋಹಿತ್ ಕಿತ್ಲೆಮನೆ, ಅಕ್ಕಮಹಾದೇವಿ ಸಮಾಜದ ರೇಖಾ ಸುರೇಶ್, ಜೆಎಸ್ಎಸ್ ವಿದ್ಯಾಸಂಸ್ಥೆಗಳ ಮಂಜುನಾಥ್ ಸೇರಿದಂತೆ ಇತರರು
ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular