ಸಕಲೇಶಪುರ: ಬಸ್ಸೊಂದು ಚಾಲಕನ ಅರಿವಿಲ್ಲದೆ ಚಾಲಕನಿಗೆ ಸೂಚನೆ ಮಾಡಲು ಇಳಿದಿದ್ದ ಕಂಡಕ್ಟರ್ ಕಾಲಿನ ಮೇಲೆ ಹರಿದ ಪರಿಣಾಮ ಬಸ್ ನಿರ್ವಾಹಕ ಗಂಭೀರವಾಗಿ ಗಾಯಗೊಂಡರಿವ ಘಟನೆ ರಾಷ್ಟ್ರೀಯ ಹೆದ್ದಾರಿ 75 ಕುಂಬಾರಗಟ್ಟೆ ಸಮೀಪ ನಡೆದಿದೆ.
ರಮೇಶ್ (47) ಚಾಲಕನ ನಿರ್ಲಕ್ಷ್ಯದಿಂದ ಗಾಯಗೊಂಡ ನಿರ್ವಾಹಕನಾಗಿದ್ದಾರೆ.
ಬೆಂಗಳೂರಿನಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸೊಂದರ ಚಾಲಕನಿಗೆ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಕಳೆದ ಏಳು ವರ್ಷಗಳಿಂದ ರಸ್ತೆ ಕಾಮಗಾರಿಯು ಕುಂಟುತ್ತಾ ಸಾಗುತ್ತಿದ್ದು, ಗುತ್ತಿಗೆದಾರ ರಸ್ತೆಯ ಬದಿಯಲ್ಲಿ ಸೂಚನ ಫಲಕಗಳನ್ನು ಹಾಕದೆ ಇರುವುದರಿಂದ ವಾಹನ ಸವಾರರು ಮುಚ್ಚಿದ ರಸ್ತೆಯಲ್ಲಿ ಸಾಗುತ್ತಿರುವುದು ಸಾಮನ್ಯವಾಗಿ ಹಲವು ಅವಘಡಗಳು ಸಂಭವಿಸಿದೆ.
ಕಳೆದ ಕೆಳದಿನಗಳ ಹಿಂದೆ ಸಂಸದರಾದ ಪ್ರಜ್ವಲ್ ರೆವಣ್ಣರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಳನ್ನು ತರಾಟೆಗೆ ತೆಗೆದುಕೊಂಡು ವಾರದೊಳಗೆ ಸೂಚನ ಫಲಕವನ್ನು ಅಳವಡಿಸುವಂತೆ ಅದೇಶ ಮಾಡಿದ್ದರು. ಸಂಸದರ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ಮನಸ್ಸೊ ಇಚ್ಚೆ ಕಾಮಗಾರಿ ನಡೆಸುತ್ತಿದ್ದು ಇದರಿಂದ ಅಪಘಾತಗಳು ಸಾಮನ್ಯವಾಗಿದೆ.
ಅಪಘಾತ ನಡೆದು ನಿರ್ವಾಕ ಗಂಭೀರವಾಗಿ ಗಾಯಗೊಂಡರು ಚಾಲಕ ತಕ್ಷಣ ನಿರ್ವಾಕನನ್ನು ಆಸ್ಪತ್ರೆಗೆ ಸಾಗಿಸದೆ ಇನ್ನೊಂದು ಬಸ್ ಬರುವವರೆಗೂ ಕಾಯ್ದು
ಬಸ್ಸಿನಲ್ಲಿ ಗಾಯಾಳುವನ್ನು ಸಾಗಿಸಿದ್ದಾನೆ, ಇದರಿಂದ ರಕ್ತಸ್ರಾವ ಜಾಸ್ತಿಯಾಗಿ ನಿರ್ವಾಕ ನಿತ್ರಾಣಗೊಂಡು ಬಳಲಿಹೊಗಿದ್ದರು.