Sunday, November 24, 2024
Homeಸುದ್ದಿಗಳುದತ್ತ ಪೀಠಕ್ಕೆ ಹೋಗುವ ರಸ್ತೆಯಲ್ಲಿ ಮೊಳೆ ಚೆಲ್ಲಿ ಕುಕೃತ್ಯ ನಡೆಸಿದ್ದ ಇಬ್ಬರು ದುಷ್ಕರ್ಮಿಗಳು ಅರೆಸ್ಟ್

ದತ್ತ ಪೀಠಕ್ಕೆ ಹೋಗುವ ರಸ್ತೆಯಲ್ಲಿ ಮೊಳೆ ಚೆಲ್ಲಿ ಕುಕೃತ್ಯ ನಡೆಸಿದ್ದ ಇಬ್ಬರು ದುಷ್ಕರ್ಮಿಗಳು ಅರೆಸ್ಟ್

Datta jayanti | ದತ್ತ ಪೀಠಕ್ಕೆ ಹೋಗುವ ರಸ್ತೆಯಲ್ಲಿ ಮೊಳೆ ಚೆಲ್ಲಿ ಕುಕೃತ್ಯ ನಡೆಸಿದ್ದ ಇಬ್ಬರು ದುಷ್ಕರ್ಮಿಗಳು ಅರೆಸ್ಟ್

ದತ್ತ ಪೀಠದ ದಾರಿಯಲ್ಲಿ ಮೊಳೆ ಚೆಲ್ಲಿ ದುಷ್ಕರ್ಮಿ ಕೃತ್ಯಕ್ಕೆ ಮುಂದಾಗಿದ್ದ ಚಿಕ್ಕಮಗಳೂರಿನ ದುಬೈ ನಗರದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಚಿಕ್ಕಮಗಳೂರು: ಡಿಸೆಂಬರ್ 6, 7, 8ರಂದು ನಡೆದಿದ್ದ ದತ್ತ ಜಯಂತಿ ಕಾರ್ಯಕ್ರಮದ ವೇಳೆ ದತ್ತಪೀಠಕ್ಕೆ ಸಾಗುವ ದಾರಿಯಲ್ಲಿ ಚೂಪಾದ ಮೊಳೆಗಳನ್ನು ಚೆಲ್ಲಿ ದೊಡ್ಡ ಮಟ್ಟದ ಕುಕೃತ್ಯಕ್ಕೆ ಮುಂದಾಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮದ್ ಶಹಬಾಸ್, ವಾಹೀದ್ ಹುಸೇನ್ ಬಂಧಿತ ಆರೋಪಿಗಳು. ಇವರು ಚಿಕ್ಕಮಗಳೂರಿನ ದುಬೈ ನಗರದ ನಿವಾಸಿಗಳಾಗಿದ್ದು, ಈ ರಸ್ತೆಯಲ್ಲಿ ಸಾಗುವ ವಾಹನಗಳನ್ನು ಪಂಚರ್ ಮಾಡುವ ಉದ್ದೇಶದಿಂದ ಮತ್ತು ನಡೆಯುವವರ ಕಾಲಿಗೆ ಚುಚ್ಚಲಿ ಎನ್ನುವ ಉದ್ದೇಶದಿಂದ ಈ ರೀತಿ ಮಾಡಿದ್ದರು ಎಂದು ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ಈ ಪ್ರಕರಣ ನಡೆಯುತ್ತಿದ್ದಂತೆಯೇ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದರು, ಹಲವು ತಂಡಗಳಾಗಿ ದುಷ್ಕೃತ್ಯದ ಸೂತ್ರಧಾರರ ಪತ್ತೆಗೆ ಮುಂದಾಗಿದ್ದರು. ಈಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.

RELATED ARTICLES
- Advertisment -spot_img

Most Popular