Sunday, November 24, 2024
Homeಸುದ್ದಿಗಳುBreaking News :ದತ್ತ ಜಯಂತಿ ಸಂದರ್ಭ ಮೊಳೆ ಚೆಲ್ಲಿದ ಪ್ರಕರಣ : ಇಬ್ಬರು ಸೆರೆ

Breaking News :ದತ್ತ ಜಯಂತಿ ಸಂದರ್ಭ ಮೊಳೆ ಚೆಲ್ಲಿದ ಪ್ರಕರಣ : ಇಬ್ಬರು ಸೆರೆ

 

ದತ್ತ ಜಯಂತಿ ಸಂದರ್ಭ ಮೊಳೆ ಚೆಲ್ಲಿದ ಪ್ರಕರಣ : ಇಬ್ಬರು ಸೆರೆ

 

BREAKING NEWS ,-ಚಿಕ್ಕಮಗಳೂರು: ದತ್ತ ಜಯಂತಿ ಸಂದರ್ಭದಲ್ಲಿ ಕೈಮರದಿಂದ ಪೀಠಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಮೊಳೆ ಚೆಲ್ಲಿದ ಪ್ರಕರಣ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿದ್ದಾರೆ.

ಚಿಕ್ಕಮಗಳೂರಿನ ದುಬೈ ನಗರದ ಮೊಹಮ್ಮದ್ ಶಹಬಾಸ್, ವಾಹಿದ್ ಹುಸೇನ್ ಬಂಧಿತ ಆರೋಪಿಗಳು. ಪೀಠಕ್ಕೆ ತೆರಳುವ ಭಕ್ತರಿಗೆ ತೊಂದರೆ ಕೊಡುವ ಉದ್ದೇಶದಿಂದ ಈ ಕೃತ್ಯವನ್ನು ಇವರು ಎಸಗಿದ್ದು ಕೆಲ ವಾಹನಗಳು ಪಂಚರ್ ಆಗಿದ್ದವು.

ದೂರು ಆಧರಿಸಿ ತನಿಖೆಗೆ ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಹಾರ್ಡ್ವೇರ್ ಅಂಗಡಿಯಲ್ಲಿ ನಾಲ್ಕು ಕೆಜಿ ಮೊಳೆ ಖರೀದಿಸಿರುವುದು ಪತ್ತೆಯಾಗಿದೆ.

ಈ ಕೃತ್ಯದ ಹಿಂದೆ ಇನ್ನಷ್ಟು ಜನ ಇರುವ ಶಂಕೆ ಇದ್ದು ತನಿಖೆ ಮುಂದುವರಿದಿದೆ.

ಭಜರಂಗದಳ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ರಘು  ಹೇಳಿಕೆ ನೀಡಿ ಪೋಲೀಸ್ ಇಲಾಖೆ ಈಗಾಗಲೇ 2 ಜನ ಆರೋಪಿಗಳನ್ನ ಬಂಧಿಸಿರುವುದು ಸ್ವಾಗತಾರ್ಹ..

ಇವರ ಜೊತೆ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿರುವ ಎಲ್ಲರನ್ನು ಬಂಧಿಸಬೇಕು ಮತ್ತು ಧಾರ್ಮಿಕ ಭಾವನೆಗಳಿಗೆ ದಕ್ಕೆ ತರಲು ಪ್ರಯತ್ನಿಸಿದ್ದು ಮತ್ತು ದೇಶದ್ರೊಹದ ಅಡಿ ಕೇಸ್ ದಾಖಲಿಸಬೇಕು ಬಂಧಿತರು ಮತ್ತು ಕುಮ್ಮಕ್ಕು ನೀಡಿರುವ ವ್ಯಕ್ತಿಗಳಿಗೆ ಯಾವ ಇಸ್ಲಾಮಿಕ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ತನಿಖೆ ಆಗಬೇಕು.

ದತ್ತಪೀಠದಲ್ಲಿ ಎಲ್ಲವೂ ಉಚ್ಚನ್ಯಾಯಾಲಯದ ಆದೇಶದಂತೆ ರಾಜ್ಯಸರ್ಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಅರ್ಚಕರ ನೇಮಕ ಮತ್ತು ಪೂಜೆ ಪುನಸ್ಕಾರ ಎಲ್ಲವೂ ಸರ್ಕಾರದ ವ್ಯವಸ್ಥಾಪನಾ ಸಮಿತಿಯಿಂದಲೇ ನಡಿಯುತಿದ್ದು ಈ ಬಗ್ಗೆ ವಿನಾಕಾರಣ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.
ಕರ್ನಾಟಕ ಮತ್ತು ದೇಶದ ದತ್ತಭಕ್ತರು ದತ್ತಪೀಠಕ್ಕೆ ಆಗಮಿಸಬೇಕು ಮತ್ತು ಹಿಂದೂ ಅರ್ಚಕರು ಮಾಡುವ ಪೂಜೆ-ಪುನಸ್ಕಾರ ಅಭಿಷೇಕ ಸಂಕಲ್ಪಗಳಲ್ಲಿ ಭಾಗವಹಿಸಬೇಕು ದತ್ತಾತ್ರೆಯ ಸ್ವಾಮಿ ಆಶೀರ್ವಾದ ಪಡಿಯಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.

 

RELATED ARTICLES
- Advertisment -spot_img

Most Popular