Sunday, November 24, 2024
Homeಸುದ್ದಿಗಳುರೈತರಿಗೆ ಮಾರಕವಾಗಿರುವ ಯೋಜನೆ ಹಿಂಪಡೆಯುವಂತೆ ಆಗ್ರಹಿಸಿ; ರಸ್ತೆ ತಡೆದು ರೈತ ಸಂಘದಿಂದ ಪ್ರತಿಭಟನೆ

ರೈತರಿಗೆ ಮಾರಕವಾಗಿರುವ ಯೋಜನೆ ಹಿಂಪಡೆಯುವಂತೆ ಆಗ್ರಹಿಸಿ; ರಸ್ತೆ ತಡೆದು ರೈತ ಸಂಘದಿಂದ ಪ್ರತಿಭಟನೆ

ಹಾಸನ: ರೈತರಿಗೆ ಮಾರಕವಾಗಿರುವ ಯೋಜನೆಯನ್ನು ಸರಕಾರವು ಕೂಡಲೇ ಹಿಂಪಡೆಯುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇತರೆ ಸಂಘಟನೆಗಳ ಮುಖಂಡರು ಸೇರಿ ತಾಲೂಕಿನ ಶಾಂತಿಗ್ರಾಮದ ಬಳಿ ಇರುವ ಟೋಲ್ ಗೇಟ್ ಬಳಿ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿ ಆಕ್ರೋಷ ವ್ಯಕ್ತಪಡಿಸಿದರು.
       ಮಾರಕವಾಗಿರುವ ಯೋಜನೆಗಳನ್ನು ರೂಪಿಸುವ ಮೂಲಕ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸರಕಾರದ ರೈತ ವಿರೋಧಿ ನಡೆಯನ್ನು ರಾಜ್ಯ ರೈತಸಂಘ ತೀವ್ರವಾಗಿ ಖಂಡಿಸುತ್ತದೆ. ಸರಕಾರದ ಇಂತಹ ಮೂರು ಕೃಷಿ ಕಾಯಿದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಅತಿವೃಷ್ಠಿಯಿಂದ ರೈತರು ಹಲವು ಸಂಕಷ್ಟ ಎದುರಿಸುತ್ತಿದ್ದು, ಇದರ ನಡುವೆ ರಾಜ್ಯ ಸರಕಾರ ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸಲು ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಅನೇಕ ವರ್ಷಗಳಿಂದ ರೈತರ ಸಾಲ ಮನ್ನಾ ಮಾಡಲು ಸರಕಾರ ಹಿಂದೇಟು ಹಾಕುತ್ತಿದ್ದು, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವಲ್ಲಿ ವಿಫಲವಾಗಿದೆ ಎಂದು ದೂರಿದರು. ಚುನಾವಣೆ ವೇಳೆ ರೈತರ ಬಳಿ ಬರುವ ಜನಪ್ರತಿನಿಧಿಗಳು, ನಂತರದಲ್ಲಿ ರೈತರ ಹಿತರಕ್ಷಣೆ ಕಾಪಾಡುವಲ್ಲಿ ವಿಫಲವಾಗಿವೆ. ಕೂಡಲೇ ಸರಕಾರ ರೈತರ ಸಾಲ ಮನ್ನಾ ಮಾಡಿ, ರೈತರ ಬೆಳೆಗಳಿಗೆ ಉತ್ತಮ ಬೆಲೆ ನಿಗದಿ ಮಾಡಬೇಕು. ಆಲಮಟ್ಟಿ ಜಲಾಶಯ ನೀರಿನ ಮಟ್ಟವನ್ನು 519 ಅಡಿುಂದ 524 ಕ್ಕೆ ಏರಿಸಬೇಕು. 256 ಮೀಟರ್ ಗೆ  ಎತ್ತರ ಮಾಡಬೇಕು. ರೈತರು ಬೆಳೆದ ಬೆಳೆಗೆ ಸರಕಾರವು ಕಾನೂನಾತ್ಮಕವಾಗಿ ಬೆಲೆ ನಿಗಧಿಪಡಿಸಬೇಕೆಂದು ಒತ್ತಾಯಿಸಿದ ಅವರು, ನಮ್ಮ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರತರವಾದ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. ರೈತರನ್ನು ಉಳಿಸಿರಿ ದೇಶವನ್ನು ಬೆಳೆಸಿರಿ ಘೋಷಣೆಯೊಂದಿಗೆ ನಮ್ಮ ಪ್ರತಿಭಟಿಯನ್ನು ಆರಂಭಿಸಲಾಗಿದೆ ಎಂದು ಹೇಳಿದರು.
      ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ಮಾಡಿದ್ದರಿಂದ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾುತು. ತುರ್ತು ವಾಹನ ಬಂದಾಗ ಸುಗಮ ಸಂಚಾರಕ್ಕೆ ರೈತರು ಜಾಗ ಮಾಡಿಕೊಟ್ಟರು. ನಂತರ ಹಾಸನ ನಗರಕ್ಕೆ ಬಂದು ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಮನವಿ ಸಲ್ಲಿಸಿದರು.
     ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪಾಂಡುರಂಗ ಅನಂತಕುಮಾರ್, ಒಕ್ಕಲಿಗರ ಸೇನೆ ರಾಜ್ಯಾಧ್ಯಕ್ಷ ರಾಕೇಶ್‌ಗೌಡ, ಜಯಕರ್ನಾಟಕ ವೇದಿಕೆಯ ಮಣಿಕಂಠ, ರೈತ ಮುಖಂಡರಾದ ಸುರೇಶ್ ಬಾಬು, ಮಂಜುನಾಥ್, ಸಂದೀಪ್, ರವಿ,ನವೀನ್ ಇತರರು ಉಪಸ್ಥಿತರಿದ್ದರು.
RELATED ARTICLES
- Advertisment -spot_img

Most Popular