ಸಕಲೇಶಪುರ: ಹಕ್ಕು ಪತ್ರಕ್ಕಾಗಿ ಅಂತಿಮ ಹಂತದ ಹೋರಾಟಕ್ಕೆ ಸಿದ್ದತೆ: ಸಾಮಾಜಿಕ ಹೋರಾಟಗಾರ ಅವರೇಕಾಡು ಪೃಥ್ವಿ ಕರೆ
ಸಕಲೇಶಪುರ ತಾಲೂಕಿನಾದ್ಯಂತ ಹಲವಾರುವರ್ಷ ಗಳಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಸ್ಥಳದ ಹಕ್ಕು ಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತ ಇರುವ ಫಲಾನುಭವಿ ಗಳಿಗೆ ತಾಲ್ಲೋಕು ಅಧಿಕಾರಿ ಗಳಾದ ತಹಶೀಲ್ದಾರ್ ಅವರ ಕಚೇರಿಯಿಂದ ಇದುವರೆಗೂ ಹಲವಾರು ಫಲಾನುಭವಿಗಳಿಗೆ ಹಕ್ಕು ಪತ್ರ ನೀಡದೆ ರಕ್ಷಿತ ಅರಣ್ಯದ ನೆಪ ಒಡ್ಡಿ ಮುಂದೂಡುತ್ತ ಬಂದಿದ್ದಾರೆ,ಇಂದು ಹೊಸ ತಹಶೀಲ್ದಾರ್ ಮೇಘನಾ ಅವರನ್ನು ಭೇಟಿ ಆಗಿ ರಕ್ಷಿತ ಅರಣ್ಯ ಹೊರತು ಪಡಿಸಿ ಉಳಿದ ಜಾಗದ ಕಂದಾಯ ಇಲಾಖೆಯ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ ಕೊಂಡಿರುವ ಫಲಾನುಭವಿಗಳಿಗೆ ಸ್ಥಳದ ಹಕ್ಕುಪತ್ರ ನೀಡುವಂತೆ ಸಾಮಾಜಿಕ ಹೋರಾಟಗಾರ ಹಾಗೂ ಭಾರತೀಯ ಜನತಾ ಪಾರ್ಟಿಯ ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಅವರೇಕಾಡು ಪೃಥ್ವಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮೇಘನಾ ನಾನು ತಾಲೂಕಿಗೆ ಬಂದು ಕೇವಲ ಒಂದು ವಾರ ಆಗಿದೆ, ಪರಿಶೀಲಿಸಿ ಕ್ರಮ ಕೈಗೊಳ್ಳವುದಾಗಿ ತಿಳಿಸಿದ್ದಾರೆ.
ನಂತರ ಪ್ರತಿಕ್ರಿಯಿಸಿದ ಅವರೇಕಾಡು ಪೃಥ್ವಿ ರವರು ಸ್ವಲ್ಪ ದಿನ ಕಾದು ನೋಡಿ ನಂತರ,ಮೊದಲಿನ ತರ ರಸ್ತೆಗಿಳಿದು ಹೋರಾಟ ನಡೆಸಲು ಮಾನಸಿಕ ಸಿದ್ಧತೆ ನಡೆಸಿದ್ದೇನೆ ಅಮಾಯಕ ಜನರು ಈ ವಿಚಾರವಾಗಿ ದಿನ ನಿತ್ಯ ಸಂಪರ್ಕ ಮಾಡುತ್ತಿರುತ್ತಾರೆ.. ಎಷ್ಟು ದಿನ ಅಂತ ಅವರಿಗೆ ನಾಳೆ ನಾಳೆ ಅಂತ ಹೇಳುವುದು ಈ ಇಲಾಖೆ ಜೊತೆ ಗುದ್ದಾಡುತ್ತ ವರ್ಷಗಳು ಉರುಳು ಹೋದದ್ದೇ ಗೊತ್ತಾಗಲಿಲ್ಲ ಆದ್ದರಿಂದ ಈ ಹೋರಾಟಕ್ಕೆ ಬೆಂಬಲ ಕೊಡುವವರು ನನ್ನ ಜೊತೆ ಕೈಜೋಡಿಸಬಹುದು ನನ್ನ ದೇಶ, ನಮ್ಮದೇ ಸಮಸ್ಯೆ, ಪರಿಹಾರನು ನಮ್ಮಲ್ಲೆ ಇದೆ, ಸಮಯ ಕೊಡಬೇಕು ಅಷ್ಟೇ ಎಂದು ಹೇಳಿದ್ದಾರೆ.