Sunday, November 24, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ : ಹೆತ್ತೂರಿನಲ್ಲಿ ಗಮನ ಸೆಳೆದ ಮಕ್ಕಳ ಸಂತೆ. ಹೆತ್ತೂರು ಹೋಬಳಿ ವ್ಯಾಪ್ತಿಯ 19...

ಸಕಲೇಶಪುರ : ಹೆತ್ತೂರಿನಲ್ಲಿ ಗಮನ ಸೆಳೆದ ಮಕ್ಕಳ ಸಂತೆ. ಹೆತ್ತೂರು ಹೋಬಳಿ ವ್ಯಾಪ್ತಿಯ 19 ಶಾಲೆಗಳ ವಿದ್ಯಾರ್ಥಿಗಳು ಭಾಗಿ.  ಮಲೆನಾಡು ಶೈಲಿಯ ತಿಂಡಿ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ.

 

 

ಸಕಲೇಶಪುರ : ಹೆತ್ತೂರಿನಲ್ಲಿ ಗಮನ ಸೆಳೆದ ಮಕ್ಕಳ ಸಂತೆ.

ಹೆತ್ತೂರು ಹೋಬಳಿ ವ್ಯಾಪ್ತಿಯ 19 ಶಾಲೆಗಳ ವಿದ್ಯಾರ್ಥಿಗಳು ಭಾಗಿ.

ಮಲೆನಾಡು ಶೈಲಿಯ ತಿಂಡಿ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ.

 

ಸಕಲೇಶಪುರ : ಸರ್ಕಾರಿ ಶಾಲೆಯಲ್ಲಿ ಕಲಿತರೆ ಎಲ್ಲ ರಂಗದಲ್ಲೂ ಮಕ್ಕಳು ಮುಂದೆ ಬರುತ್ತಾರೆ ಎಂಬುದಕ್ಕೆ ಮಕ್ಕಳ ಸಂತೆ ಸಾಕ್ಷಿಯಾಯಿತು. ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ವ್ಯಾಪ್ತಿಯ ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳು ಹೆತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಭ್ರಮದಿಂದ ಮಕ್ಕಳ ಸಂತೆಯಲ್ಲಿ ಭಾಗಿಯಾದರು.ಮಕ್ಕಳು ಪಾಠದ ಜೊತೆ ಆಟೋಟಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಇದರಿಂದ ಮಕ್ಕಳಿಗೆ ಸಾಮಾಜಿಕ ಹಾಗೂ ಆರ್ಥಿಕ ಜ್ಞಾನವು ಹೆಚ್ಚಾಗಲು ಕಾರಣವಾಗುತ್ತದೆ.

ಹೆತ್ತೂರು ಸರ್ಕಾರಿ ಶಾಲೆಯ ಆವರಣವೆಲ್ಲ ಇವತ್ತು ಮಾರುಕಟ್ಟೆಯ ವಾತಾವರಣ ನಿರ್ಮಾಣವಾಗಿತ್ತು.ಬಿಳಿ ಬಟ್ಟೆಯಲ್ಲಿ ಮಕ್ಕಳು ತರಕಾರಿ ಮಾರಾಟ ಮಾಡುತ್ತಿರುವ ಧೃಶ್ಯ ಗಮನ ಸೆಳೆಯಿತು.

ಈ ಮೇಳದಲ್ಲಿ ಮಕ್ಕಳು ಮಲೆನಾಡು ಶೈಲಿಯ ತಿಂಡಿ ತಿನಿಸು, ವಿವಿಧ ತರಹದ ಸೊಪ್ಪುಗಳು,ತರಕಾರಿ, ಕಿರಾಣಿ, ಹಾಲು, ಸ್ಟೇಷನರಿ ಸ್ವೀಟ್ ಅಂಗಡಿಗಳ ಮಾರಾಟದ ಮಳಿಗೆಗಳನ್ನು ಮಾಡಿಕೊಂಡು ತಾವೇ ವ್ಯಾಪಾರಿಗಳಾಗಿ ಗ್ರಾಹಕರಾಗಿ ವ್ಯವಹಾರಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಪಡೆದುಕೊಂಡರು. ಅಲ್ಲದೆ ಮಕ್ಕಳು ಗ್ರಾಮ್, ಕಿಲೋ ಗ್ರಾಂ,ಲೀಟರ್ ಅಳತೆ ಮಾನ ದಂಡಗಳನ್ನು ಮಾಪನದ ಮೂಲಕ ಪ್ರಾಯೋಗಿಕವಾಗಿ ತಿಳಿದುಕೊಂಡರು ಹಾಗೂ ಹಣಕಾಸಿನ ವ್ಯವಹಾರ ಮೂಲಕ ರೂಪಾಯಿ ಚಿಲ್ಲರೆ ವಿನಿಮಯದ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದರು.

ಈ ಸಂಧರ್ಭದಲ್ಲಿ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು,ಶಿಕ್ಷಕರು ಇದ್ದರು.

RELATED ARTICLES
- Advertisment -spot_img

Most Popular