ಸಕಲೇಶಪುರ ಸರ್ವೆ ಇಲಾಖೆಯಲ್ಲಿ ಖಾಸಗಿ ಸರ್ವೆಯರ್ ಗಳ ದರ್ಬಾರ್
ಕಸಬಾ ಬೆಳೆಗಾರ ಸಂಘದ ಅಧ್ಯಕ್ಷ ಲೋಹಿತ್ ಕೌಡಳ್ಳಿಆಕ್ರೋಶ
ಸಕಲೇಶಪುರ: ಹದ್ದುಬಸ್ತು ಸರ್ವೆಗೆ ರೈತರು ಹಣ ಕಟ್ಟಿ ಸರ್ವೆ ಮಾಡಲು ಕೋರಿದರೆ ಆಜು ಬಾಜು ದಾರರಿಗೆ 7 ದಿವಸ ಮುಂಚಿತವಾಗಿ ನೋಟಿಸ್ ನೀಡಲು ಕಾನೂನು ಇದ್ದರು ಕೂಡಾ ನಾಳೆ ಸರ್ವೆ ಎನ್ನುವಾಗ ಹಿಂದಿನ ದಿನ ನೋಟಿಸ್ ನೀಡಿ ಅಥವಾ ಫೋನ್ ಕಾಲ್ ಮೂಲಕ ಮಾಹಿತಿ ನೀಡಿ ಸರ್ವೆ ಮಾಡುತ್ತಿದ್ದು, ಇದರಿಂದ ರೈತ ಬೆಳೆಗಾರರಿಗೆ ತೊಂದರೆ ಆಗುತ್ತಿದ್ದು, ಹದ್ದು ಬಸ್ತಿಗೆ ದುಡ್ಡು ಕಟ್ಟಿದ್ದರು ಕೂಡಾ ಮತ್ತೆ ಅತಿ ಹೆಚ್ಚು ಹಣಕ್ಕೆ ಬೇಡಿಕೆ ಇಡುತಿದ್ದು ಇ್ರಿಂದ ರೈತರಿಗೆ ಅನಾನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ಬೆಳೆಗಾರ ಸಂಘದ ವತಿಯಿಂದ ಸರ್ವೆಚಅಧಿಕಾರಿಗಳ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು ಕಸಬಾ ಬೆಳೆಗಾರ ಸಂಘದ ಅಧ್ಯಕ್ಷ ಲೋಹಿತ್ ಕೌಡಳ್ಳಿ ತಿಳಿಸಿದ್ದಾರೆ