Monday, November 25, 2024
Homeಸುದ್ದಿಗಳುಸಮಾಜ ಜಾಗೃತವಾದಾಗ ಮಾತ್ರ ಅಪರಾಧ ತಡೆ ಸಾಧ್ಯ : ಸಹಾಯಕ ಪೋಲಿಸ್ ಅಧೀಕ್ಷಕ ಎಚ್.ಎನ್ ಮಿಥುನ್

ಸಮಾಜ ಜಾಗೃತವಾದಾಗ ಮಾತ್ರ ಅಪರಾಧ ತಡೆ ಸಾಧ್ಯ : ಸಹಾಯಕ ಪೋಲಿಸ್ ಅಧೀಕ್ಷಕ ಎಚ್.ಎನ್ ಮಿಥುನ್

 

ಸಕಲೇಶಪುರ:- ಎಲ್ಲವನ್ನೂ ಕಾನೂನಿನಿಂದ ಸರಿಪಡಿಸಲು,ವ್ಯವಸ್ಥೆಯಿಂದ ಅಪರಾಧಗಳನ್ನು ನಿಯಂತ್ರಿಸಲು,ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಜನರು ಇಲಾಖೆಗೆ ನೀಡುವ ಸಹಕಾರ ಹಾಗೂ ಜನರ ಸಹಭಾಗಿತ್ವದ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವಿದೆ. ಎಂದು ಸಕಲೇಶಪುರ ಉಪವಿಭಾಗದ ಸಹಾಯಕ ಪೋಲಿಸ್ ಅಧೀಕ್ಷಕ ಎಚ್.ಎನ್ ಮಿಥುನ್ ಅಭಿಪ್ರಾಯ ವ್ಯಕ್ತ ಪಡಿಸಿದರು.
ಸೋಮವಾರ ಪಟ್ಟಣದ ಲಯನ್ಸ್ ಭವನದಲ್ಲಿ ಏರ್ಪಡಿಸಿದ್ದ ಅಪರಾದ ತಡೆ ಮಾಸಚರಣೆ 2022 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ಕೂಡ ಒಬ್ಬ ಪೋಲಿಸ್ ಇದ್ದಹಾಗೆ ನಾವುಗಳು ಸಮವಸ್ತ್ರ ಧರಿಸಿ ಕೆಲಸ ನಿರ್ವಹಿಸುತ್ತವೆ ಅದೇ ರೀತಿ ಜನರು ಸಹ ಒಬ್ಬ ಪೋಲಿಸ್ ರೀತಿ ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಅಪರಾದಗಳನ್ನು ತಡೆಯಲು ಸಾಧ್ಯ.ಅಪರಾಧಗಳನ್ನು ತಡೆಯಲು ಮುಖ್ಯವಾಗಿ ಸಾಕ್ಷಿಗಳು ಬೇಕು ಅಪರಾಧಿಗೆ ಶಿಕ್ಷೆ ನೀಡಿ ಮತ್ತೆ ಅಪರಾಧವಾಗದಂತೆ ತಡೆಯಬೇಕಾದರೆ ಸಾಕ್ಷಿಗಳು ಮುಖ್ಯ ಈ ನಿಟ್ಟಿನಲ್ಲಿ ಜನರು ನಿರ್ಭಿತಿಯಿಂದ ನ್ಯಾಯಲಯಕ್ಕೆ ತಮ್ಮ ಬಳಿವಿರುವ ಸಾಕ್ಷಿ ನೀಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಈಚೆಗೆ ಯುವ ಸಮೂಹ ಹಾದಿ ತಪ್ಪುತ್ತಿದ್ದಾರೆ ಮಾದಕ ವಸ್ತುಗಳ ಸೇವನೆಯಿಂದ ತಮ್ಮ ಜೀವನ ಜೊತೆಗೆ ಸಮಾಜ ಸ್ವಾಸ್ತ್ಯ ಕೆಡಿಸುತ್ತಿದ್ದಾರೆ ಅಂತವರನ್ನು ಹುಡುಕಿ ಎಡೆಮುರಿ ಕಟ್ಟಲಾಗುವುದು.
ಮಧ್ಯವರ್ತಿಗಳ ಜೊತೆ ಪೊಲೀಸ್ ಠಾಣೆಗೆ ಬರಬೇಡಿ : ನೊಂದವರು ಪೊಲೀಸ್ ಠಾಣೆಗೆ ದೂರು ನೀಡಲು ಬರುವಾಗ ಮಧ್ಯವರ್ತಿಗಳನ್ನು ಜೊತೆಗೆ ಕರೆದುಕೊಂಡು ಬರಬೇಡಿ ಇದರಿಂದ ದೂರುದಾರರ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ ಪೋಲಿಸ್ ಇಲಾಖೆ ನೊಂದವರ ಪರವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಇನ್ನು ಮುಂದೆ ಪೊಲೀಸ್ ಠಾಣೆಗೆ ಬರುವಾಗ ಮಧ್ಯವರ್ತಿಗಳು ಬಂದರೆ ಅವರ ಮೇಲೆ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ವೃತ್ತ ನಿರೀಕ್ಷಕ ಚೈತನ್ಯ ಮಾತನಾಡಿ ವಾಹನ ಸವಾರರು ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮವನ್ನು ಪಾಲಿಸಬೇಕು ಸವಾರರು ಹೆಲ್ಮೆಟ್,ಸೀಟ್ ಬೆಲ್ಟ್ ವಾಹನದ ದಾಖಲಾತಿಯನ್ನು ಇಟ್ಟುಕೊಂಡು ವಾಹನವನ್ನು ಚಾಲನೆ ಮಾಡಬೇಕು ಇದರಿಂದ ಅಪಘಾತ ಗಳನ್ನು ತಡೆಗಟ್ಟಬಹುದು ಎಂದು ಹೇಳಿದರು. ಆಟೋ, ಟ್ಯಾಕ್ಸಿ ಚಾಲಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದರೆ ಸ್ವಲ್ಪಮಟ್ಟಿಗಾದರೂ ಅಪರಾಧಗಳನ್ನು ತಡೆಗಟ್ಟಬಹುದಾಗಿದೆ.ಅಪರಾಧ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ನಗರದಲ್ಲಿನ ಆಟೋಗಳ ಮಾಲೀಕರು ಚಾಲಕರ ಸಂಪೂರ್ಣ ಮಾಹಿತಿಯನ್ನು ಶೇಖರಿಸಿಡಲು ನೂತನವಾಗಿ ಪೊಲೀಸ್ ಇಲಾಖೆಯಿಂದ ನಂಬರ್ ಗಳ ಸ್ಟಿಕರ್ ಗಳನ್ನು ಆಟೋಗಳಿಗೆ ಅಂಟಿಸಲಾಯಿತು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಅಬಕಾರಿ ಇಲಾಖೆ ನಿರೀಕ್ಷಕರಾದ ಶೇಖರ್, ವಲಯ ಅರಣ್ಯ ಅಧಿಕಾರಿ ಶಿಲ್ಪ, ನಗರ ಠಾಣೆಯ ಪಿಎಸ್ಐ ಶಿವಶಂಕರ್, ಆಲೂರು ಠಾಣೆಯ ಪಿಎಸ್ಐ ಗಣೇಶ್, ಯಸಳೂರು ಠಾಣೆಯ ಪಿಎಸ್ಐ ನವೀನ್, ಪಿಎಸ್ಐ ಗಳಾದ ಕಸ್ತೂರಿ, ಕೃಷ್ಣಪ್ಪ, ಖತೀಜ ಸೇರಿದಂತೆ ಇನ್ನಿತರರಿದ್ದರು.

RELATED ARTICLES
- Advertisment -spot_img

Most Popular