Monday, November 25, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೊಟ್ಟ ಮಾತು ಉಳಿಸಿಕೊಳ್ಳಲಿ ಕಾಡಾನೆ ಹಾವಳಿ ಸಂತ್ರಸ್ಥರ...

ಸಕಲೇಶಪುರ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೊಟ್ಟ ಮಾತು ಉಳಿಸಿಕೊಳ್ಳಲಿ ಕಾಡಾನೆ ಹಾವಳಿ ಸಂತ್ರಸ್ಥರ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಜೊತೆ ಸಭೆ ನೆಡೆಸುವಂತೆ ಒತ್ತಾಯ ಕಾಡಾನೆ ದಾಳಿಗೆ ಮನು ಸಾವಿಗೀಡಾದಾಗ ರಾತ್ರಿ 12 ಗಂಟೆಗೆ ದೂರವಾಣಿ ಮೂಲಕ ಮಾತು ಕೊಟ್ಟಿದ್ದ ಮುಖ್ಯಮಂತ್ರಿ. ಪ್ರತಿಭಟನೆಗೆ ಮುಂದಾಗುವ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಬಂದಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಮುಂದಾಗಿದೆ ಎಂಬ ವದಂತಿ ಎಲ್ಲಾ ಕಡೆ ಹಬ್ಬಿದೆ.

ಸಕಲೇಶಪುರ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೊಟ್ಟ ಮಾತು ಉಳಿಸಿಕೊಳ್ಳಲಿ

ಕಾಡಾನೆ ಹಾವಳಿ ಸಂತ್ರಸ್ಥರ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಜೊತೆ ಸಭೆ ನೆಡೆಸುವಂತೆ ಒತ್ತಾಯ

ಕಾಡಾನೆ ದಾಳಿಗೆ ಮನು ಸಾವಿಗೀಡಾದಾಗ ರಾತ್ರಿ 12 ಗಂಟೆಗೆ ದೂರವಾಣಿ ಮೂಲಕ ಮಾತು ಕೊಟ್ಟಿದ್ದ ಮುಖ್ಯಮಂತ್ರಿ.

ಪ್ರತಿಭಟನೆಗೆ ಮುಂದಾಗುವ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಬಂದಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಮುಂದಾಗಿದೆ ಎಂಬ ವದಂತಿ ಎಲ್ಲಾ ಕಡೆ ಹಬ್ಬಿದೆ.

ಸಕಲೇಶಪುರ : 4-5 ದಶಕಗಳಿಂದ ಮಲೆನಾಡಿನ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಗಳಲ್ಲಿ ಕಾಡಾನೆ ಹಾವಳಿ ಪ್ರಮುಖವಾದದ್ದು.

ಈ ನಿಟ್ಟಿನಲ್ಲಿ ಇದುವರೆಗೂ ಸಾಕಷ್ಟು ಪ್ರತಿಭಟನೆಗಳು ಹೋರಾಟಗಳು ನಡೆದಿವೆ ಆದರೂ ಸಹ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಯಾವುದೇ ಆಶಾಭಾವನೆಗಳು ಇದುವರೆಗೂ ಮೂಡಿಲ್ಲ.

ಕಳೆದೆ ತಿಂಗಳು ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಯುವ ರೈತ ಮನು ಮೃತಪಟ್ಟಾಗ ಕಾಡಾನೆ ಹಾವಳಿ ಸಂತೃಸ್ತ ಸಮಿತಿ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದೆವು. ಇದರ ಫಲವಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ದೂರವಾಣಿ ಮೂಲಕ ಪ್ರತಿಭಟನೆಕಾರರಿಗೆ ಕರೆ ಮಾಡಿ ಶೀಘ್ರದಲ್ಲಿ ಸಕಲೇಶಪುರಕ್ಕೆ ಬಂದು ಅಲ್ಲಿನ ಹೋರಾಟಗಾರರು ರೈತರು ಜೊತೆ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸಭೆಯನ್ನು ನಡೆಸುತ್ತೇನೆ ಎಂದು ಮಾತು ಕೊಟ್ಟಿದ್ದರಿಂದ ಪ್ರತಿಭಟನಾಕಾರರು ಆಹೋರಾತ್ರಿ ಪ್ರತಿಭಟನೆಯನ್ನು ಹಿಂಪಡೆದಿದ್ದರು.

ಇದೀಗ ಡಿಸೆಂಬರ್ 13ರಂದು ಭಾರತೀಯ ಜನತಾ ಪಾರ್ಟಿಯ ಜನ ಸಂಕಲ್ಪ ಯಾತ್ರೆಯ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳು ಇಲ್ಲಿನ ರೈತರು ಹೋರಾಟಗಾರರು ಹಾಗೂ ಕಾಫಿ ಬೆಳೆಗಾರರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸುವ ಕುರಿತು ಈ ಕುರಿತಂತೆ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲದಿದ್ದರಿಂದ ಕಾಡಾನೆ ಹಾವಳಿ ಸಂತೃಸ್ಥರ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲು ಸಜ್ಜುಗೊಂಡಿದೆ.

ಈ ಕುರಿತಂತೆ ಗುರುವಾರ ರಾತ್ರಿ ಸಂಘಟಕರು ಸಹಾಯಕ ಪೊಲೀಸ್ ಅಧಿಕ ಮಿಥುನ್, ವೃತ ನಿರೀಕ್ಷಕ ಚೈತನ್ಯ, ಹಾಗೂ ಪಿ ಎಸ್ ಐ ಬಸವರಾಜ್ ಜೊತೆ ಸಮಾಲೋಚನೆ ನಡೆದಿದ್ದು ಶಾಂತಿಯುತವಾಗಿ ಧರಣಿ ನಡೆಸುವ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆಯಲು ಅನುಮತಿ ನೀಡಬೇಕೆಂದು ಪತ್ರವನ್ನು ನೀಡಿದ್ದಾರೆ.

ಈ ಸಂಧರ್ಭದಲ್ಲಿ ಕಾಡಾನೆ ಹಾವಳಿ ಸಂತ್ರಸ್ತ ಸಮಿತಿಯ ಮುಖಂಡ ಎಡೆಹಳ್ಳಿ ಆರ್ ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಆರ್ ಎಸ್ ದಿನೇಶ್, ಕರವೇ ಸ್ವಾಭಿಮಾನಿ ಸೇನೆಯ ಜಾನೆಕೆರೆ ಸಾಗರ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ರಮೇಶ್ ಪೂಜಾರಿ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular