ಮೂರು ತಿಂಗಳ ಹಿಂದೆ ಕ್ಷೇತ್ರ ಶಾಸಕ ಎಸ್ ಕೆ ಕುಮಾರಸ್ವಾಮಿ ಉದ್ಘಾಟನೆ ಮಾಡಿದ ಕಸ ವಿಲೇವಾರಿ ಘಟಕ
ಪ್ರಮುಖ ಪ್ರವಾಸಿ ತಾಣ ಹೊಂದಿರುವ ವನಗೂರು ಕೂಡ ರಸ್ತೆ ವೃತ್ತದ ಪ್ರಮುಖ ರಸ್ತೆಯಲ್ಲಿ ತೆರವುಗೊಳಿಸದ ಕಸದ ರಾಶಿ
ಕೂಡ ರಸ್ತೆ ವೃತ್ತದಲ್ಲಿ ಕಸದ ಬುಟ್ಟಿ ಹಿಡಿದು ಗ್ರಾಮಸ್ಥರ ಪ್ರತಿಭಟನೆ
ಉದ್ಘಾಟನೆಗೊಂಡು ಮೂರು ತಿಂಗಳು ಕಳೆದರೂ ಕೆಲಸ ಮಾಡದ ವನಗೂರು ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಘಟಕ ಗ್ರಾಮಸ್ಥರ ಪ್ರತಿಭಟನೆ… ವಿನಯ್ ಕೂಡ ರಸ್ತೆ
ಸಕಲೇಶಪುರ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿರುವ ವನಗೂರು ಗ್ರಾಮ ಪಂಚಾಯಿತಿ ವೃತ್ತದಲ್ಲಿ ಪಶಿಮ ಘಟ್ಟದ ಜನರ ಅನುಕೂಲಕ್ಕಾಗಿ ಮೂರು ತಿಂಗಳ ಹಿಂದೆ ಸಕಲೇಶಪುರ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಉದ್ಘಾಟನೆ ಮಾಡಿದ ವನ ಗೂರು ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಘಟಕ ವನಗೂರು ಗ್ರಾಮ ಪಂಚಾಯಿತಿ ನಿರ್ಲಕ್ಷದಿಂದ ಕಸ ವಿಲೇವಾರಿ ಆರಂಭಿಸದೆ ತಟಸ್ಥವಾಗಿರುವುದು ಸುತ್ತಮುತ್ತಲಿನ ನೂರಾರು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ
ಮೂರು ತಿಂಗಳಿಂದ ಗ್ರಹಣ …..ಕಳೆದ ಅಕ್ಟೋಬರ್ ನಲ್ಲಿ ನೂರಾರು ಸಾರ್ವಜನಿಕರ ಮುಂದೆ ಶಾಸಕರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಕಸ ವಿಲೇವಾರಿ ಘಟಕ ಉದ್ಘಾಟನೆ ಮಾಡಿ ಸಾರ್ವಜನಿಕ ಕಾರ್ಯಕ್ರಮ ಮಾಡಿದ್ದರು ಶಾಸಕರು ಉದ್ಘಾಟನೆ ಮಾಡಿ ಮೂರು ತಿಂಗಳು ಕಳೆದರೂ ಕಸ ಸಂಗ್ರಹ ವಿಲೇವಾರಿ ಯಾವುದೇ ಕೆಲಸ ನಡೆಯುತ್ತಿಲ್ಲ
ಕಸ ಸಂಗ್ರಹ ಬಕೆಟ್ ಕಾಟ್ಯಾಚಾರಕ್ಕೆ ಹಂಚಿಕೆ ….ಈ ಭಾಗದಲ್ಲಿ ಅತಿ ಹೆಚ್ಚು ಪ್ರವಾಸಿಗರು ಶನಿವಾರ ಮತ್ತು ಭಾನುವಾರ ಬರುವುದರಿಂದ ಎಲ್ಲೆಂದರಲ್ಲಿ ಕಸ ಬಿಸಾಕುವುದರಿಂದ ವನ ಗೂರು ಸುತ್ತಮುತ್ತ ಅಂಗಡಿಯ ಹೋಟೆಲ್ ಬೇಕರಿ ಹಾಗೂ ಮನೆಗಳಿಗೆ ಕಸ ಸಂಗ್ರಹಣೆ ಮಾಡಲು ಬಕೆಟ್ ಗಳನ್ನು ನೀಡಲಾಗಿದ್ದು ನಿಯಮದ ಪ್ರಕಾರ ಒಣ ಕಸ ಹಸಿ ಕಸ ಸಂಗ್ರಹಣೆ ಮಾಡಲು ಎರಡು ಬಕೆಟ್ಗಳನ್ನು ನೀಡಬೇಕಾಗಿರುವ ಪಂಚಾಯಿತಿ ವತಿಯಿಂದ ಕಾಟಚರಕ್ಕೆ ಒಂದು ಬಕೆಟ್ ಅನ್ನು ನೀಡಲಾಗಿದೆ ಕೆಲವರ್ತಕರಿಗೆ ಹಾಗೂ ಮನೆಗಳಿಗೆ ಇನ್ನೂ ಕಸ ಸಂಗ್ರಹಣೆ ಬಕೆಟ್ ನೀಡಲಾಗಿಲ್ಲ
ಕಸ ಸಂಗ್ರಹ ವಾಹನ ಬರುತ್ತಿಲ್ಲ …ಗ್ರಾಮದ ವರ್ತಕರು.ಹಾಗೂ ಮನೆಯಿಂದ ಕಸ ಸಂಗ್ರಹಣೆ ಮಾಡಬೇಕಾದ ಸುಮಾರು 5 ಲಕ್ಷ ರೂ ವೆಚ್ಚದ ಕಸ ಸಂಗ್ರಹ ವಾಹನ ಪಂಚಾಯಿತಿ ಮುಂದೆ ನಿಂತಿದ್ದು ಕಸ ಸಂಗ್ರಹಣೆಗೆ ಬರುತ್ತಿಲ್ಲ .ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳನ್ನು ಕಾರಣ ಕೇಳಿದರೆ ಚಾಲಕ ಇಲ್ಲ ಎಂಬ ಕಾಟಾಚಾರದ ಉತ್ತರ ಪಂಚಾಯಿತಿ ಅಧಿಕಾರಿಗಳು ನೀಡುತ್ತಾರೆ
ಗಬ್ಬು ನಾರುತ್ತಿರುವ ಪ್ರಮುಖ ರಸ್ತೆಗಳು …..ಗ್ರಾಮದ ಬಿಸಿಲೆ ರಸ್ತೆ ಶನಿವಾರ ಸಂತೆ ರಸ್ತೆಗಳಲ್ಲಿಇರುವ ಕಸ ಸಂಗ್ರಹ ಗುಂಡಿಗಳಿಗೆ ಸಾರ್ವಜನಿಕರು ಕಸ ಬಿಸಾಕಿದ್ದು ಕಳೆದ ನಾಲ್ಕು ತಿಂಗಳಿನಿಂದ ಕಸ ವಿಲೇವಾರಿ ಆಗದೆ ರಸ್ತೆಯಲ್ಲಿ ಸಂಚರಿಸುವ ನೂರಾರು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಉಂಟಾಗಿದೆ
ಗ್ರಾಮಸ್ಥರ ಪ್ರತಿಭಟನೆ ….ಸಮಸ್ಯೆ ಗಂಭೀರವಾಗಿದ್ದರು ಈ ಭಾಗದಲ್ಲಿ ನೂರಾರು ಪ್ರವಾಸಿಗರು ಆಗಮಿಸುವ ಪ್ರಮುಖ ರಸ್ತೆ ತುಂಬಾ ಕಸದ ರಾಶಿ ಇದ್ದು ತೆರವುಗೊಳಿಸುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ವನಗೂರು ಕೂಡ ರಸ್ತೆ ವೃತ್ತದಲ್ಲಿ ಸಾರ್ವಜನಿಕರು ಪಂಚಾಯಿತಿ ನೀಡಿರುವ ಖಾಲಿ ಕಸದ ಬಕೆಟ್ ಹಿಡಿದು ಪ್ರತಿಭಟನೆ ಮಾಡಿ.ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು ಒಟ್ಟಾರೆ ವನಗೂರು ಪಂಚಾಯಿತಿ ನಿರ್ಲಕ್ಷದಿಂದ ಲಕ್ಷಾಂತರ ರೂ ಖರ್ಚು ಮಾಡಿ ಮಾಡಿ ಉದ್ಘಾಟನೆಗೊಂಡ ಕಸ ವಿಲೇವಾರಿ ಘಟಕ ಯಾವುದೇ ಕೆಲಸ ಮಾಡುತ್ತಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಕೂಡಲೇ ಸಮಸ್ಯೆ ಬಗ್ಗೆ ಹರಿಸಬೇಕೆಂದು ವನ ಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮ್ಯಾಗಡಹಳ್ಳಿ ರಾಜು ಆಗ್ರಹಿಸಿದ್ದಾರೆ …
ಹೇಳಿಕೆ ….1)ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಿರುವ ಗುತ್ತಿಗೆದಾರರಿಗೆ ಕಟ್ಟಡ ಕೆಲಸ ಮಾಡಿದ ಹಣ ಸರ್ಕಾರದಿಂದ ಬಿಡುಗಡೆ ಆಗಿರಲಿಲ್ಲ ಆದ್ದರಿಂದ ಪಂಚಾಯಿತಿಗೆ ಕಸ ವಿಲೇವಾರಿ ಘಟಕದ ಬೀಗ ಗುತ್ತಿಗೆದಾರರು ನಮಗೆ ನೀಡಿರಲಿಲ್ಲ ಈ ಬಗ್ಗೆ ಗುತ್ತಿಗೆದಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗಿದೆ ಸತೀಶ್ ಬಿಸ್ಲೆ ವ ನಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು
ಹೇಳಿಕೆ :ಕೆಲವು ತಾಂತ್ರಿಕ ಕಾರಣಗಳಿಂದ ಸಮಸ್ಯೆ ಉಂಟಾಗಿದ್ದು ಇನ್ನೆರಡು ದಿನಗಳಲ್ಲಿ .ಕಸ ವಿಲೇವಾರಿ ಘಟಕ ಕಾರ್ಯ ಆರಂಭ ಮಾಡಲಿದೆ .
ಎಚ್ ಕೆ ಕುಮಾರಸ್ವಾಮಿ ಕ್ಷೇತ್ರ ಶಾಸಕರು