ಸರ್ಕಾರಿ ನೌಕರರ ಸಂಘದ ಕಟ್ಟಡ ದುರಸ್ತಿಗೆ ಅನುದಾನ ಬಿಡುಗಡೆಗೆ ಸಕಲೇಶಪುರ ತಾಲೂಕು ಸರ್ಕಾರಿ ನೌಕರರ ಸಂಘ ಸಂಸದ ಪ್ರಜ್ವಲ್ ರೇವಣ್ಣರವರಿಗೆ ಮನವಿ
ಸಕಲೇಶಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಸಕಲೇಶಪುರ ತಾಲ್ಲೂಕು ಶಾಖೆಯು ನಗರದ ಹೃದಯ ಭಾಗದಲ್ಲಿ ಕಟ್ಟಡವನ್ನು ಹೊಂದಿದ್ದು, ಕಟ್ಟಡವು ಅತಿವೃಷ್ಟಿಯ ಕಾರಣದಿಂದಾಗಿ ಮಳೆಗಾಲದಲ್ಲಿ ಸೋರುತ್ತಿದೆ.,
ದೊಡ್ಡ ಪ್ರಮಾಣದ ದುರಸ್ತಿ ಯಾಗಬೇಕೆರುವುದರಿಂದ ತಾವುಗಳು ಯಾವುದಾದರೂ ಅನುದಾನದಲ್ಲಿ ಸಂಘದ ಕಟ್ಟಡ ದುರಸ್ತಿಗೆ ರೂ ಐದು ಲಕ್ಷ ರೂಗಳನ್ನು ಒದಗಿಸಿಕೊಡಬೇಕೆಂದು ಸಂಸದ ಪ್ರಜ್ಬಲ್ ರೇವಣ್ಣರವರಿಗೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿ ಗಿರೀಶ್ ಮನವಿ ಸಲ್ಲಿಸಿದ್ದಾರೆ.