ಸಕಲೇಶಪುರ: ಹಾನುಬಾಳ್ ರೋಟರಿ ಘಟಕವು ನಿರಂತರವಾಗಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ರೋಟರಿ ಕ್ಲಬ್ ಹಾನುಬಾಳ್ ಘಟಕದ ಅಧ್ಯಕ್ಷ ಜಿ.ವಿ ಅನಿಲ್ ಕುಮಾರ್ ಹೇಳಿದರು.
ತಾಲೂಕಿನ ಹಾನುಬಾಳ್ ರೋಟರಿ ಸಮುದಾಯ ಭವನದಲ್ಲಿ ರೋಟರಿ ಸಂಸ್ಥೆ ಹಾಗೂ ಇನ್ನರ್ ವೀಲ್ ಸಂಸ್ಥೆ ಹಾನುಬಾಳ್ ಹಾಗೂ ಮಂಗಳೂರಿನ ಪಾಧರ್ ಮುಲ್ಲರ್ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದು ಗ್ರಾಮೀಣ ಭಾಗಗಳಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲದ ಕಾರಣ ಜನರು ಉತ್ತಮ ಚಿಕಿತ್ಸೆ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಹಾನುಬಾಳ್ ರೋಟರಿ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ರೋಟರಿ ಹಾನುಬಾಳ್ ಘಟಕದ ಕಾರ್ಯದರ್ಶಿ ಸಂದೇಶ್ ಕೀರ್ತಿ ಮಾತನಾಡಿ ಮಾತನಾಡಿ ಜನರ ಅನುಕೂಲಕ್ಕಾಗಿ ಮಕ್ಕಳು, ಶಸ್ತ್ರ ಚಿಕಿತ್ಸೆ,ಮೂಳೆ, ಕಣ್ಣು, ಚರ್ಮ ರೋಗಗಳ ತಜ್ಞ ವೈದ್ಯರುಗಳಿಂದ ಆರೋಗ್ಯ ತಪಾಸಣೆ ನಡೆಸಲಾಗಿದ್ದು ಸುಮಾರು 400ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದಿದ್ದಾರೆ ಎಂದರು.ಹಾರ್ಲೆ ಎಸ್ಟೇಟ್ ಮಾಲಿಕರಾದ ಶಂಕರ್, ಪೂರ್ಣೇಶ್ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು. ಈ ಸಂಧರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ಓಂಕಾರ್, ಖಚಾಂಚಿ ಧನಂಜಯ್, ವಲಯ ಸೇನಾನಿ ಗಣೇಶ್, ಭೂಷಣ್ ಗಾಣದ ಹೊಳೆ ಇನ್ನರ್ ವೀಲ್ ಅಧ್ಯಕ್ಷೆ ವೈಷ್ಣವಿ ಮದನ್, ಕಾರ್ಯದರ್ಶಿ ಕವಿತ ರತ್ನಾಕರ್ ಸೇರಿದಂತೆ ಇತರರು ಹಾಜರಿದ್ದರು.