ಸಕಲೇಶಪುರ: ಪಟ್ಟಣದ ಜಾತ್ರೆ ಮೈದಾನದಲ್ಲಿ ಕಾಡು ಜಾತಿಯ ಹಲವು ಮರಗಳಿದ್ದು ಸಾರ್ವಜನಿಕರಿಗೆ ನೆರಳು ನೀಡುವುದಲ್ಲದೆ ಉತ್ತಮ ಗಾಳಿಯನ್ನು ಸಹ ನೀಡುತ್ತಿದ್ದರಿಂದ ಮೈದಾನದ ಸುತ್ತಮುತ್ತ ಇರುವ ಗ್ಯಾರೇಜ್ ಗಳ ಕಾರ್ಮಿಕರಿಗೆ ಬಹಳ ಅನುಕೂಲವಾಗಿತ್ತು. ಆದರೆ ಪಟ್ಟಣ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸ್ಥಳವನ್ನು ಪುರಸಭೆ ಸರಿಯಾಗಿ ಗುರುತಿಸದ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಜಾತ್ರೆ ಮೈದಾನದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ಇದರಿಂದ ದುರ್ನಾತ ಹೊರಬರುತ್ತಿದ್ದು ಮೈದಾನದ ಸುತ್ತಮುತ್ತಲಿನ ಗ್ಯಾರೇಜ್ ಗಳ ಮಾಲಿಕರಿಗೆ ಅಲ್ಲದೆ ಪಕ್ಕದ ಸುಭಾಷ್ ಮೈದಾನದಲ್ಲಿಕ್ರೀಡೆಯಾಡುವ ಕ್ರೀಡಾಪಟುಗಳಿಗೂ ಸಹ ತೊಂದರೆಯಾಗಿದೆ. ಕಸದಲ್ಲಿ ಹುಟ್ಟುವ ಕ್ರಿಮಿ ಕೀಟಗಳು ನಾಲ್ಕು ಮರಗಳನ್ನು ತಿಂದು ಹಾಕಿದ್ದು ಈ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ಪಟ್ಟಣದ ಅರಣ್ಯ ಇಲಾಖೆಗೆ ಪುರಸಭೆ ವಿರುದ್ದ ದೂರು ದಾಖಲಿಸಿರುವುದಲ್ಲೆ ಮರಗಳ ಮೇಲೆ ಪಾಪಿಗಳೆ ಕೊಂದು ಬಿಟ್ಟಿರಲ್ಲೋ ನನ್ನನ್ನು ಎಂದು ಬೋರ್ಡ್ ಗಳನ್ನು ಸಹ ಹಾಕಿದ್ದಾರೆ.ವಿಶ್ವ ಮಣ್ಣಿನ ದಿನದಂದೆ ಮಣ್ಣನ್ನು ಮಲೀನಗೊಳಿಸುತ್ತಿರುವ ಪುರಸಭೆ ಆಡಳಿತದ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆಗೆ ದೂರು ನೀಡಿದ ಸಂಧರ್ಭದಲ್ಲಿ ಕ್ರೀಡಾಪಟು ಹಾಗೂ ಯುವ ಕಾಂಗ್ರೆಸ್ ಮುಖಂಡ ನದೀಂ,ಸಮಾಜ ಸೇವಕರುಗಳಾದ ಹೇಮಂತ್ ಗೌಡ, ಕೃಷ್ಣ ಕುಮಾರ್, ಪೃಥ್ವಿ ಶಂಕರ್ ಹಾಜರಿದ್ದರು.