ಎಚ್. ಎಂ ವಿಶ್ವನಾಥ್ ಒಬ್ಬ ಸಮಯ ಸಾಧಕ – ಶಾಸಕ ಎಚ್. ಕೆ ಕುಮಾರಸ್ವಾಮಿ
ಸಕಲೇಶಪುರ : ಮಾಜಿ ಶಾಸಕ ಎಚ್ ಎಮ್ ವಿಶ್ವನಾಥ್ ರವರು ಕೆಲ ಸಂಧರ್ಭಗಳಲ್ಲಿ ಎರಡು ಮುಖಗಳ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಮಠಸಾಗರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಕಾಡಾನೆ ಸಮಸ್ಯೆ ವಿರುದ್ದ ಕ್ಷೇತ್ರದ ಜನರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನ ನಡೆಸುತ್ತಿರುವ ಸಂದರ್ಭದಲ್ಲಿ ಸ್ಥಳಕ್ಕೆ ಹೋಗಿ ಜನರ ಅಹವಾಲು ಸ್ವೀಕರಿಸುವುದು ಮತ್ತು ಜನರೊಂದಿಗೆ ನಿಲ್ಲುವುದು ಶಾಸಕನಾದವನ ಆದ್ಯ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ನಾನು ವಳಲಹಳ್ಳಿ ಕೂಡಿಗೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ ಅದೇ ರೀತಿ ಮಾಜಿ ಶಾಸಕ ಎಚ್. ಎಂ ವಿಶ್ವನಾಥ್ ಪಾಲ್ಗೊಳ್ಳುವುದು ಮಾಜಿ ಶಾಸಕನಾಗಿ ಅವರ ಕರ್ತವ್ಯವಾಗಿದೆ, ಈ ನಡುವೆ ಮಾಜಿ ಶಾಸಕರು ನನ್ನನ್ನು ಕುರಿತು ಚಳುವಳಿ ಹೋರಾಟದಲ್ಲಿ ಪಾಲ್ಗೊಳ್ಳುವುದು ನಿಮ್ಮ ಕೆಲಸವಲ್ಲ ನಿಮಗೆ ಇಲ್ಲಿ ಏನು ಕೆಲಸವೆಂದು ಏರು ಧ್ವನಿಯಲ್ಲಿ ಮಾತನಾಡುವುದು ಒಬ್ಬ ಮಾಜಿ ಶಾಸಕನಿಗೆ ಶೋಭೆ ತರುವುದಿಲ್ಲ ಎಂದು ಹೇಳಿ ತಮ್ಮ ಗೌರವ ಕಡಿಮೆ ಮಾಡಿಕೊಂಡಿದ್ದಾರೆ ಈ ಘಟನೆಯಿಂದ ನನಗೆ ಬೇಸರವಿಲ್ಲ ನನ್ನ ರಾಜಕೀಯ ಜೀವನದಲ್ಲಿ ಇಂತ ಟೀಕೆ ಟಿಪ್ಪಣಿ ನೋಡಿದ್ದೇನೆ ಎಂದು ಟಾಂಗ್ ನೀಡಿದರು.
ಕ್ಷೇತ್ರದ ಸಮಸ್ಯೆಗಳ ಬಗ್ಗೆ ಜನರು ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿದ್ದರೆ ಅದನ್ನು ಸಹ ಶಾಸಕರಲ್ಲಿ ಎಲ್ಲಿ ಎಂದು ಪ್ರಶ್ನೆ ಪಾಲ್ಗೊಂಡರೆ ನಿಮಗೆ ಇಲ್ಲೇನು ಕೆಲಸ ಎಂದು ಕೇಳುತ್ತಾರೆ ಒಟ್ಟಿನಲ್ಲಿ ಮಾಜಿ ಶಾಸಕರಾದ ಎಚ್ ಎಂ ವಿಶ್ವನಾಥ್ ಜನರನ್ನು ಪ್ರಚೋದಿಸುವ ಕೆಲಸ ಮಾಡುವ ಮೂಲಜ ದ್ವಂದ್ವ ನೀತಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು ಕಾಡಾನೆ ಉಪಟಳ ಕೇವಲ ನನ್ನ ಕ್ಷೇತ್ರದಲ್ಲಿ ಸೇರಿದಂತೆ ಪಕ್ಕದ ಚಿಕ್ಕಮಗಳೂರು ನೆರೆಯ ಕೊಡುಗು ಮತ್ತು ಶಿವಮೊಗ್ಗದಲ್ಲಿ ಸಹ ವಿಪರೀತವಾಗಿದೆ, ಆನೆಯ ಉಪಟಳದಿಂದ ದಿನದಿಂದ ದಿನಕ್ಕೆ ಜನ ಹೈರಾನಾಗಿದ್ದಾನೆ. ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಬಿಜೆಪಿ ಪಕ್ಷದ ಶಾಸಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ನೀವು ಪ್ರಶ್ನೆಗಳನ್ನು ಶಾಸಕರಾದ ಅಪ್ಪಚ್ಚು ರಂಜನ್, ಭೂಪಯ್ಯ ಮಾಜಿ ಮುಖ್ಯಮಂತ್ರಿ ನಿಮ್ಮವರೆ ಜೊತೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಇಂಜಿನ್ ಸರಕಾರವಿದೆ, ಆನೆ ಉಪಟಳವನ್ನು ಶಾಶ್ವತವಾಗಿ ಪರಿಹರಿಸಲು ಒತ್ತಾಯಿಸಿ ಈ ಧೈರ್ಯವನ್ನು ತೋರಿಸಿ ಎಂದು ಕುಟುಕಿದರು.
ಕಾಡಾನೆ ಸಮಸ್ಯೆಯನ್ನು ಬಗ್ಗೆ ಹರಿಸುವುದು ಜನಪ್ರಧಿನಿಗಳಾದ ನಮ್ಮೆಲ್ಲರ ಜವಾಬ್ದಾರಿ ಇದೆ. ರೈತ ಬೆಳೆದ ಬೆಳೆ ಕೈಗೆ ಬರುತ್ತಿಲ್ಲ ಈ ನಿಟ್ಟಿನಲ್ಲಿ ನಮ್ಮ ನಿಮ್ಮ ಎಲ್ಲರ ಜವಾಬ್ದಾರಿ ಸಮಸ್ಯೆ ಬಗೆಹರಿಸುವಲ್ಲಿರಬೇಕು ಎಂದು ಹೇಳಿದರು ಸರಕಾರ ಆನೆ ಟಾಸ್ಕ್ ಫೋರ್ಸ್ ನೇಮಿಸಿದೆ ಆದರೆ ಇದಕ್ಕೆ ಈವರೆಗೂ ಯಾವುದೇ ಸಿಬ್ಬಂದಿಗಳನ್ನು ನೇಮಿಸಿಲ್ಲವೆಂದರು. ಮಾಜಿ ಶಾಸಕ ಎಚ್ ಎಮ್ ವಿಶ್ವನಾಥ್ ಯಾವ ಅಜಂಡ ಹಿಡಿದುಕೊಂಡು ಈ ರೀತಿಯಾಗಿ ವರ್ತಿಸುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಪ್ರತಿಭಟನೆಯಲ್ಲಿ ಏಪ್ರಿಲ್ ನಲ್ಲಿ ಚುನಾವಣೆ ಇದೆ ಅಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಚುನಾವಣೆ ಎದುರಿಸಲು ನಾನು ಸಿದ್ದನಾಗಿದ್ದೇನೆ ಜನರ ಆಶೀರ್ವಾದ ಇರುವವರೆಗೂ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು ಮಾಜಿ ಸಚಿವ ಜೆಡಿಎಸ್ ವರಿಷ್ಠರಾದ ಎಚ್ ಡಿ ರೇವಣ್ಣ ರವರು ಸಚಿವರಾಗಿದ್ದಾಗ ಸಹಜವಾಗಿ ಹೆಚ್ಚಿನ ಅನುದಾನಗಳನ್ನು ತಂದು ಅಭಿವೃದ್ಧಿ ಕಾಮಗಾರಿಯನ್ನು ಹೊಳೆನರಸೀಪುರದಲ್ಲಿ ಕೈಗೊಂಡಿದ್ದಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಎಚ್ ಆರ್ ಪಿ, ಎತ್ತಿನಹೊಳೆ ಕಾಮಗಾರಿಯೂ ಹಾಸನಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಇದರ ಅನುದಾನವನ್ನು ಸರಕಾರವು ಹಾಸನ ಕ್ಷೇತ್ರಕ್ಕೆ ಜಾಸ್ತಿ ಕೊಟ್ಟಿರುವುದು ಸತ್ಯ ಈ ರೀತಿಯಾಗಿ ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡುವ ಮೂಲಕ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದರು.