ತಾಲ್ಲೂಕಿನ ಕರಡಿಗಾಲ ಗ್ರಾಮದಲ್ಲಿರು ತೆರದ ಬಾವಿ ಪಾಲು ಬಿದ್ದಿದ್ದು ಕೂಡಲೇ ಈ ಬಾವಿಯನ್ನು ಶುದ್ದೀಕರಣ ಮಾಡಿ ಕೊಡುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ . 150 ಕ್ಕೂ ಹೆಚ್ಚು ಕುಟುಂಬಗಳು ವಾಸ ವಾಗಿರುವ ಕರಡಿಗಾಲ ಗ್ರಾಮದಲ್ಲಿ ಸುಮಾರು 40 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಇದೇ ಬಾವಿ ಯನ್ನು ಅವಲಂಬಿಸಿದ್ದಾರೆ ಆದರೆ ಈ ಬಾವಿಯ ನಿರ್ವಹಣೆ ಯನ್ನು ಮಾಡದೆ ಪಂಚಾಯತಿಯವರು ಜನರ ಜೀವನದ ಜೋತೆ ಚೆಲ್ಲಾಟವಾಡುತಿದ್ದಾರೆ ಎಂದು ಗ್ರಾಮಸ್ಥರು ಆರೊಪಿಸಿದ್ದಾರೆ ಪಿಡಿಒ ಸುರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಳಲಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಬೊಮ್ಮನಕೆರೆ ರೇಣು ಕುಮಾರ್ . ಕರಡಿಗಾಲ ಗ್ರಾಮದ ಕೆ ಎ ರವಿ, ಪರಮೇಶ್ (ದಿವಾಕರ್), ಕರಡಿಗಾಲ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷರಾದ ಚಿದಾನಂದ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮಂಜಮ್ಮ ತಿಪ್ಪೇಸ್ವಾಮಿ, ಕೆ ಎಸ್ ರಮೇಶ್, ಕರಡಿಗಾಲ ಜೆಡಿಎಸ್ ಮುಖಂಡರಾದ ಕೆ ಬಿ ರಘು, ಕೆ. ಆರ್ ಪವನ್ ಹಾಗೂ ಡಿಲಕ್ಸ್ ಬರಿಕೆಳಗ ಪ್ರಕಾಶ್ ಇದ್ದರೂ.