Friday, November 22, 2024
Homeಸುದ್ದಿಗಳುರಾಜ್ಯಕಾಡಾನೆ ಟಾಸ್ಕ್ ಫೋರ್ಸ್ ಗೆ ಅಧಿಕಾರಿಗಳ ನೇಮಕ

ಕಾಡಾನೆ ಟಾಸ್ಕ್ ಫೋರ್ಸ್ ಗೆ ಅಧಿಕಾರಿಗಳ ನೇಮಕ

ಬೆಂಗಳೂರು:ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಆನೆ ಟಾಸ್ಕ್ ಫೋರ್ಸ್ ರಚಿಸಿದ್ದ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಮುಂದಿನ ನಡೆಯಾಗಿ ಅಧಿಕಾರಿಗಳನ್ನು ನೇಮಿಸಿದೆ.

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಸಿದ್ದ ಸಭೆಯಲ್ಲಿ ನಿರ್ಧ ರಿಸಿ, ಸರ್ಕಾರಿ ಆದೇಶ ಹೊರಡಿಸಲಾಗಿತ್ತು. ಹಾಸನ, ಚಿಕ್ಕಮಗಳೂರು, ಮೈಸೂರು, ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಳ ವಾಗಿರುವುದ ರಿಂದ ಇದನ್ನು ತಡೆಗಟ್ಟಲು ಪ್ರತಿ ಜಿಲ್ಲೆಗೊಂದರಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲಿಫಾಂಟ್ ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಅಧಿಕಾರಿಗಳನ್ನು ನೇಮಿಸುವ ಮೂಲಕ ಕಾರ್ಯತತ್ಪರವಾಗಿದೆ. ಅಧಿಕಾರಿಗಳ ನೇಮಕ : ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಾಗಿದ್ದ ಬಿ.ಎಲ್.ಜಿ.ಸ್ವಾಮಿ ಅವರನ್ನು ಎಲೆಫೆಂಟ್ ಟಾಸ್ಕ್ ಫೋರ್ಸ್ ಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ, ಚಿಕ್ಕಮಗಳೂರು ಸಾಮಾ ಜಿಕ ಅರಣ್ಯ ಉಪ ವಿಭಾಗದ ಎಸಿಎಫ್ ಮುದ್ದಣ್ಣ ಅವರನ್ನು ಚಿಕ್ಕಮಗಳೂರು ಎಟಿಎಫ್ ನ ಮೂಡಿಗೆರೆ ಎಸಿಎಫ್ ಗೆ ನಿಯೋಜಿಸಲಾಗಿದೆ.
ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಾಗಿದ್ದ ಎ.ಟಿ.ಪೂವಯ್ಯ ಅವರನ್ನು ಟಾಸ್ಕ್ ಫೋರ್ಸ್ ನ ಕೊಡಗು ಜಿಲ್ಲೆಯ ಮಡಿಕೇರಿ ಕೇಂದ್ರ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮತ್ತು ಮಡಿಕೇರಿ ಸಾಮಾಜಿಕ ಅರಣ್ಯದ ಎಸಿಎಫ್‌ ಕೆ. ಎಸ್.ಚೆಂಗಪ್ಪ ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿಗೆ ಎಸಿಎಫ್‌ ಆಗಿ ನಿಯೋಜಿಸಲಾಗಿದೆ.
ಮೈಸೂರು ಸಾಮಾಜಿಕ ಅರಣ್ಯದ ಡಿಸಿಎಫ್ ಪಿ.ಶ್ರೀಧರ ಅವರನ್ನು ಮೈಸೂರು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಯೋಜಿಸಲಾಗಿದೆ. ಮೈಸೂರು ಉಪವಿಭಾಗದ ಎಸಿಎಫ್ ಆಗಿದ್ದ ಲಕ್ಷ್ಮೀಕಾಂತ್ ಅವರನ್ನು ಮೈಸೂರು ಟಾಸ್ಕ್ ಫೋರ್ಸ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕಾತಿಯಾಗಿದೆ.
ಹಾಸನ ಅರಣ್ಯ ಸಂಚಾರ ದಳದ ಡಿಸಿಎಫ್ ಎನ್.ರವೀಂದ್ರ ಕುಮಾರ್ ಅವರನ್ನು ಹಾಸನ ಜಿಲ್ಲೆಯ ಟಾಸ್ಕ್‌ ಫೋರ್ಸ್ ಗೆ ಡಿಸಿಎಫ್ ಆಗಿ ನಿಯೋಜಿಸಲಾಗಿದೆ. ಹೊನ್ನಾವರ ಉಪ ವಿಭಾಗದಲ್ಲಿ ಎಸಿಎಫ್ ಆಗಿದ್ದ ಜಿ.ಕೆ.ಸುದರ್ಶನ್ ಅವರನ್ನು ಹಾಸನ ಜಿಲ್ಲೆಯ ಸಕಲೇಶಪುರ ಎಸಿಎಫ್ ಆಗಿ ನೇಮಿಸಲಾಗಿದೆ.

ವಲಯ ಅರಣ್ಯಾಧಿಕಾರಿ ಒಬ್ಬರು, ಉಪ ವಲಯ ಅರಣ್ಯಾಧಿಕಾರಿ 4, 8 ಜನ ಅರಣ್ಯ ರಕ್ಷಕರು ಮತ್ತು 32 ಜನ ಹೊರಗುತ್ತಿಗೆ ಸಿಬ್ಬಂದಿಗೆ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಚಿಕ್ಕಮಗಳೂರು ಉಪ ಸಂರಕ್ಷಣಾಧಿಕಾರಿಗಳನ್ನು ಇನ್ನೆಲ್ಲರೂ ಪ್ರಭಾರವಾಗಿ ಅಧಿಕಾರವನ್ನು ನಿರ್ವಹಿಸಬೇಕಾಗಿದೆ ಎಂದು ಆದೇಶ ಹೊರಡಿಸಲಾಗಿದೆ.

*ಟಾಸ್ಕ್ ಫೋರ್ಸ್ ಕೆಲಸ ಏನು?*

ಕಾಡಾನೆ ಹಾವಳಿ ತಡೆಗೆ ಮುಖ್ಯವಾಗಿ ನಾಲ್ಕು ಜಿಲ್ಲೆಗಳಲ್ಲಿ ಈ ಟಾಸ್ಕ್ ಫೋರ್ಸ್ ಕೆಲಸ ಮಾಡಲಿದ್ದು, ಗಸ್ತು ತಿರುವುದು, ಜನವಸತಿ, ಕೃಷಿ ಪ್ರದೇಶ ಹಾಗೂ ಕಾಫಿ ಎಸ್ಟೇಟ್ ಗಳಲ್ಲಿ ಆನೆಗಳ ಚಲನವಲನ ಗುರುತಿಸಿ ಅರಣ್ಯಕ್ಕೆ ಆನೆಗಳನ್ನು ಹಿಮ್ಮೆಟ್ಟಿಸುವುದು, ಹೆಲ್ಫ್ ಲೈನ್ ಮಾಡುವುದು, ಮಾಹಿತಿ ತಿಳಿಸುವುದು ಮುಂತಾದ ಕ್ರಮಗಳನ್ನು ಮಾಡಬೇಕಾಗಿದೆ.

RELATED ARTICLES
- Advertisment -spot_img

Most Popular