Sunday, April 20, 2025
Homeಸುದ್ದಿಗಳುಕೊಪ್ಪಲು ಮಾರಮ್ಮ ದೇವಸ್ಥಾನದಲ್ಲಿ ಅದ್ದೂರಿ ಹಾಗೂ ಸಂಭ್ರಮದಿಂದ ಕಾರ್ತಿಕ ಪೂಜೆ ನೆರವೇರಿಸಲಾಯಿತು.

ಕೊಪ್ಪಲು ಮಾರಮ್ಮ ದೇವಸ್ಥಾನದಲ್ಲಿ ಅದ್ದೂರಿ ಹಾಗೂ ಸಂಭ್ರಮದಿಂದ ಕಾರ್ತಿಕ ಪೂಜೆ ನೆರವೇರಿಸಲಾಯಿತು.

ಸಕಲೇಶಪುರ. ಪಟ್ಟಣದ ಗ್ರಾಮ ದೇವತೆ ಮಹೇಶ್ವರಿ ನಗರ ಬಡಾವಣೆಯಲ್ಲಿರು ಕೊಪ್ಪಲು ಶ್ರೀ ಮಾರಮ್ಮ ದೇವಸ್ಥಾನದಲ್ಲಿ ಮಂಗಳವಾರ ವಿಜೃಂಭಣೆಯಿಂದ ಕಾರ್ತಿಕ ಪೂಜೆ ಹಾಗೂ ದೀಪೋತ್ಸವ ನಡೆಸಲಾಯಿತು.

ಮಂಗಳವಾರ ಬೆಳಿಗ್ಗೆ ದೇವಸ್ಥಾನದ ಪ್ರದಾನ ಅರ್ಚಕರಾದ ರಾಮ್ ಪ್ರಸಾದ್ ರವರ ನೇತೃತ್ವದಲ್ಲಿ ದೇವಿಗೆ ದುರ್ಗಾಹೋಮ ಮಾಡಲಾಯಿತು. ನಂತರ ಮಾರಮ್ಮ ದೇವಿಗೆ ನೂತನವಾಗಿ ಬೆಳ್ಳಿ ಹಾಗೂ ಕಂಚಿನ ಕವಚ ಧರಿಸಿ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು.


ಸಂಜೆ ಅಮ್ಮ ನವರಿಗೆ ದೀಪೋತ್ಸವ ಕಾರ್ತಿಕ ಪೂಜೆ ನೆರವೇರಿಸಲಾಯಿತು ಈ ಎಲ್ಲಾ ಪೂಜಾ ಕಾರ್ಯಗಳಿಗೆ ಭಕ್ತಾದಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಸಂತೊಷ,ಕಾರ್ಯದರ್ಶಿ ಮೊಹನ್ ಕುಮಾರ, ವಿರೂಪಾಕ್ಷ,ರವಿ,ರೆವಣ್ಣ ಗೀರಿಶ್, ರಮೇಶ್ ಹಾಗೂ ಮಹೇಶ್ವರಿ ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

RELATED ARTICLES
- Advertisment -spot_img

Most Popular