ಸಕಲೇಶಪುರ : ತಾಲೂಕಿನ ಬ್ಯಾಕರ ವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಬ್ಬಡಿ ಗ್ರಾಮದ ಹಿರಿತಲೆ ದಿವಂಗತ ಪಟೇಲ್ ಮಲ್ಲೆಗೌಡರ ಧರ್ಮ ಪತ್ನಿ ಮಲ್ಲಮ್ಮನವರು ನಿಧನರಾಗಿದ್ದಾರೆ. ಗ್ರಾಮದ ಕಾಫಿ ಬೆಳೆಗಾರ ಚಂದ್ರಶೇಖರ್ ರವರ ತಾಯಿಯಾಗಿದ್ದು, ಇವರ ಅಂತ್ಯ ಕ್ರಿಯೆಯನ್ನು ನಾಳೆ ಇಬ್ಬಡಿಯಲ್ಲಿ ನಡೆಸಲಾಗುತ್ತದೆ ಎಂದು ಅವರ ಮೊಮ್ಮಗ ಚೇತನ್ ತಿಳಿಸಿದ್ದಾರೆ.