Saturday, November 23, 2024
Homeಸುದ್ದಿಗಳುಸಕಲೇಶಪುರಗುಹೆಕಲ್ಲಮ್ಮ ದೇವಸ್ಥಾನದಲ್ಲಿ ಅದ್ದೂರಿಯ ಕಾರ್ತೀಕ ಮಹೋತ್ಸವ

ಗುಹೆಕಲ್ಲಮ್ಮ ದೇವಸ್ಥಾನದಲ್ಲಿ ಅದ್ದೂರಿಯ ಕಾರ್ತೀಕ ಮಹೋತ್ಸವ


ಸಕಲೇಶಪುರ: ಪಟ್ಟಣದ ರಾಘವೇಂದ್ರ ನಗರ ಬಡಾವಣೆಯಲ್ಲಿರುವ ಗುಹೆಕಲ್ಲಮ್ಮ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಕಾರ್ತೀಕ ಮಹೋತ್ಸವ ಆಚರಿಸಲಾಯಿತು. ಗುಹೆ ಕಲ್ಲಮ್ಮ ದೇವರಿಗೆ ವಿಶೇಷ ಪೂಜೆ ವಿಧಿವಿಧಾನಗಳು ದೇವಸ್ಥಾನದ ಪ್ರಧಾನ ಅರ್ಚಕ ರವಿಶಾಸ್ತ್ರೀ ನೇತೃತ್ವದಲ್ಲಿ ನಡೆಯಿತು. ಮೊದಲಿಗೆ ಹೇಮಾವತಿ ನದಿಯಿಂದ ಗಂಗೆಯನ್ನು ಮೆರವಣಿಗೆಯಲ್ಲಿ ತಂದು ನಂತರ ಪೂಜಾವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಾವಿರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು , ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕವಾಗಿ ಅಚ್ಚುಕಟ್ಟಾಗಿ ಪ್ರಸಾದ ನೀಡಲಾಯಿತು. ಈ ಸಂಧರ್ಭದಲ್ಲಿ ಗುಹೆಕಲ್ಲಮ್ಮ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ರಮೇಶ್,ಕಾರ್ಯದರ್ಶಿ ದಿವಾಕರ್, ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ಲೋಕೇಶ್ , ಪುರಸಭಾ ಸದಸ್ಯರುಗಳಾದ ಮುಖೇಶ್ , ಪ್ರದೀಪ್, ಮೋಹನ್ ಸೇರಿದಂತೆ ಇತರರು ಹಾಜರಿದ್ದರು. ಶಾಸಕ ಎಚ್.ಕೆ ಕುಮಾರಸ್ವಾಮಿ ಹಾಗೂ ಅವರ ಧರ್ಮಪತ್ನಿ ಚಂಚಲಾ ಕುಮಾರಸ್ವಾಮಿ ಸಹ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

RELATED ARTICLES
- Advertisment -spot_img

Most Popular