ವೀರಶೈವ ಲಿಂಗಾಯತ ಐಕ್ಯತೆಗೆ ಕಾಂಗ್ರೆಸ್ ಗುನ್ನ – ಜೆ. ಸಿ ಮಾಧುಸ್ವಾಮಿ
ಬೇಲೂರು: ರಾಜ್ಯದಲ್ಲಿ ಚುನಾವಣೆ ಸಮೀಪವಾದಂತೆ ಕಾಂಗ್ರೆಸ್ ವೀರಶೈವ ಲಿಂಗಾಯತ ಅಸ್ತ್ರವನ್ನು ಪ್ರಯೋಗಿಸುವ ರಾಜಕೀಯ ನಡೆಯುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲ್ ವೀರಶೈವ ಲಿಂಗಾಯತರ ಐಕ್ಯತೆಗಯನ್ನು ಒಡೆದ ಬಗ್ಗೆ ಸಮುದಾಯದ ಇನ್ನೂ ಮರೆತಿಲ್ಲ,
ವೀರಶೈವ ಲಿಂಗಾಯತ ಜನಾಂಗವನ್ನು ಒಟ್ಟಿಗೆ ತೆಗೆದುಕೊಂಡು ರಾಜಕೀಯ ನಡೆಸುವ ಎದೆಗಾರಿಕೆ ಬಿ.ಎಸ್.ಯಡಿಯೂರಪ್ಪನವರಿಗೆ ಮಾತ್ರವಿದೆ. ವೀರಶೈವ ಲಿಂಗಾಯತರು ಪ್ರಬುದ್ದರು, ಕಾಂಗ್ರೆಸ್ ಹಗಲು ಕನಸು ಕಾಣುತ್ತಿದೆ ಎಂದು ಕರ್ನಾಟಕ ಸರ್ಕಾರದ ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಮಂತ್ರಿ ಜೆ.ಸಿ.ಮಾಧುಸ್ಚಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೇಲೂರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರ ಐದು ವರ್ಷದ ಆಡಳಿತದಲ್ಲಿ ಧರ್ಮ ಒಡೆಯುವ ತಂತ್ರಗಾರಿಕೆಯಿಂದ ಜನತೆ ಅವರನ್ನು ವಿರೋಧ ಪಕ್ಷದಲ್ಲಿ ಕುಳಿರಿಸಿದ್ದನ್ನು ಎಂದಿಗೂ ಮರೆಯಬಾರದು. ಯಾವ ರೀತಿಯಲ್ಲಿ ಧರ್ಮ ವಿರೋಧಿತನ ನಡವಳಿಕೆ ದಾಖಲೆ ರೂಪದಲ್ಲಿ ಉಳಿದಿವೆ ಎಂದ ಅವರು ಕಾಂಗ್ರೆಸ್ ಪಕ್ಷ ಸೋಲಿನ ಭೀತಿಯಿಂದ ಮತದಾರರ ಪರಿಷ್ಕರಣೆಯಲ್ಲಿ ಬಿಜೆಪಿ ಅಕ್ರಮ ಅಡಗಿದೆ ಎಂದು ದಾಖಲೆ ಇಲ್ಲದೆ ಆರೋಪಿಸುತ್ತಾರೆ. ಚುನಾವಣೆ ಆಯೋಗ ಅಯಾ ಕಾಲಕ್ಕೆ ನಡೆಸುವ ಮತದಾರರ ಪರಿಷ್ಕರಣೆ ಅವರ ಕಾಲಘಟ್ಟದಲ್ಲಿ ಜರುಗಿದೆ. ಕಾಂಗ್ರೆಸ್ ಕೆಲವು ಕಡೆ ಅಕ್ರಮ ಮತಗಳು ಎಲ್ಲಿ ಕಳೆದು ಹೊಗುವ ಭೀತಿಯಿಂದ ಮುಖ್ಯಮಂತ್ರಿ ರಾಜೀನಾಮೆ ಕೇಳುವ ಕಾಂಗ್ರೆಸ್ ಪಕ್ಷಕ್ಕೆ ನಾಚೀಕೆಯಾಗಬೇಕು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ ಚುನಾವಣೆ ನಡೆಸಲು ನಾವುಗಳು ಚುನಾವಣೆ ಆಯೋಗದಿಂದ ಕ್ಷೇತ್ರ ಪುರ್ನವಿಂಗಡನೆ ಮತ್ತು ಜನಸಂಖ್ಯೆ ಅಧಾರಿತ ಮೀಸಲಾತಿ ನೀಡಿ ಚುನಾವಣೆ ನಡೆಸಲು ಸರ್ಕಾರ ಸಿದ್ದವಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಒಬಿಸಿ ಮೀಸಲಾತಿ ಪರಿಷ್ಕರಣೆ ಬಳಿಕ ನಡೆಸಲು ಸೂಚನೆ ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ಧಮ್ ಇದ್ದರೆ ನಮಗೆ ಹಿಂದುಳಿದ ವರ್ಗದ ಮೀಸಲಾತಿ ಬೇಡ ಎಂದು ಸಹಿ ಮಾಡಿಕೊಡಲಿ ಎಂದು ಸವಾಲು ಹಾಕಿದರು.
ರಾಜ್ಯ ಸರ್ಕಾರ ಎಸ್ಸಿಗೆ ಶೇ2 ರಷ್ಟು ಮತ್ತು ಎಸ್ಟಿಗೆ ಶೇ 4 ರಷ್ಟು ಮೀಸಲಾತಿ ನೀಡುವ ಮಹತ್ವಪೂರ್ಣ ಕೊಡುಗೆ ನೀಡಿದೆ. ಆದರೆ ಸಿದ್ದರಾಮಯ್ಯ ಇದು ನನ್ನ ಕೊಡುಗೆ ಎಂದು ಹೇಳುವ ಇವರು ನಿಮ್ಮ ಸರ್ಕಾರದ ಅವಧಿಯಲ್ಲಿ ಒಳ ಮೀಸಲಾತಿಗೆ ಹೋರಾಟ ನಡೆಸಿದರೂ ಏಕೆ ಒಳ ಮೀಸಲಾತಿ ನೀಡಲು ಮೀನಾ ಮೇಷ ಎಣಿಸಿದ ಬಗ್ಗೆ ಉತ್ತರ ನೀಡಬೇಕು ಹಾಗೇಯೆ ಎಲ್ಲಾ ನಿರ್ಧಾರಗಳು ನನ್ನ ಕೊಡುಗೆ ನನ್ಙ ಕೊಡುಗೆ ಎನ್ನುವ ಸಿದ್ದರಾಮಯ್ಯ ಗೋಹತ್ಯೆ ನಿಷೇಧ ನಮ್ಮದೆ ಕೊಡುಗೆ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಜನತೆಗೆ ಜನಪರ ಮತ್ತು ಸುಭದ್ರ ಆಡಳಿತ ನೀಡುತ್ತಿದೆ. ಮುಂದಿನ 2023ಕ್ಕೆ 135 ಸ್ಥಾನ ಗಳಿಸುವುದು ಶತಸಿದ್ದವೆಂದರು.