ಸಕಲೇಶಪುರ: ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ .ಎಸ್ .ಯಡಿಯೂರಪ್ಪ ನವರನ್ನು ಬೆಂಗಳೂರಿನಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾ .ಹೆಚ್ .ಟಿ .ಮೋಹನ್ ಕುಮಾರ್ ರವರು ಭೇಟಿಮಾಡಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ವಿವರಿಸಿದರು .
ಗ್ರಾಮೀಣ ಭಾಗದ ಕೃಷಿ ಜಮೀನನ್ನು ಭೂ ಕಬಳಿಕೆ ಕಾಯ್ದೆ ಯಿಂದ ಹೊರಗಿಡುವ ಬಗ್ಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು ,ಇದಕ್ಕಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಶ್ರೀಯುತರಿಗೆ ಹಾಗು ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸ ಲಾಯಿತು ಹಾಗು ಸರ್ಕಾರ ಒತ್ತುವರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಬಗ್ಗೆ ಸದನದಲ್ಲಿ ಬಿಲ್ ಪಾಸ್ ಆಗಿದ್ದು ,ಆದಿನೆನ್ಸ್ ಹೊರಡಿಸುವಂತೆ ತಿಳಿಸಿದಾಗ ಮಾನ್ಯ ಕಂದಾಯ ಸಚಿವರಿಗೆ ತಿಳಿಸುವುದಾಗಿ ಹೇಳಿರುತ್ತಾರೆ .
10 ಹೆಚ್ .ಪಿ ವರೆಗಿನ ವಿದ್ಯುತ್ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಸದನದಲ್ಲಿ ತೀರ್ಮಾನವಾಗಿದ್ದು ,ಕೆಲ ನಿಬಂಧನೆಗಳಿಂದ ಬೆಳೆಗಾರರಿಗೆ ಅನುಕೂಲವಾಗಿಲ್ಲದಿರುವ ಬಗ್ಗೆ ತಿಳಿಸಿದಾಗ ಮಾನ್ಯ ಇಂಧನ ಸಚಿವರಿಗೆ ತಿಳಿಸುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ .
ಮಲೆನಾಡು ಭಾಗದ ಕಾಡಾನೆ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು .ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿ ಹೆಬ್ಬನಹಳ್ಳಿ ಗ್ರಾಮದ ಮನು ರವರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ಮಾನ್ಯ ಮುಖ್ಯಮಂತ್ರಿಯವರು ಸಕಲೇಶಪುರ ಭಾಗಕ್ಕೆ ಕಳುಹಿಸಿಕೊಟ್ಟು ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿರುವುದು ಸರಿಯಷ್ಟೆ .ಆದರೆ ಮುಂದಿನ ಕ್ರಮಗಳ ಬಗ್ಗೆ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ತಿಳಿಸಿದಾಗ ಬಿ .ಎಸ್ .ಯಡಿಯೂರಪ್ಪನವರು ಮಾನ್ಯ ಮುಖ್ಯಮಂತ್ರಿಯವರ ಹತ್ತಿರ ಮಾತನಾಡುವುದಾಗಿ ತಿಳಿಸಿ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ .