Thursday, November 21, 2024
Homeಅಂಕಣಸಂಪೂರ್ಣ ಕಾಡಾನೆ ಸ್ಥಳಾಂತರ ಮಾಡುವವರೆಗೆ.ಕನಿಷ್ಠ ಈ ಕೆಲಸಗಳನ್ನಾದರೂ ಮಾಡಿಕೊಡಿ ಮುಖ್ಯಮಂತ್ರಿಗಳೇ..

ಸಂಪೂರ್ಣ ಕಾಡಾನೆ ಸ್ಥಳಾಂತರ ಮಾಡುವವರೆಗೆ.ಕನಿಷ್ಠ ಈ ಕೆಲಸಗಳನ್ನಾದರೂ ಮಾಡಿಕೊಡಿ ಮುಖ್ಯಮಂತ್ರಿಗಳೇ..

*ಸಂಪೂರ್ಣ ಕಾಡಾನೆ ಸ್ಥಳಾಂತರ ಮಾಡುವವರೆಗೆ.ಕನಿಷ್ಠ ಈ ಕೆಲಸಗಳನ್ನಾದರೂ ಮಾಡಿಕೊಡಿ ಮುಖ್ಯಮಂತ್ರಿಗಳೇ..*

 

ಸಕಲೇಶಪುರ ಆಲೂರು ತಾಲೂಕಿನಲ್ಲಿ 100 ಹೆಚ್ಚು ಕಾಡಾನೆಗಳು ವಿವಿಧ ತಂಡವಾಗಿ ನಿರಂತರ ದಾಳಿಯಿಂದ ಜನಸಾಮಾನ್ಯರು,ಬೆಳೆಗಾರರು, ಕೃಷಿಕರು, ಕೂಲಿಕಾರ್ಮಿಕರು, ಸಾಮಾನ್ಯ ಜನರು,ಬದುಕು ಕಳೆದುಕೊಳ್ಳುತ್ತಿದ್ದಾರೆ. ಎಪ್ಪತ್ತಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ,ಆನೆ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಬಿದ್ದು ಕೈಕಾಲು ಮುರಿದು ಕೊಳ್ಳುತ್ತಿರುವವರು ಮತ್ತು ಕರೆಂಟ್ ಬೇಲಿಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿರುವವರು,

ಭಯಬೀತರಾಗಿ ಓಡುವಾಗ ಪ್ರಜ್ಞೆ ಕಳೆದುಕೊಳ್ಳುತ್ತಿರುವರು ದಿನನಿತ್ಯ ನೋಡುತ್ತಿದ್ದೇವೆ.

ಐವತ್ತಕ್ಕೂ ಹೆಚ್ಚು ಮಂದಿ ಶಾಶ್ವತವಾಗಿ ಅಂಗವಿಕಲರಾಗಿ

ದ್ದಾರೆ. ರಾತ್ರಿ ಸಮಯದಲ್ಲಿ ಮಾತ್ರವಲ್ಲ ಕಾಡಾನೆಗಳ ಭಯ

ದಿಂದ ಹಗಲು ಹೊತ್ತಿನಲ್ಲಿ ಗ್ರಾಮಗಳ ರಸ್ತೆಗಳಲ್ಲಿನ ಸಂಚರಿಸುವುದಕ್ಕೆ,ವಾಹನಗಳಲ್ಲಿ ಓಡಾಡುವುದಕ್ಕೆ ಕೃಷಿ

ಕೆಲಸ ಮಾಡುವುದಕ್ಕೆ ಭಯವಾಗುತ್ತಿದೆ.ದಶಕಗಳಿಂದ ಕಾಡುತ್ತಿರುವ ಈ ಸಮಸ್ಯೆ ಸರ್ಕಾರ ಪರಿಹರಿಸದಿರುವುದು ಖಂಡನೀಯ.

ಕೆಳಗೆ ಸೂಚಿಸಿರುವ ಯಾವುದಾದರೂ ಕೆಲಸಗಳನ್ನು ದಯವಿಟ್ಟು ಮಾಡಿ.

1)ಕಾಡಾನೆಗಳ ಸಂತತಿ ಬಾಳಲಿ ಬೆಳಗಲಿ ಸುರಕ್ಷಿತ ಕಾಡುಗಳಲ್ಲಿ,ಅರಣ್ಯಗಳ ಬದಿಯಲ್ಲಿ ಆಧುನಿಕ ತಂತ್ರಜ್ಞಾನ

ವಿಜ್ಞಾನ ಪದ್ಧತಿ ಅಳವಡಿಸಿ ಇವುಗಳನ್ನು ಕಾಡಿನಲ್ಲಿ ನಿಯಂತ್ರಿಸತಕ್ಕದ್ದು.

2)ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಾಡಾನೆಗಳು ಯಾವ ಗಡಿಭಾಗ ದಿಂದ ಹಳ್ಳಿಗಳಿಗೆ ಬರುವಂತಹ

ಪ್ರದೇಶಗಳನ್ನು ಗುರುತಿಸಿ ತುರ್ತು ಆನೆ ಕಾವಲು ಪಡೆಯನ್ನು ನೇಮಿಸಿ ಅವರಿಗೆ ಯಂತ್ರಗಳನ್ನು ಬಳಸಿ ಮತ್ತು ಇತ್ತೀಚಿನ ಆಧುನೀಕರಣದ ತಂತ್ರಜ್ಞಾನದಂತಹ ನಾಡಿಗೆ ಬರುವುದನ್ನು ಗ್ರಹಿಸುವಂತಹ ಅತ್ಯಾಧುನಿಕ ಯಂತ್ರವನ್ನು ಬಳಸಿ ಪುನಃ ಕಾಡಿಗೆ ಹಿಂದಿರುಗಿಸಲು ಮೀಸಲುಪಡೆ

ರಕ್ಷಣಾ ತಂಡವನ್ನು ನಿರ್ಮಿಸಿ ವಿಶೇಷವಾದ ಉತ್ತಮ ತರಬೇತಿಯನ್ನು ನೀಡಿ, ಕಾರ್ಯಪಡೆ ಸಜ್ಜುಗೊಳಿಸಬೇಕು.

3) ನಾಗರಹೊಳೆ ಅರಣ್ಯದಲ್ಲಿ ಹೇಗೆ ವಿಶೇಷ ತಂಡ ಇದೆ ಅದೇ ರೀತಿ ಸಕಲೇಶಪುರ ಆಲೂರು ತಾಲೂಕಿ

ನಲ್ಲಿ ಕಾಡಾನೆ ದಾಳಿ ತಡೆಗೆ ವಿಶೇಷ ತಂಡ ರಚಿಸಬೇಕು ಸಹಾಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧೀನದಲ್ಲಿ ಒಂದು ವಲಯ ಅರಣ್ಯಾಧಿಕಾರಿಗಳು ಹಾಗು ಸಿಬ್ಬಂದಿಗಳನ್ನು ನಿಯೋಜಿಸಿ ಬಾಳುಪೇಟೆ ಕೇಂದ್ರಸ್ಥಾನವನ್ನಾಗಿ

ಮಾಡಿ ಕೆಲಸ ನಿರ್ವಹಿಸುವಂತಾಗಬೇಕು.

4) ಪ್ರಕೃತಿ ವಿಕೋಪಗಳಿಗೆ ಜಿಲ್ಲಾಧಿಕಾರಿಗಳ ಹಂತದಲ್ಲಿ ವಿಶೇಷ ಹೇಗೆ ಅನುದಾನ ನಿಗದಿಯಾಗಿರುತ್ತದೆ ಅದೇ ರೀತಿ

ಡಿಎಫ್‌ಒ ಅಧಿಕಾರಿಯವರ ನಿಧಿಯಲ್ಲಿ ವಿಶೇಷ ಅನುದಾನ

ನಿಗದಿ ಮಾಡಬೇಕು ಯಾವುದೇ ಸಮಸ್ಯೆ ಆದಾಗ ಒಂದು

ವಾರದಲ್ಲಿ ಅನುದಾನ ಬಿಡುಗಡೆ ಮಾಡುವ ರೀತಿ ಆಯೋಜನೆ ಮಾಡಬೇಕು.

5) ಎಂಟು ಹತ್ತು ಕಂತುಗಳಲ್ಲಿ ಕಟ್ಟುವಂತ ಇನ್ನೂರೆನ್ಸ್

ಸರ್ಕಾರವೇ ನೇರವಾಗಿ ನೀಡಬೇಕು ಯಾವುದೇ ಕಂಪನಿಗೆ

ನೀಡಕೂಡದು

6) ಪರಿಸರವಾದಿಗಳನ್ನು ಮೊದಲು ಬಾಯಿ ಮುಚ್ಚಿಸಿ,

ಕಾಡಾನೆ ಮಾನವ ಸಂಘರ್ಷದ ಸತ್ಯಾಸತ್ಯತೆ ತಿಳಿಯದ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ ಪರಿಸರವಾದಿಗಳು ಎಂದಾದರೂ ನಾಗರಹೊಳೆ ಅರಣ್ಯಕ್ಕೆ ಹೋಗಿ,

ಏನು ಅರಣ್ಯ ಬೆಳೆಯಲಾಗುತ್ತಿದೆ,ನೀರಿನ ವ್ಯವಸ್ಥೆ ಹೇಗಿದೆ ಎಂದು ಒಮ್ಮೆಯಾದರೂ ನೋಡಿದ್ದಾರಾ?

ಆನೆ ಪತ ಅಲ್ಲಿತ್ತು ಇಲ್ಲಿತ್ತು ಅಂತ ಹೇಳುವವರು ಏನು ಆನೆ ಫಥ ಬೆಳಗೋಡು ಹೋಬಳಿಯಲ್ಲಿ

ಇತ್ತಾ ಎಂಬುದು ನಮ್ಮ ಪ್ರಶ್ನೆ.

*ನಮ್ಮ ವೈಫಲ್ಯಗಳು.*

• ನಮ್ಮ ಮತದಲ್ಲಿ ಅಧಿಕಾರ ಅನುಭವಿಸುವವರು ನಮ್ಮ ಮೇಲೆ ಸವಾರಿ ಮಾಡುತ್ತಿರುವುದು ಅರಿವಿಗೆ ಬಾರದಿರುವುದು ಜನಸಾಮಾನ್ಯರ ಬಹುದೊಡ್ಡ

ಪ್ರಜಾಪ್ರಭುತ್ವದ ದುರಂತ,

• ಮರಣ ಹೊಂದಿದ ವ್ಯಕ್ತಿಗೆ ಗೌರವಿತವಾಗಿ ನಡೆಸಿಕೊಳ್ಳುವ ಮಾನವೀಯತೆಯೇ ಅಧಿಕಾರಿಗಳಲ್ಲಿ ಜನಪ್ರತಿನಿಧಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲೂ ಸಹ ಉಳಿದಿಲ್ಲ.

•ರೈತರು ಕಾರ್ಮಿಕರು ಸಂಘಟನೆಯವರು ಒಗ್ಗಟ್ಟು ನಿರಂತರವಾಗಿ ಇಲ್ಲದಿರುವುದು, ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ವರದಾನವಾಗಿದೆ.ಜನಸಾಮಾನ್ಯರು ಎಷ್ಟು ಬೇಗ ಪ್ರತಿಕ್ರಿಯಿಸುತ್ತಾರೆ ಅಷ್ಟೇ ಬೇಗ ಮರೆತುಬಿಡುತ್ತಾರೆ.

• ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶ, ಮಾನವ ಪ್ರಾಣಹಾನಿ,ಶಾಶ್ವತ ಅಂಗವಿಕಲತೆ, ಸಾಕುಪ್ರಾಣಿಗಳ ಪ್ರಾಣ ಹಾನಿ, ಆಸ್ತಿ ಪಾಸ್ತಿ ಹಾನಿ ಗಾಯಗೊಂಡವರಿಗೆ ನೀಡಲಾಗುತ್ತಿರುವ ಪರಿಹಾರದ ಸರ್ಕಾರದ ಸುತ್ತೋಲೆ

ಅವೈಜ್ಞಾನಿಕವಾಗಿದೆ.. ನಮ್ಮ ಕೂಗು ಪರಿಗಣಿಸದೇ ಇರುವುದು ನಮ್ಮ ಒಗ್ಗಟ್ಟಿನ ಶಕ್ತಿ ಕಡಿಮೆ ಇರುವುದು.

– ಕಾಫಿ, ಬಾಳೆ, ಏಲಕ್ಕಿ, ಆಡಿಕೆ, ಭತ್ತದ ಗದ್ದೆಗಳ ಕಾರ್ಯಕ್ಕೆ ಎಷ್ಟು, ಹಣ ವ್ಯಯವಾಗುತ್ತದೆ, ನಾಶವಾದರೆ ಎಷ್ಟು ನಷ್ಟವಾಗುತ್ತದೆ ಎಂಬುದನ್ನು, ಸರಿಯಾಗಿ ಪರಾಮರ್ಶಿಸದ ತಜ್ಞರು, ಅಧಿಕಾರಿಗಳು ಇದ್ದಾರೆ ಎಂದರೆ ಇದು ರೈತರ ಹಾಗು ಈ ದೇಶದ

ದೌರ್ಭಾಗ್ಯ, ಸರ್ಕಾರದ ಆಡಳಿತ ಯಂತ್ರದ ವಿಫಲತೆ ಹಾಸ್ಯಾಸ್ಪದ.

 

*ಬರವಸೆ ವಿಫಲವಾದಲ್ಲಿ ಹೋರಾಟ ಅನಿವಾರ್ಯ.*

ಮುಖ್ಯಮಂತ್ರಿಗಳ ಬರವಸೆಯಂತೆ ಮುಖ್ಯಮಂತ್ರಿಗಳೇ ಸಕಲೇಶಪುರಕ್ಕೆ ಆಗಮಿಸಿ ಈ ತಿಂಗಳ ಅಂತ್ಯದೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ.. ಚುನಾವಣಾ ಬಹಿಷ್ಕಾರದ ಕರಪತ್ರ ಸಿದ್ಧಗೊಂಡಿದ್ದು ಅಭಿಯಾನ ಪ್ರಾರಂಭಗೊಳ್ಳಲಿದೆ.

ಕಾಡಾನೆ ಸಂತ್ರಸ್ತರ ಹೋರಾಟ ಸಮಿತಿ. ಸಕಲೇಶಪುರ ಆಲೂರು.

 

*ಯಡೇಹಳ್ಳಿ”ಆರ್”ಮಂಜುನಾಥ್.*(9901606220)

RELATED ARTICLES
- Advertisment -spot_img

Most Popular