ಸಕಲೇಶಪುರ : ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿಯವರು ದೇಶಕ್ಕೆ ನೀಡಿದ ಕೋಡುಗೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಬೈರಮುಡಿ ಚಂದ್ರು ಹೇಳಿದರು.
ಪಟ್ಟಣದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿಯವರ 105ನೇ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ವಾಸ್ತವಕ್ಕೆ ಹತ್ತಿರವಾಗಿ ಬದುಕಿದ್ದರು. ದೇಶದಲ್ಲಿ ಬ್ಯಾಂಕ್ಗಳ ರಾಷ್ಟ್ರೀಕರಣದಿಂದ ಆರ್ಥಿಕ ಸ್ಥಿರತೆಗೆ ಕಾರಣರಾದರು. ಇವರ ಇಡೀ ಕುಟುಂಬವೇ ಮಹಾತ್ಯಾಗಕ್ಕೆ ಹೆಸರಾಗಿದೆ. ಇಂದಿರಾ ಗಾಂಧಿ ಮಾಡಿದ ಕೆಲಸ ಜೀವಂತವಾಗಿದೆ. ಬಡವರನ್ನು ಮೇಲೆತ್ತಲು ಅವರು ಕೈಗೊಂಡ ಯೋಜನೆಗಳು ಮಹತ್ವದ್ದು ಎಂದರು.
ಇಂದಿರಾ ಗಾಂಧಿ ನಾಲ್ಕು ದಶಕಗಳ ಹಿಂದೆ ಜಾರಿಗೆ ತಂದ ಯೋಜನೆಗಳಿಂದ ಇಂದಿಗೂ ಈ ದೇಶದ ಬೆಸ್ಟ್ ಪ್ರಧಾನಿ ಎಂದು ಜಗತ್ತೇ ಹೇಳುತ್ತದೆ. ಭೂ ಸುಧಾರಣೆ ಕಾಯ್ದೆ ಈ ದೇಶದ ಜನರಿಗೆ ಒಳಿತನ್ನು ಮಾಡಿದ ಕಾರ್ಯಕ್ರಮ ಎಂದರು.
ಕೆಪಿಸಿಸಿ ಸದಸ್ಯ ಸಲೀಮ್ ಕೊಲ್ಲಹಳ್ಳಿ ಮಾತನಾಡಿ, ನೆರೆಯ ದೇಶದ ವಿರುದ್ದ ಯುದ್ಧ ನಡೆದ ಸಂದರ್ಭದಲ್ಲಿ ಗಟ್ಟಿತನದ ನಿರ್ಧಾರ ವಾಸ್ತಾವಂಶಗಳನ್ನ ಒಪ್ಪಿಕೊಂಡ ಧೀಮಂತೆ. ಸರಳವಾಗಿ ಬದುಕು ನಡೆಸಿದ್ದ ಅವರು ಕಾರ್ಯಕರ್ತರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದರು. ನಾವು ಇಂದಿರಾ ಗಾಂಧಿ ಅವರನ್ನ ಕಳೆದುಕೊಂಡರು ಕೂಡ ಅವರು ಯಾವಾಗಲೂ ಸ್ಫೂರ್ತಿಯಾಗಿರುತ್ತಾರೆ ಎಂದರು. ಅವರ ಅವಧಿಯಲ್ಲಿ ಬಡತನ ನಿವಾರಣೆ ಸೇರಿದಂತೆ ದೇಶದ ಸವಾಂಗೀಣ ವಿಕಾಸಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದ್ದರು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮುರಳಿ ಮೋಹನ್, ಸಣ್ಣಸ್ವಾಮಿ,ಬ್ಯಾಕರವಳ್ಳಿ ವಿಜಯ್ ಕುಮಾರ್, ನದೀಮ್, ಬೈಕೆರೆ ದೇವರಾಜ್, ಲೋಹಿತ್ ಕೌಡಳ್ಳಿ ತಸ್ಲೀಮ್, ಮೋಹನ್, ಶೀತಲ್ ಸರೋಜ ಇನ್ನಿತರರು ಇದ್ದರು.