ಲಕೋ: ಅಯೋಧ್ಯೆ (Ayodhya) ರಾಮ ಮಂದಿರ
(Ram Temple) ನಿರ್ಮಾಣ ಕಾಮಗಾರಿ ಶೇ. 50 ರಷ್ಟು
ಪೂರ್ಣಗೊಂಡಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ
ಯೋಗಿ ಆದಿತ್ಯನಾಥ್ (Yogi Adityanath)
ತಿಳಿಸಿದ್ದಾರೆ.
ದೇವಾಲಯದ ಟ್ರಸ್ಟ್ ಪ್ರಕಾರ, 2024 ರಲ್ಲಿ ಮಂಕರ
ಸಂಕ್ರಾಂತಿ ದಿನದಂದು ದೇವಾಲಯದ ಗರ್ಭಗುಡಿಯಲ್ಲಿ
ರಾಮನ ವಿಗ್ರಹವನ್ನು ಇರಿಸುವ ಸಾಧ್ಯತೆಯಿದೆ. 2020
ರಲ್ಲಿ ಪ್ರಾರಂಭವಾದ ದೇವಾಲಯದ ನಿರ್ಮಾಣವು
2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು
ಹೇಳಿದ್ದಾರೆ.