Saturday, April 19, 2025
Homeಸುದ್ದಿಗಳುಬೇಲೂರು; ತಣ್ಣೀರು ಕಾಡಾನೆ ಅಸ್ವಸ್ಥ

ಬೇಲೂರು; ತಣ್ಣೀರು ಕಾಡಾನೆ ಅಸ್ವಸ್ಥ

ತಾಲ್ಲೂಕು ಬಿಕ್ಕೋಡಿನ ಕಾಫಿ ತೋಟವೊಂದರಲ್ಲಿ ಕಾಲಿಗೆ   ಗಾಯಗೊಂಡಿರುವ ಆನೆ(ತಣ್ಣೀರು) ಕಳೆದರೆಡು ದಿನಗಳಿಂದ ನಿಲ್ಲಲು ಕೂಡ ಆಗದಂತ ನಿತ್ರಾಣವಾಗಿದೆ.
ಸುಮಾರು ಒಂದು ವರ್ಷದಿಂದ ಸಕಲೇಶಪುರ ಭಾಗಗಳಲ್ಲಿ  ತಿರುಗಾಡುತ್ತಿತ್ತು , ಎರಡು ದಿನಗಳಿಂದ
ಗುಂಪಿನಿಂದ  ಹೊರ ಬಂದು ಒಂಟಿಯಾಗಿ ತಿರುಗಾಡುತ್ತಿತ್ತು ಆನೆ ಗುಂಪು ಬೇರ್ಪಡಿಕೆ ಯಿಂದ ಬಿಕ್ಕೋಡು ಹೋಬಳಿ ಕಾಫಿ ಎಸ್ಟೇಟ್ ಗೆ ಬಂದಿದೆ. ಅದರ ಕಾಲಿಗೆ ಗಾಯವಾಗಿದ್ದು ಕುಂಟುತ್ತಾ ಸಾಗಿದೆ. ಇದನ್ನು ಗಮನಿಸಿದ ಸ್ಥಳೀಯ ಜನರು ಗಾಬರಿಯಿಂದ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿದಿದ್ದು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಇದ್ದಂತ ಸ್ಥಳವನ್ನು  ಗಮನಿಸಿ ಪರಿಶೀಲಿಸಿದಾಗ ಅದು ಗುಂಡಿನಿಂದ ಕಾಲಿಗೆ ಗಾಯವಾಗಿಲ್ಲ ಬದಲಿಗೆ ಅದರ ಕಾಲು ಹುಣ್ಣಿನಿಂದ ಏಟಾಗಿದೆ. ನಡೆಯಲು ಆಗದ ಸಂದರ್ಭದಲ್ಲಿ ಅದು ಅಲ್ಲೇ ನಿಂತಿದ್ದು ಒಂದರೆಡು ದಿನಗಳಲ್ಲಿ ಸ್ವಸ್ಥಳಕ್ಕೆ ಹಿಂತಿರುಗ ಬಹುದು.ಎನ್ನಲಾಗಿದೆ.
RELATED ARTICLES
- Advertisment -spot_img

Most Popular