ಸಕಲೇಶಪುರ: ಧರ್ಮಸ್ಥಳ ಸಂಘದ ವತಿಯಿಂದ ಪಟ್ಟಣದ ತೇರಾ ಪಂತ್ ಭವನದಲ್ಲಿ ನಡೆಯುತ್ತಿರುವ ಮದ್ಯ ವರ್ಜನ ಶಿಬಿರಕ್ಕೆ ತಾಲೂಕು ವರ್ತಕರ ಸಂಘದ ವತಿಯಿಂದ ಒಂದು ದಿನದ ಊಟಕ್ಕೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಸಂಘದ ನಿರ್ದೇಶಕರ ಸಮ್ಮುಖದಲ್ಲಿ ನೀಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಸಂಘದ ಅಧ್ಯಕ್ಷರಾದ ಉದಯ್ ಮಾತನಾಡಿ ಶಿಬಿರಾರ್ಥಿಗಳು ಮನ ಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಜೀವನ ನಡೆಸುವಂತೆ ಕರೆ ನೀಡಿದರು.ಈ ವೇಳೆ ಸಂಘದ ಉಪಾಧ್ಯಕ್ಷರಾದ ರೆಹಮಾನ್, ಪ್ರಧಾನ ಕಾರ್ಯದರ್ಶಿಗಳಾದ ಮಧುಕುಮಾರ್ ಬಿ. ಮ್, ನಿರ್ದೇಶಕರಾದ ಲೋಹಿತ್ ಬಿಜಿ,
ರಾಜಕುಮಾರ್ ,ಪ್ರಶಾಂತ್, ಸತ್ಯನಾರಾಯಣ, ಪ್ರವೀಣ್, ಕುಮಾರ್ ಜೈನ್ ಉಪಸ್ಥಿತರಿದ್ದರು.