ಸಕಲೇಶಪುರ ತಾಲ್ಲೂಕಿನ ಸಿದ್ದಾಪುರ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅದ್ದೂರಿಯಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಯ ದೊರೇಶ್ ಮಾತನಾಡಿ, ನವೆಂಬರ್ 14, ದೇಶಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ. ಇಂದು ನಾವೆಲ್ಲ ದೇಶದ ಮೊದಲ ಪ್ರಧಾನ ಮಂತ್ರಿ ಪ್ರೀತಿಯ ಚಾಚಾ ಪಂಡಿತ್ ಜವಾಹರ ಲಾಲ್ ನೆಹರೂರವರ ಹುಟ್ಟುಹಬ್ಬ ವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಅವರ ಸವಿ ನೆನಪಿಗಾಗಿ ಅವರು ಪ್ರೀತಿಸುವ ಮಕ್ಕಳಿಗೆ ಈ ದಿನವನ್ನು ಮೀಸಲಿಡಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ವಿಷೇಶವಾಗಿ ಆಚರಿಸಿದ್ದೇವೆ ಎಂದರು
ತಾಜಾ ಸುದ್ದಿ