Sunday, April 13, 2025
Homeಸುದ್ದಿಗಳುಭಾರತ್​ ಜೋಡೋ ಯಾತ್ರೆ; ಗೌಡರ ಗೌಡ ರಾಹುಲ್ ಗೌಡ ಘೋಷಣೆ;

ಭಾರತ್​ ಜೋಡೋ ಯಾತ್ರೆ; ಗೌಡರ ಗೌಡ ರಾಹುಲ್ ಗೌಡ ಘೋಷಣೆ;

 

 

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗೌಡ ಘೋಷಣೆ ಮೊಳಗಿದ್ದು, ವಿಶೇಷವಾಗಿತ್ತು. ರಾಹುಲ್ ಗಾಂಧಿಯನ್ನು ರಾಹುಲ್ ಗೌಡ ಎಂದು ಕೂಗಿದ ಕಾರ್ಯಕರ್ತರು, ಗೌಡರ ಗೌಡ ರಾಹುಲ್ ಗೌಡ ಎಂದು ಘೋಷಣೆ ಘೋಷಣೆ ಕೂಗಿದರು.

ಭಾರತ್ ಜೋಡೋ ಯಾತ್ರೆ ನಾಗಮಂಗಲ ಪಟ್ಟಣ ತಲುಪಿದ್ದು, ರಾಹುಲ್ ಗಾಂಧಿ ನೋಡಲು ಸಾಕಷ್ಟು ಜನರ ನೆರೆದಿದ್ದರು. ಈ ವೇಳೆ ಜನರನ್ನು ನೋಡಿದ ರಾಹುಲ್​, ಅವರತ್ತ ಕೈ ಬೀಸಿದರು. ಅಲ್ಲದೆ, ರಸ್ತೆ ಬದಿ ನಿಂತಿದ್ದ ಬಾಲಕಿಯೊಬ್ಬಳು ರಾಹುಲ್​ ಬಳಿ ಬರಲು ಯತ್ನಿಸಿದಾಗ ಆಕೆಯನ್ನು ತಡೆಯಲು ಮುಂದಾದ ಭದ್ರತಾ ಸಿಬ್ಬಂದಿಯನ್ನು ರಾಹುಲ್​ ಹಿಂದಕ್ಕೆ ಕುಳುಹಿಸಿದರು. ಬಳಿಕ ಕೆಲ ದೂರ ಬಾಲಕಿಯ ಕೈ ಹಿಡಿದು ಹೆಜ್ಜೆ ಹಾಕಿದರು.ಯಾತ್ರೆ ಮಧ್ಯೆ ಮಗುವೊಂದನ್ನು ಎತ್ತಿಕೊಂಡ ರಾಹುಲ್, ಮಗುವಿನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ವ್ಯಕ್ತಿಯೊಬ್ಬರು ತಮ್ಮ ಮಗು ಎತ್ತಿಕೊಂಡು ರಾಹುಲ್ ಜೊತೆ ಸೆಲ್ಫಿಗೆ ಬಂದಿದ್ದರು. ಈ ಸಮಯದಲ್ಲಿ ಮೊದಲು ಸೆಲ್ಫಿಗೆ ಫೋಸ್ ಕೊಟ್ಟ ರಾಹುಲ್​, ಬಳಿಕ ತನ್ನ ಮೊಬೈಲ್​ನಲ್ಲಿ ಮಗುವಿನ ಫೋಟೋ ತೆಗೆದುಕೊಂಡರು.

RELATED ARTICLES
- Advertisment -spot_img

Most Popular