ಮಟಮಟ ಮಧ್ಯಾಹ್ನವೇ ನಡುರಸ್ತೆಯಲ್ಲೇ ಒಂಟಿ ಸಲಗ ಸಂಚಾರ.
ಹೆಬ್ಬಳ್ಳಿ ಗ್ರಾಮದ ಸಮೀಪ ಒಂಟಿ ಸಲಗವೊಂದು ಮಧ್ಯಾಹ್ನದ ಸಮಯದಲ್ಲಿ ರಾಜಾರೋಷವಾಗಿ ನಡೆದುಕೊಂಡು ಹೋಗುತ್ತಿರುವ ಘಟನೆ ನಡೆದಿದೆ .ರಸ್ತೆಯಲ್ಲಿ ಒಂಟಿ ಸಲಗ ನಡೆದುಕೊಂಡು ಹೋಗುತ್ತಿದ್ದರೆ ಅದರ ಹಿಂದೆ ನೂರಾರು ಜನರು ಹೆಜ್ಜೆ ಹಾಕುತ್ತಾ ಸಾಗುತ್ತಿರುವ ದೃಶ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .
ಕಾಡಾನೆಗಳಿರುವ ಬಗ್ಗೆ ಅರಣ್ಯ ಇಲಾಖೆ ಹಗಲು-ರಾತ್ರಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಮಾತ್ರ ಕಾಡಾನೆಯ ಹಿಂದೆಯೇ ನಡೆದುಕೊಂಡು ಹೋಗುತ್ತಿದ್ದುದು ವಿಪರ್ಯಾಸ.
ಅರಣ್ಯ ಇಲಾಖೆ ಕಾಡಾನೆ ಸಂಚಾರ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕರು ಮಾತ್ರ ಕ್ಯಾರೇ ಎನ್ನದೆ ಕಾಡಾನೆ ಸಮೀಪವೇ ಹೋಗಿ ತಮ್ಮ ಮೊಬೈಲ್ ನಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದು ಮಾಮೂಲಾಗಿದೆ.