Thursday, November 21, 2024
Homeಸುದ್ದಿಗಳುಸಕಲೇಶಪುರಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುರ್ತಾಗಿ ಬೇಕಿದೆ ಕಾಯಕಲ್ಪ:ಸಮಸ್ಯೆ ಬಗೆಹರಿಸಲು ಒಂದು ವಾರದ ಗಡುವು ನೀಡಿದ...

ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುರ್ತಾಗಿ ಬೇಕಿದೆ ಕಾಯಕಲ್ಪ:ಸಮಸ್ಯೆ ಬಗೆಹರಿಸಲು ಒಂದು ವಾರದ ಗಡುವು ನೀಡಿದ ಸಿಮೆಂಟ್ ಮಂಜುನಾಥ್

 

>ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುರ್ತಾಗಿ ಬೇಕಿದೆ ಕಾಯಕಲ್ಪ

>ಸರ್ಕಾರಕ್ಕೆ ತುಮಕೂರು ಗರ್ಭಿಣಿ ಮತ್ತು ಮಗು ಸಾವು ಪ್ರಕರಣ  ಹೆತ್ತೂರು ಅಸ್ಪತ್ರೆಯಲ್ಲಿ ಮರುಕಳಿಸಬೇಕೇ..?

>ಗರ್ಬಿಣಿಯರಿಗೆ ಪ್ರಸವದ ವೇಳೆ ಸೂಕ್ತ ವೈದ್ಯರಿಲ್ಲ ತುರ್ತು ಪರಿಸ್ಥಿತಿಗೆ ಅಬ್ಯುಲೇನ್ಸ್ ಇಲ್ಲ

>ಶಾಸಕ ಎಚ್ .ಕೆ ಕುಮಾರಸ್ವಾಮಿಗೆ ಬೇಕಿಲ್ಲ ಜನರ ಗೋಳು

ಸಕಲೇಶಪುರ:-

ಹೇಳಿ ಕೇಳಿ ಮಲೆನಾಡಿನ ಪ್ರದೇಶ ತಾಲೂಕು ಹಾಗೂ ಜಿಲ್ಲಾ ಕೇಂದ್ರಕ್ಕೆ ಬರಲು 40 ರಿಂದ 50 ಕಿ.,ಮೀ ಬೇಕಾಗುತ್ತದೆ.ಸುತ್ತಲಿನ ಜನರ ಆರೋಗ್ಯ ಕಾಪಾಡಬೇಕಾದ  ಸಕಲೇಶಪುರ ತಾಲೂಕಿನ ಹೆತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ರೋಗಿಗಳ ಜತೆ ಬರುವವರು ರೋಗಿಗಳಾಗಿ ತೆರಳುವಂತಹ ಪರಿಸ್ಥಿತಿ ಇದೆ.ಈ ಆಸ್ಪತ್ರೆಯಲ್ಲಿ ತಿಂಗಳಿಗೆ 20-25 ಹೆರಿಗೆಯಾಗುತ್ತವೆ.ಆದರೆ ಸ್ತ್ರಿರೋಗ ತಜ್ನರೇ (ಪ್ರಸೂತಿ ಪರಿಣಿತ) ವೈದ್ಯರೇ ಇಲ್ಲ.ಇನ್ನೂಳಿದ ಸಹಾಯಕರಿಗೆ ಹೆರಿಗೆ ಮಾಡಿಸುವ ಅನುಭವವಿಲ್ಲ ಈಗಾಗಿ ಬಹಳಷ್ಟೂ ಸಲ ತೊಂದರೆಯಾಗುತ್ತಿದೆ.ಸಿಜೇರಿಯಾನ್ ಮಾಡಲು ತಜ್ನ ವೈದ್ಯರಿಲ್ಲದೆ ಹೆರಿಗೆ ಸಮಯದಲ್ಲಿ ಗರ್ಭಿಣಿಯರು ನರಳುವಂತಾಗಿದೆ. ಹೆಚ್ಚಿನ ಚಿಕಿತ್ಸೆಗೆ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ತೆರಳಲು ಆಂಬುಲೆನ್ಸ್ ಗಳಿಲ್ಲದೆ ನರಕಯಾತನೆ ಪಡುವ ಪರಿಸ್ಥಿತಿ ಬಂದಿದೆ ಎಂದು ಸ್ಥಳಿಯರು ಆರೋಪಿಸುತ್ತಾರೆ.

ಹಲವು ಬಾರಿ ಶಾಸಕ ಎಚ್.ಕೆ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸದ್ದರು ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ರೋಗಿಗಳ ಜತೆ ಬರುವವರು ರೋಗಿಗಳಾಗಿ ತೆರಳುವಂತಹ ಪರಿಸ್ಥಿತಿ ಇದೆ. ಆಸ್ಪತ್ರೆ ಹೊರಗಿನಿಂದ ಮಾತ್ರ ಸುಂದರ ಕಟ್ಟಡವಾಗಿದೆ. ಆದರೆ ಒಳ ಹೊಕ್ಕರೆ ಸಾಕು ಎಲ್ಲೆಂದರಲ್ಲಿ ಹುಳುಕೇ ಕಂಡು ಬರುತ್ತದೆ. ಮುಖ್ಯ ತಾಲೂಕಿನ ಹೋಬಳಿ ಕೇಂದ್ರಗಳಲ್ಲೊಂದಾಗಿರುವ ಹೆತ್ತೂರು ಗ್ರಾಮದ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  12 ಗ್ರಾಮಗಳು ಒಳಪಡುತ್ತವೆ. ಬರುವರೋಗಿಗಳಿಗೆ ಚಿಕಿತ್ಸೆ, ಔಷಧೋಪಚಾರ ಸಮರ್ಪಕವಾಗಿ ದೊರೆಯುತ್ತಿಲ್ಲ.

ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡವು ತುಂಬಾ ಹಳೆಯದಾಗಿದ್ದು, ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು ದಿನದಿಂದ ದಿನಕ್ಕೆ ಶಿಥಿಲಾವಸ್ಥೆ ತಲುಪುತ್ತಿದೆ. ಇದರಿಂದಾಗಿ ಬರುವ ರೋಗಿಗಳು ಕೈಯಲ್ಲಿಯೇ ಜೀವ ಹಿಡಿದುಕೊಂಡು ಸಾಗುವ ಅನಿವಾರ್ಯತೆ ಬಂದೊದಗಿದೆ.

ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ಅಕ್ರೋಶ:

ಕಳೆದ 15 ವರ್ಷಗಳಿದ ಕ್ಷೇತ್ರವನ್ನು ಪ್ರತಿನಿಧಿಸಿರುವ ಕುಮಾರಸ್ವಾಮಿಯವರು ಹೋಬಳಿ ಕೇಂದ್ರದಲ್ಲಿರುವ ಆರೋಗ್ಯ ಕೇಂದ್ರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಇರುವುದು ಅವರ ಕೆಲಸಕ್ಕೆ ಹಿಡಿದ ಕೈಗನ್ನಡಿಯಾಗಿದೆ ಇನ್ನೂ ಒಂದು ವಾರದೊಳಗೆ ಶಾಸಕರು ಹೆತ್ತೂರು ಹೋಬಳಿಗೆ ಆಂಬುಲೆನ್ಸ್ ಹಾಗೂ ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸದಿದ್ದರೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಒಟ್ಟಾರೆ ಗ್ರಾಮ ಪಂಚಾಯಿತಿ, ಇತರ ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆಯ ಬೇಜವಾಬ್ದಾರಿಯಿಂದ ಆಸ್ಪತ್ರೆ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ. ಈ ಆಸ್ಪತ್ರೆಯ ಸಮಸ್ಯೆಗಳಿಗೆ ಬೇಗ ಮುಕ್ತಿ ಸಿಕ್ಕು ಗ್ರಾಮಸ್ಥರಿಗೆಲ್ಲ ಉತ್ತಮ ಚಿಕಿತ್ಸೆ ದೊರೆಯುವಂತಾಗಲಿ ಎನ್ನುವುದೇ ಸಾರ್ವಜನಿಕರ ಒತ್ತಾಸೆ.

RELATED ARTICLES
- Advertisment -spot_img

Most Popular