ಸಕಲೇಶಪುರ: ತಾಲೂಕಿನ ಬೆಳಗೋಡು ಹೋಬಳಿಯಲ್ಲಿ ಕಾಡಾನೆಗಳ ಉಪದ್ರವ ಮುಂದುವರೆದಿದ್ದು ದೊಡ್ಡದೀಣೆ ಗ್ರಾಮದ ವಕೀಲ ಕವನ್ ರವರ ಮನೆಯ ಸುತ್ತಮುತ್ತಲಿನ ಕಾಫಿ ತೋಟ ಹಾಗೂ ಗದ್ದೆಗಳಲ್ಲಿ ಕಾಡಾನೆಗಳ ದಾಂದಲೆ ನಡೆಸಿರುವುದರಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಫಸಲಿಗೆ ಬಂದಿರುವ ಭತ್ತದ ಗದ್ದೆಗಳಲ್ಲಿ ಕಾಡಾನೆಗಳು ದಾಂದಲೆ ನಡೆಸುತ್ತಿರುವುದರಿಂದ ಕಷ್ಟ ಪಟ್ಟು ಬೆಳೆ ಬೆಳೆದ ರೈತರು ಅತಂಕಕ್ಕೀಡಾಗಿದ್ದಾರೆ. ಒಂದೆಡೆ ಕಾಡಾನೆ ಸಮಸ್ಯೆ ಬಗೆಹರಿಸಲು ತಜ್ಞರ ತಂಡ ತಾಲೂಕಿನಲ್ಲಿ ಅಧ್ಯಯನ ಮಾಡಲು ಮುಂದಾಗಿದ್ದು ಈ ಸಂಧರ್ಭದಲ್ಲಿ ಕಾಡಾನೆಗಳ ಉಪದ್ರವ ಮುಂದುವರೆದಿದೆ. ಕೂಡಲೆ ಕಾಡಾನೆ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಕೀಲ ಕವನ್ ಗೌಡ ಒತ್ತಾಯಿಸಿದ್ದಾರೆ.