ಕೇರಳ ಸರ್ಕಾರದ ಈ ಬಾರಿಯ ಬರೋಬ್ಬರಿ 25 ಕೋಟಿ ಓಣಂ ಬಂಪರ್ ಲಾಟರಿ ವಿಜೇತ ಅನುಪ್ ಈಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಾಟರಿ ಗೆದ್ದ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ದಿನಬೆಳಗಾಗುತ್ತಿದ್ದಂತೆಯೇ ಮನೆ ಮುಂದೆ ಸಾಲ ಕೇಳುವವರ ಸಾಲೇ ತುಂಬಿಕೊಳ್ಳುತ್ತಿದ್ದು, ನೆಮ್ಮದಿಗೆ ‘ಬಹುಮಾನ’ ಕೊಳ್ಳಿಯಿಟ್ಟಿದೆ ಎಂದು ಖುದ್ದು ಅವರೇ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದು, ತಮ್ಮ ಅಳಲು ತೋಡಿಕೊಂಡಿದ್ದಾರೆ. ಲಾಟರಿ ಗೆದ್ದಾಗ ಬಹಳಷ್ಟು ಸಂತಸವಾಗಿತ್ತು. ಆದರೆ ಆ ಸಂತಸ ಈಗ ದಿಕಳೆದಂತೆ ದುಃಖಕ್ಕೆ ದಾರಿ ಮಾಡಿಕೊಟುತ್ತಿದೆ. ಮನೆಯಿಂದ ಹೊರಗೆ ಕಾಲಿಡಲೂ ಆಗುತ್ತಿಲ್ಲ. ಮಗುವಿಗೆ ಆನಾರೋಗ್ಯ ಕಾಡಿದರೆ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಎಲ್ಲಿ ಹೋದರೂ ಜನ ಹುಡುಕಿಕೊಂಡು ಬರುತ್ತಾರೆ ಎನ್ನುತ್ತಾರೆ ಅನುಪ್.
ಬಹುಮಾನದ ಹಣ ಇನ್ನೂ ಕೈಸೇರಿಲ್ಲ ಎಂದು ಹೇಳಿದರೂ ಯಾರೂ ನಂಬುವುದಿಲ್ಲ. ತನ್ನ ಬಗ್ಗೆ ಮಾಧ್ಯಮಗಳು ಸಾಕಷ್ಟು ಸುದ್ದಿ ಹಬ್ಬಿಸಿರುವುದರಿಂದ ಎಲ್ಲಿಗೂ ಹೋಗಲೂ ಸಾಧ್ಯವಾಗುತ್ತಿಲ್ಲ. ಈಗ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ