ಶ್ರೀ ವಿಜಯೇಂದ್ರರವರ 45 ಹುಟ್ಟುಹಬ್ಬಕ್ಕೆ ಬಿಜೆಪಿ ವತಿಯಿಂದ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.
ಆಲೂರು ತಾಲೂಕಿನಲ್ಲಿ ಬಿವೈ ವಿಜಯೇಂದ್ರರವರ 45ನೇ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಕಾರ್ಯಕರ್ತ ವತಿಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.
ಬಿಜೆಪಿ ಮುಖಂಡರಾದ ಹೇಮಂತ್ ಕುಮಾರ್ ರವರು ಪತ್ರಿಕಾ ಮಾಧ್ಯಮದವರ ಜೊತೆ ಮಾತನಾಡುತ್ತಾ ಆಲೂರಿನಲ್ಲಿ ಹಿಂದೂ ಎಲ್ಲಾ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಶ್ರೀ ವಿಜಯೇಂದ್ರ ಅವರ ಹುಟ್ಟುಹಬ್ಬಕ್ಕೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವಂತಹ ಕಾರ್ಯವನ್ನು ಮಾಡುತ್ತ ಅವರಿಗೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದೇವೆ. ಹಾಗೆಯೇ ವಿಜಯೇಂದ್ರ ಉತ್ತಮ ರಾಜಕಾರಣಿಯಾಗಿದ್ದಾರೆ ಮುಂದೆ ಒಂದು ದಿನ ಮುಖ್ಯಮಂತ್ರಿ ಆಗಲೆಂದು ಈ ಸಂದರ್ಭದಲ್ಲಿ ಹಾರೈಸುತಿದ್ದೇವೆ ಎಂದರು.
ನಂತರ ಮಾತನಾಡಿದ ಬಿಜೆಪಿ ಕಾರ್ಯಕರ್ತರದ ಅಜಿತ್ ಚಿಕ್ಕಣಗಲ್ ರವರು ವಿಜೇಂದ್ರ ರವರಿಗೆ ಆಲೂರು ತಾಲೂಕಿನ ಬಿಜೆಪಿ ಕಾರ್ಯಕರ್ತರಲ್ಲರು ಸೇರಿಕೊಂಡು 45ನೇ ಹುಟ್ಟುಹಬ್ಬಕ್ಕೆ ಶುಭಾಶಯಯನ್ನು ಕೋರ್ತಾ ತಾಲೂಕ್ ತಾಲೂಕಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳನ್ನು ಹಂಚುವ ಮೂಲಕ ವಿಜಯೇಂದ್ರ ಅವರ ವ್ಯಕ್ತಿತ್ವದ ಬಗ್ಗೆ ಪತ್ರಿಕೆಮಾಧ್ಯಮದವರ ಜೊತೆ ಮಾತನಾಡಿದರು.
ಇದೆ ಸಂದರ್ಭದಲ್ಲಿ ಬಂದಂತಹ ಸಾರ್ವಜನಿಕರಿಗೆ ಸಿಹಿ ಹಂಚಿದರು.
ಈ ಕಾರ್ಯಕ್ರಮದಲ್ಲಿ ಹೇಮಂತ್ ಕುಮಾರ್ ಬಿಜೆಪಿ ಮುಖಂಡರು, ಮೋಹನ್ ತೊಗರನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಮೋಹನ್ ಹಿಂದುಳಿದ ವರ್ಗದ ಅಧ್ಯಕ್ಷರು, ಆರ್ ಸಿ ಉಮೇಶ್ ಬಿಜೆಪಿ ಮುಖಂಡರು, ಅಜಿತ್ ಚಿಕ್ಕಣಗಾಲು ಬಿಜೆಪಿ ಮುಖಂಡರು, ಹಬ್ಬನ ಕೃಷ್ಣ ಶೆಟ್ಟಿ ಗ್ರಾಮ ಪಂಚಾಯತಿ ಸದಸ್ಯರು, ಕಣಗಲ್ ಲೋಕೇಶ್ ಬಿಜೆಪಿ ಮುಖಂಡರು, ಕದಾಳ್ ಲೋಕೇಶ್ ಬಿಜೆಪಿ ಮುಖಂಡರು, ಬಾಲಲೋಚನ ಎಸ್ ಸಿ ಮೋರ್ಚಾ ಅಧ್ಯಕ್ಷರು, ಪುಟ್ಟ ರಂಗನಾಥ ಎಸ್ ಸಿ ಮೋರ್ಚ ಪ್ರಧಾನ ಕಾರ್ಯದರ್ಶಿ, ಭರತ್, ಅಶೋಕ್, ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.