Sunday, November 24, 2024
Homeಸುದ್ದಿಗಳುಭೂತಾರಾಧನೆ ಸಮಯದಲ್ಲಿ ದೇವರು ಬರುವುದು ಸತ್ಯವಲ್ಲ* *ದೈವ ನರ್ತಕರಿಗೆ ಮಾಸಾಶನ ನೀಡುವುದು, ಮೂಢನಂಬಿಕೆಗೆ ಪ್ರಾಮುಖ್ಯತೆ*...

ಭೂತಾರಾಧನೆ ಸಮಯದಲ್ಲಿ ದೇವರು ಬರುವುದು ಸತ್ಯವಲ್ಲ* *ದೈವ ನರ್ತಕರಿಗೆ ಮಾಸಾಶನ ನೀಡುವುದು, ಮೂಢನಂಬಿಕೆಗೆ ಪ್ರಾಮುಖ್ಯತೆ* *ಮಾಜಿ ಸಚಿವೆ ಬಿ.ಟಿ ಲಲಿತಾ ಹೇಳಿಕೆ.*

*ಭೂತಾರಾಧನೆ ಸಮಯದಲ್ಲಿ ದೇವರು ಬರುವುದು ಸತ್ಯವಲ್ಲ*

*ದೈವ ನರ್ತಕರಿಗೆ ಮಾಸಾಶನ ನೀಡುವುದು, ಮೂಢನಂಬಿಕೆಗೆ ಪ್ರಾಮುಖ್ಯತೆ*

*ಮಾಜಿ ಸಚಿವೆ ಬಿ.ಟಿ ಲಲಿತಾ ಹೇಳಿಕೆ.*

ಕಾಂತಾರ ಸಿನಿಮಾ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಸುದ್ದಿ ಮಾಡಿದೆ. ಈ ಚಿತ್ರದ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಒಬ್ಬ ವಿಚಾರವಾದಿ ,ವೈಚಾರಿಕ ವ್ಯಕ್ತಿ ತನ್ನ ವಿಚಾರವನ್ನು ಜನರಿಗೆ ನೇರವಾಗಿ ಹೇಳಲು ಸಾಧ್ಯವಾಗದೆ, ಬುದ್ಧಿವಂತಿಕೆಯಿಂದ ಸಿನಿಮಾ ಮಾಡಿದ್ದಾನೆ. ಸಿನಿಮಾ ತಿಳಿದುಕೊಳ್ಳಲು ಬಹಳಷ್ಟು ಬುದ್ಧಿವಂತಿಕೆ ಬೇಕು ಎಂದು ಮಾಜಿ ಸಚಿವೆ ಬಿ.ಟಿ ನಾಯಕ್ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ದೈವ ನರ್ತಕರಿಗೆ ಸರಕಾರ ಮಾಸಾಶನ ಘೋಷಿಸಿದೆ .ಈ ವಿಚಾರದ ಬಗ್ಗೆ ದೈವ ನರ್ತಕರಿಗೆ ಸರಕಾರ ಮಾಸಾಶನ ನೀಡುವ ಅಗತ್ಯವಿರಲಿಲ್ಲ. ಅದರ ಬದಲು ಜೀವನಕ್ಕೆ ಬೇರೆ ದಾರಿ ತೋರಿಸಬೇಕು. ದೈವ ನರ್ತಕರಿಗೆ ಭೂತಾರಾಧನೆ ಸಮಯದಲ್ಲಿ ದೇವರು ಬರುವುದು ಸತ್ಯ ಅಲ್ಲ. ಮಾಶಾಸನ ನೀಡುವುದರಿಂದ ಮೂಢನಂಬಿಕೆಗೆ ಪ್ರಾಮುಖ್ಯತೆ ನೀಡಿದಂತಾಗಿದೆ.

ಇನ್ನು ಚಿತ್ರ ಕಾಡಿನ ಜನರ ನೋವಿನ ಕಥೆ. ಜಮೀನ್ದಾರಿ ಪದ್ಧತಿಯ ಮೂಲಕ ಅವರನ್ನು ಕಾಡಿನಿಂದ ಒಕ್ಕಲೆಬ್ಬಿಸಲು ನೋಡಿದ ಕಾರಣ ಅಲ್ಲಿನ ಜನ ಉಳಿವಿಗಾಗಿ ಪೊಲೀಸರ ಮತ್ತು ಸರಕಾರದ ಮೊರೆ ಹೋದರು. ನ್ಯಾಯ ಸಿಗದೇ ಇದ್ದಾಗ ಚೀರಾಡಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಅದನ್ನೇ ದೈವವೆಂದು ಹೇಳಲಾಗುತ್ತಿದೆ. ದೈವ ನರ್ತಕರು “ಓಹೋ” ಎಂದು ಚೀರಾಡುವುದು ಮೈ ಮೇಲೆ ದೇವರು ಬರುವುದರಿಂದ ಅಲ್ಲ ಅದಕ್ಕೆ ಬೇರೆಯದೇ ಆದ ಕಾರಣವಿದೆ ಎಂದು ತಿಳಿಸಿದರು.

RELATED ARTICLES
- Advertisment -spot_img

Most Popular