Tuesday, December 3, 2024
Homeಅಂಕಣಮರಣ ನಂತರವೂ ಹೋರಾಟಗಾರರ,ರೈತರ ಜೊತೆ ನಿಂತ ಹೆಬ್ಬನಹಳ್ಳಿ ಮನು.* (ಮನುವಿನ ಪಾದಗಳಿಗೆ ಶಿರಭಾಗಿದ ನಮನಗಳು

ಮರಣ ನಂತರವೂ ಹೋರಾಟಗಾರರ,ರೈತರ ಜೊತೆ ನಿಂತ ಹೆಬ್ಬನಹಳ್ಳಿ ಮನು.* (ಮನುವಿನ ಪಾದಗಳಿಗೆ ಶಿರಭಾಗಿದ ನಮನಗಳು

 

ಮಾನವ ಜನ್ಮ ನಮಗೆ ದೊರಕಿದ್ದು ಪೂರ್ವಜನ್ಮದ ಪುಣ್ಯದ ಫಲ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎನ್ನುತ್ತಾರೆ ಹಿರಿಯರು. ನಮ್ಮ ಅಸ್ತಿತ್ವದಿಂದ ಇತರರಿಗೂ ಒಂದಿನಿತು ಸಹಾಯ ಆಗುವುದಾದರೆ ಅದು ಮಾನವ ಜನ್ಮದ ಸಾರ್ಥಕ ಕ್ಷಣ.ವ್ಯಕ್ತಿ ಬದುಕಿರುವವರೆಗೆ ಅವರ ಬೆಲೆ ತಿಳಿಯುವುದಿಲ್ಲ. ಅವರ ಕೆಲಸಗಳು ಕಾಣಿಸುವುದೇ ಇಲ್ಲ. ಎಲ್ಲವೂ ಅರಿವಿಗೆ ಬರುವುದು ಆ ವ್ಯಕ್ತಿಯ ಮರಣದ ನಂತರವೇ.ಇದಕ್ಕೆ ಸಾಕ್ಷಿಯಾಗಿದ್ದು ಮನು.
ಸಕಲೇಶಪುರ ಆಲೂರು ತಾಲೂಕಿನಲ್ಲಿ ಕಾಡಾನೆ ಮಾನವ ಸಂಘರ್ಷ ತಾರಕಕ್ಕೆರಿದೆ. ತಿಂಗಳಿಗೆ ಎರೆಡೆರಡು ಜನ ರೈತರು ಅಮಾಯಕರು ಕಾರ್ಮಿಕರು ಬಲಿಯಾಗುತ್ತಿದ್ದಾರೆ. 76 ಜನ ಬಲಿಯಾದರೂ ಕೂಡ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ.
ಆದರೆ 75 ಜನ ಮರಣದಲ್ಲಿಯೂ ಕೂಡ ಯಾವುದೇ ಕುಟುಂಬ ಆ ಶರೀರವನ್ನ ಹೋರಾಟಗಾರರಿಗೆ ಪ್ರತಿಭಟನೆ ನಡೆಸುವವರಿಗೆ ನೀಡಿ ಸಹಕರಿಸಿದ ಉದಾಹರಣೆ ಒಂದು ಇಲ್ಲ.ಇಲ್ಲಿಯವರೆಗೆ ಆ ಕುಟುಂಬವನ್ನ ಬ್ಲಾಕ್ಮೇಲ್ ಮಾಡಿ, ಭಾವನಾತ್ಮಕವಾಗಿ ಕಟ್ಟಿಹಾಕಿ,ಮರಳು ಮಾಡಿ ಹಣ ನೀಡಿ ವಂಚಿಸಲಾಗುತ್ತಿತ್ತು.
ಆದರೆ ಹೆಬ್ಬನಹಳ್ಳಿ ಮನು ಇತಿಹಾಸವನ್ನು ಸೃಷ್ಟಿ ಮಾಡಿದ. ಹಲವಾರು ಹೋರಾಟಗಳಲ್ಲಿ ಕುಟುಂಬದವರನ್ನು ಕೈಮುಗಿದು ಬೇಡಿಕೊಳ್ಳಲಾಗುತ್ತಿತ್ತು.ದಯಮಾಡಿ ಮುಂದೆ ಈ ರೀತಿ ಆಗದ ರೀತಿ ತಡೆಗಟ್ಟಲು ಸರ್ಕಾರದ ಗಮನಸೆಳೆಯಲು ಒಂದು ದಿನ ಪಾರ್ಥಿವ ಶರೀರವನ್ನ ಹೋರಾಟಗಾರರಿಗೆ ಚಳುವಳಿಗಾರರಿಗೆ ನೀಡಿ ಎಂದು ಕೈ ಮುಗಿದು ಬೇಡಿಕೊಂಡರು ಕೂಡ ಯಾರು ಇಲ್ಲಿವರೆಗೂ ಕೂಡ ಹೋರಾಟಕ್ಕೆ ಬೆಂಬಲಿಸಿರಲಿಲ್ಲ.ಆದರೆ ಹೆಬ್ಬನಹಳ್ಳಿಯ ಮನುವಿನ ಕುಟುಂಬ.ಸುತ್ತಮುತ್ತಲಿನ ಗ್ರಾಮಸ್ತರು ಹೋರಾಟಗಾರರು ಹೋಗಿ ನಿಮ್ಮ ಜೊತೆ ನಾವಿದ್ದೇವೆ ಮನುವಿನ ಮರಣ ಇಲ್ಲಿಗೆ ಅಂತ್ಯವಾಗಬೇಕು ಅಂತ ಕೇಳಿಕೊಂಡಾಗ ಯಾವುದೇ ಚಕಾರವನ್ನು ಎತ್ತದೆ ಸಂಪೂರ್ಣ ಶರೀರವನ್ನು ನಮಗೆ ಒಪ್ಪಿಸಿತು.ಪ್ರತಿಭಟನೆ ಕಾರರಿಗೆ ಆತ್ಮಸ್ಥೈರ್ಯ.. ಸ್ವಾಭಿಮಾನ… ಕಿಚ್ಚು… ಈ ಸರ್ಕಾರವನ್ನ ಅಲ್ಲಾಡಿಸುವ ತಾಕತ್ತು ನೀಡಿತು.
ಜಿಲ್ಲಾಡಳಿತ,ತಾಲೂಕು ಆಡಳಿತ,ಅರಣ್ಯ ಇಲಾಖೆ,ನಕಲಿ ರಾಜಕಾರಣಿಗಳು ಬೆಚ್ಚಿ ಬೀಳುವಂತೆ ಆ ಅಮೃತ ದೇಹ ಕ್ರಾಂತಿ ಮಾಡಿತು.ಕನ್ನಡ ಪರಸಂಘಟನೆಗಳ, ರೈತ ಸಂಘಟನೆಗಳು,ಜನಪ್ರತಿನಿಧಿಗಳು, ಸಾರ್ವಜನಿಕರಿಗೆ ಮನು ಮಾದರಿಯಾದರು.ರಾತ್ರಿ ಹನ್ನೆರಡು ಗಂಟೆಗೆ ಸರ್ಕಾರ ಮನುವಿನ ಪಾರ್ಥಿವ ಶರೀರದ ಮುಂದೆ ಬಂದು ಮಂಡಿಯೂರಿದ್ದು ಇತಿಹಾಸವಾಯಿತು. ಸಮಾಧಾನ ಮಾಡಿ ದಲ್ಲಾಳಿ ಕೆಲಸ ಮಾಡುವವರಿಗೆ ಮನು ಮತ್ತು ಮನು ಕುಟುಂಬ ತಕ್ಕ ಪಾಠ ಕಲಿಸಿತು.ದಾರಿ ತಪ್ಪಿಸುವವರ ಯಾರ ಮಾತಿಗೂ ಬೆಲೆಕೊಡದ ಕುಟುಂಬಕ್ಕೆ ಹೋರಾಟಗಾರರ ಪರವಾಗಿ ಶಿರಬಾಗಿದ ನಮನಗಳು.
ಮನು ಇಂದು ನಮ್ಮೆಲ್ಲರ ಹೃದಯದಲ್ಲಿ ನೆಲೆಸಿದ್ದಾನೆ ಮನುವಿನ ಕುಟುಂಬದ ಹಿಂದೆ ಹೆಗಲಿಗೆ ಹೆಗಲು ಕೊಡುವ ಹತ್ತಾರು ಸಂಘಟನೆಗಳ ನಾಯಕರುಗಳು ಗ್ರಾಮಸ್ಥರು ನಿಲ್ಲುತ್ತೇವೆ.ಕುಟುಂಬದ ಕಣ್ಣೀರನ್ನು ಜೊತೆ ನಾವಿದ್ದೇವೆ.ಈ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತ ಪ್ರತಿಯೊಬ್ಬರಿಗು,ಆ ಕಾಡಿನಲ್ಲಿ ಐನೂರು ಮೀಟರ್ ದೂರದಲ್ಲಿ ಇಪ್ಪತ್ತು ಕಾಡನೆಗಳಿದ್ದರು ಜೀವದ ಹಂಗು ತೊರೆದು, ಉಟ, ಕಾಫಿ,ಶಾಮಿಯಾನ, ಫ್ರೀಜರ್,ಜನರೇಟರ್, ವ್ಯವಸ್ಥೆ ಮಾಡಿದ ಸಹೋದರರಿಗೆ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಅನಂತ ಅನಂತ ಶರಣು ಶರಣಾರ್ಥಿಗಳು. ಕುಟುಂಬಕ್ಕೆ ದಾಯಾಮಯ ಭಗವಂತ ಸರ್ವಶಕ್ತಿ ಯನ್ನು ನೀಡಲಿ.
ಮನು ಅಮರ ಅಜರಾಮರ.

ಮನುವಿನಿಂದಾದ ಉಪಯೋಗಗಳು.

1)ನೇರವಾಗಿ ಜಾನೆಕೆರೆ ಸಾಗರ್ ಅವರ ದೂರವಾಣಿ ಮೂಲಕ ಹೆಚ್ ಎಂ ವಿಶ್ವನಾಥ್ ಹಾಗೂ ಪ್ರತಿಭಟನಾಕಾರರೊಂದಿಗೆ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಮಾತುಕತೆ ಬರವಸೆ.
2)ಒಂದೇ ಕಂತಿನಲ್ಲಿ ಏಳುವರೆ ಲಕ್ಷ ರೂಗಳ ಪರಿಹಾರದ ಚಕ್ ವಿತರಣೆ.
3)ಮುಖ್ಯಮಂತ್ರಿಗಳು ಕಾಡಾನೆ ಮಾನವ ಸಂಘರ್ಷದಿಂದ ಮೃತಪಟ್ಟ ವ್ಯಕ್ತಿಗೆ 15 ಲಕ್ಷ ರೂಗಳ ಘೋಷಣೆ ಮಾಡಿದ್ದಾರೆ.ಮನುವಿಗೆ ಪ್ರಪ್ರಥಮವಾಗಿ ನೀಡಲಾಗುವುದು ಎಂಬ ಭರವಸೆ.
4)ಒಂದು ವಾರದ ಒಳಗೆ ಸಕಲೇಶಪುರ ತಾಲೂಕಿನಲ್ಲಿ ಮನುವಿನ ಪತ್ನಿಗೆ ಹುದ್ದೆ.
5)ಉಸ್ತುವಾರಿ ಸಚಿವರಾದ ಗೋಪಾಲಯ್ಯನವರ ಟ್ರಸ್ಟ್ ನಿಂದ ಎರಡು ಲಕ್ಷ ರೂಗಳ ಸಹಾಯಧನ.
6)ಸಂಪೂರ್ಣ ಕಾಡಾನೆ ಸ್ಥಳಾಂತರ ವಿಷಯವಾಗಿ ಐದನೇ ತಾರೀಖಿನಂದು ಉನ್ನತ ಮಟ್ಟದ ಸಭೆ.
*ಯಡೇಹಳ್ಳಿ”ಆರ್”ಮಂಜುನಾಥ್.*

RELATED ARTICLES
- Advertisment -spot_img

Most Popular