ಸಕಲೇಶಪುರ/ಹೊಸಕೊಪ್ಪಲು: ತಿನ್ನುವ ಅನ್ನಕ್ಕೂ ಕುತ್ತು ತಂದು ಕಾಡಾನೆಗಳು: ವಿಶೇಷವಾಗಿ ಬೆಳೆದಿದ್ದ ಸೋನಾ ಮುಸುರಿ ಭತ್ತ ಬೆಳೆ ಕಾಡಾನೆಗಳ ಪಾಲು.
ಸಕಲೇಶಪುರ:- ಕಾಡಾನೆಗಳ ನಿರಂತರ ಹಾವಳಿಯಿಂದ ರೈತರು ಬೆಳೆದ ಭತ್ತದ ಬೆಳೆಗಳು ನಾಶವಾಗುತ್ತಿದ್ದು ಮುಂದಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ತಿನ್ನುವ ಅನ್ನಕ್ಕೂ ಸಂಚಕಾರ ಬರುವ ಸಾಧ್ಯತೆಯಿದೆ.
ಹೌದು ಇತ್ತಿಚೇಗೆ ಸಕಲೇಶಪುರ.ಅಲೂರು ಭಾಗಗಳಲ್ಲಿ ಕಾಡಾನೆಗಳ ಹಾವಳಿ ಮೀತಿಮಿರಿದ್ದು ರೈತರು,ಬೆಳೆಗಾರರು ದಿಕ್ಕು ತೋಚದ ಸ್ಥಿತಿಗೆ ಬಂದಿದ್ದಾರೆ.
ಕಳೆದ ರಾತ್ರಿ ಬೆಳಗೋಡು ಹೋಬಳಿ ಉದೇವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಕೊಪ್ಪಲು ಗ್ರಾಮದ ರೈತ ಗಿಡ್ಡೇಗೌಡ ರವರು ತಮ್ಮ ಕುಟುಂಬದ ನಿರ್ವಹಣಗೆಂದು ವಿಶೇಷವಾಗಿ ಬೆಳೆದಿದ್ದ ಸೋನಾ ಮುಸುರಿ ಭತ್ತದ ಬೆಳೆಗಳನ್ನು 25 ಕ್ಕೂ ಹೆಚ್ಚವಿರುವ ಕಾಡಾನೆಯ ಹಿಂಡು ಸಂಪೂರ್ಣವಾಗಿ ತುಳಿದು,ತಿಂದು ನಾಶ ಪಡಿಸಿವೆ.ಇನ್ನೇನು ಒಂದು ತಿಂಗಳೊಳಗೆ ಕಟಾವು ಮಾಡಬೇಕಾಗಿದ್ದ ಬೆಳೆ ಕಾಡಾನೆಗಳ ಪಾಲಾಗಿರುವುದ್ದಕೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಗಿಡ್ಡೇಗೌಡರ ಪುತ್ರ ಅಮೃತ್ ನಿರಂತರ ನ್ಯೂಸ್ ನೊಂದಿಗೆ ಮಾತನಾಡಿ,ನಮ್ಮ ಹೊಸಕೊಪ್ಪಲು ಗ್ರಾಮದಲ್ಲಿ ನಾವು ಸೇರಿದಂತೆ ಇತರರು ಸೇರಿ 5 ಎಕರೆ ಪ್ರದೇಶದಲ್ಲಿ ಸೋನ ಮಸೂರಿ ಭತ್ತವನ್ನು ಐದಾರೂ ತಿಂಗಳಿನಿಂದ ಶ್ರಮ ವಹಿಸಿ ಬೆಳೆದಿದ್ದೆವು ಆದರೆ ಸರ್ಕಾರ ಹಾಗೂ ಅರಣ್ಯ ಇಲಾಖೆಗಳ ನಿರ್ಲಕ್ಷಕ್ಕೆ ನಮ್ಮ ಬೆಳೆ ಸಂಪೂರ್ಣ ನಾಶವಾಗಿದೆ.ಸರ್ಕಾರ ನೀಡುವ ಪರಿಹಾರ ಅರೆಕಾಸಿನ ಮಜ್ಜಿಗೆಗೂ ಸಮನಲ್ಲ ಹಾಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಶ್ರಮಕ್ಕೆ ತಕ್ಕನಾದ ಪರಿಹಾರ ನೀಡಬೇಕು.ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇದ್ದರೆ ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುತ್ತವೆ ಎಂದು ಎಚ್ಚರಿಸಿದ್ದಾರೆ.