ಪ್ರತಿಯೊಬ್ಬರ ಮನೆಯ ಮೇಲೆ ಹಾರಾಡಲಿ ನಮ್ಮ ಹೆಮ್ಮೆಯ ಕನ್ನಡ ಬಾವುಟ ಕರವೇ ಜಿಲ್ಲಾ ಕಾರ್ಯದರ್ಶಿ : ರಘು ಪಾಳ್ಯ
ಸಕಲೇಶಪುರ : ಕರ್ನಾಟಕ ರಕ್ಷಣಾ ವೇದಿಕೆ ಕಳೆದ 24 ವರ್ಷಗಳಿಂದ ನಾಡು,ನುಡಿ,ನೆಲ,ಜಲ, ಭಾಷೆ,ಸಂಸ್ಕೃತಿ,ಸಂಸ್ಕಾರ ಕನ್ನಡಿಗರ ಬದುಕು ಕಟ್ಟುವ ನಿಟ್ಟಿನಲ್ಲಿ ತನ್ನದೇ ಆದಂತಹ ಹೋರಾಟವನ್ನ ನಿರಂತರ ಮಾಡುವ ಮೂಲಕ ಜನಮಾನಸದಲ್ಲಿ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ.ಹಾಸನ ನಗರ ಮತ್ತು ತಾಲೂಕು ಜಿಲ್ಲಾ ಕೇಂದ್ರದಲ್ಲಿ ಅಂಗಡಿ ಮುಗ್ಗಟ್ಟುಗಳ ಮೇಲೆ ಮತ್ತು ಕಚೇರಿಗಳ ಮೇಲೆ ಮನೆಗಳ ಮೇಲೆ ನವೆಂಬರ್-1 ರಂದು ಕನ್ನಡ ಬಾವುಟವನ್ನ ಹಾರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹಾಗೂ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ರಘು ಪಾಳ್ಯ ಮನವಿ ಮಾಡಿದ್ದಾರೆ.
ಈ ಹಿಂದೆ 75 ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಎಲ್ಲಾ ಮನೆಗಳ ಮೇಲೆ ಕಚೇರಿಗಳ ಮೇಲೆ ಸ್ವತಂತ್ರ ಬಾವುಟವನ್ನು ಪ್ರತಿಯೊಬ್ಬ ಕನ್ನಡಿಗನು ಹಾರಿಸಿದ್ದಾರೆ. ಅದರಂತೆ ಕರ್ನಾಟಕ ರಾಜ್ಯೋತ್ಸವ 67 ನೇ ಸಂಭ್ರಮಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಕನ್ನಡಿಗರಿಗೆ ಅಸ್ಮಿತೆಯಾದ ಕನ್ನಡ ಬಾವುಟವನ್ನು ಎಲ್ಲ ಮನೆಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬೇಕೆಂದು ಈ ವಿನಂತಿಸಿಕೊಳ್ಳುತ್ತೇವೆಂದರು. ಮೂಲಕ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಅವರ ಆದೇಶದಂತೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ತಾಲೂಕು ಹೋಬಳಿ ಗ್ರಾಮ ಶಾಖೆಯ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ನಮ್ಮ ಸಾಮಾನ್ಯ ಕಾರ್ಯಕರ್ತರು ಸಹ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಮೂಲಕ 67 ನೇ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಕರವೇ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣಗೌಡರವರು ಈಗಾಗಲೇ ಸೂಚಿಸಿದ್ದಾರೆ. ಅದರಂತೆ ಸಮಸ್ತ ಕನ್ನಡಿಗರು ಕನ್ನಡದ ಬಾವುಟವನ್ನು ಹಾರಿಸುವ ಮೂಲಕ ಕನ್ನಡದ ವಿಚಾರದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಈ ಬಾವುಟವಾಗಿದೆ. ಆದಕಾರಣ ಸಮಸ್ತ ಕನ್ನಡಿಗರು ನವಂಬರ ಒಂದರಂದು ಕನ್ನಡ ಬಾವುಟವನ್ನು ಮನೆಗಳಲ್ಲಿ ಅಂಗಡಿ ಮುಗ್ಗಟ್ಟುಗಳಲ್ಲಿ ಖಾಸಗಿ ಕಚೇರಿಗಳಲ್ಲಿ ಅದೇ ರೀತಿ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಬಾವುಟವನ್ನು ಹಾರಿಸಲು ಸರ್ಕಾರ ನಿರ್ಧರಿಸಬೇಕೆಂದು ಈ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ ಎಂದರು.