Sunday, November 24, 2024
Homeಸುದ್ದಿಗಳುತಿರುಪತಿಯಲ್ಲಿ ದರ್ಶನ, ನವೆಂಬರ್‌ನಿಂದ ಬದಲಾವಣೆ ತಿಳಿಯಿರಿ

ತಿರುಪತಿಯಲ್ಲಿ ದರ್ಶನ, ನವೆಂಬರ್‌ನಿಂದ ಬದಲಾವಣೆ ತಿಳಿಯಿರಿ

ತಿರುಪತಿಯಲ್ಲಿ ದರ್ಶನ, ನವೆಂಬರ್‌ನಿಂದ ಬದಲಾವಣೆ ತಿಳಿಯಿರಿ

ಅಮರಾವತಿ, ಅಕ್ಟೋಬರ್ 30; ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನವೆಂಬರ್ ತಿಂಗಳಿನಿಂದ ದರ್ಶನದ ನಿಯಮದಲ್ಲಿ ಬದಲಾವಣೆ ತರಲಿದೆ. ಪ್ರಾಯೋಗಿಕವಾಗಿ ಈ ಬದಲಾವಣೆ ತರಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ತಿರುಪತಿ ವೆಂಕಟೇಶ್ವರನ ವಿಐಪಿ ದರ್ಶನದ ನಿಯಮದಲ್ಲಿ ಟಿಟಿಡಿ ಬದಲಾವಣೆ ತರುತ್ತಿದೆ. ವಿಐಪಿ ದರ್ಶನ ಮತ್ತು ಸಾಮಾನ್ಯ ದರ್ಶನದ ಸಮಯ ಒಂದೇ ಆಗಿದ್ದರಿಂದ ಈ ಬದಲಾವಣೆ ಮಾಡಲಾಗುತ್ತಿದೆ.

ನವೆಂಬರ್ 1ರಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ವಿಐಪಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸ್ತುತ ಮುಂಜಾನೆ 2.30ರಿಂದ ಬೆಳಗ್ಗೆ 8ರ ತನಕ ವಿಐಪಿ ದರ್ಶನವಿದೆ.

ಟಿಟಿಡಿ ಈ ಕುರಿತು ಪ್ರತಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ವಿಐಪಿ ದರ್ಶನಕ್ಕೆ ಮುಂಜಾನೆ ಅವಕಾಶ ನೀಡಲಾಗಿತ್ತು. ಆದರೆ ಅದೇ ವೇಳೆ ಉಚಿತ ದರ್ಶನ ಪಡೆಯುವ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದರು ಎಂದು ಹೇಳಿದೆ.

ಭಕ್ತರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವಿಐಪಿ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ಈ ಬದಲಾವಣೆ ಮಾಡಿ, ಬಳಿಕ ಮುಂದುವರೆಸುವ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

RELATED ARTICLES
- Advertisment -spot_img

Most Popular