Saturday, November 23, 2024
Homeಸುದ್ದಿಗಳುಸಕಲೇಶಪುರರಾಜಕೀಯ ಹಸ್ತಕ್ಷೇಪದಿಂದ ದಲಿತ ಸಂಘಟನೆಗಳ ಮೇಲಿನ ಗೌರವ ಕಡಿಮೆಯಾಗುವ ಅತಂಕ-ಜಾನೇಕೆರೆ ಲೊಕೇಶ್

ರಾಜಕೀಯ ಹಸ್ತಕ್ಷೇಪದಿಂದ ದಲಿತ ಸಂಘಟನೆಗಳ ಮೇಲಿನ ಗೌರವ ಕಡಿಮೆಯಾಗುವ ಅತಂಕ-ಜಾನೇಕೆರೆ ಲೊಕೇಶ್

ರಾಜಕೀಯ ಹಸ್ತಕ್ಷೇಪದಿಂದ ದಲಿತ ಸಂಘಟನೆಗಳ ಮೇಲಿನ ಗೌರವ ಕಡಿಮೆಯಾಗುವ ಅತಂಕ-ಜಾನೇಕೆರೆ ಲೊಕೇಶ್

ಸಕಲೇಶಪುರ:- ಇತ್ತಿಚೀನ ದಿನಗಳಲ್ಲಿ ಸಂಘಟನೆಯ ಕಾರ್ಯದಲ್ಲಿ ರಾಜಕೀಯದ ಹಸ್ತಕ್ಷೇಪದಿಂದ ಸಂಘಟನೆಯ ಬೆಳವಣಿಗೆಗೆ ತೊಡಕಾಗಿದೆ ಎಂದು ದಲಿತ ಸಂಘಟನೆಗಳ ಯುವ ಮುಖಂಡ ಜಾನೇಕೆರೆ ಲೊಕೇಶ್ ಹೇಳಿದರು.

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಸಂಘಟನೆಯ  ಸಭೆಯ ನಂತರ ಮಾತನಾಡಿದರು,

ಸಂಘಟನೆಯ ಕೆಲಸ ಮಾಡಲು ಪಕ್ಷಾತೀತವಾಗಿರುವ ವ್ಯಕ್ತಿಗಳು ಸೂಕ್ತ,ರಾಜಕೀಯ ಪಕ್ಷದಲ್ಲಿದ್ದುಕೊಂಡು ಆಯಾ ಪಕ್ಷಗಳ ವಿಚಾರವನ್ನು ಸಂಘಟನೆಗಳ ಮೂಲಕ ಜನರಿಗೆ ತಲುಪಿಸಲು ಹೋದರೆ ಸಂಘಟನೆಗಳ ಮೇಲಿರುವ ಗೌರವಕ್ಕೆ ದಕ್ಕೆ ಬರುತ್ತದೆ ಆದ್ದರಿಂದ ರಾಜಕೀಯೇತರವಾಗಿ ಸಂಘಟನೆ ಹಾಗೂ ಸಮುದಾಯದ ಳಿಗೆಗೆ ದುಡಿಯುವವರಿಗೆ ಸಂಘಟನೆಗಳ ಕಾರ್ಯದಲ್ಲಿ ಸ್ಥಾನಮಾನ ನೀಡಬೇಕು ಎಂಬುವುದು ದಲಿತ ಸಂಘಟನೆಗಳ ಹಿರಿಯ ಮುಖಂಡರ ಅಭಿಪ್ರಾಯವಾಗಿದ್ದು ಈ ನಿಟ್ಟಿನಲ್ಲಿ ದಲಿತ ಸಂಘಟನೆಗಳು ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಲಿದೆ ಎಂದರು.ಇತ್ತಿಚೀನ ದಿನಗಳಲ್ಲಿ ಕೆಲ ಪಕ್ಷಗಳ ಕಾರ್ಯಕರ್ತರು ತಾಲೂಕಿನ ಕೆಲವೊಂದು ವಿಚಾರಗಳಲ್ಲಿ ಮೂಗೂತೂರಿಸಿ ರಾಜಕೀಯ ಪಕ್ಷದ ವಿಚಾರಗಳನ್ನು ಸಂಘಟನೆಗಳ ಹೆಸರು  ಬಳಸಿಕೊಂಡು ದಲಿತ ಸಂಘಟನೆಗಳ ಹೆಸರಿಗೆ ಕಪ್ಪು ಚುಕ್ಕಿ ತರುವ ಕೆಲಸ ಮಾಡುತ್ತಿದ್ದಾರೆ.ಹಾಗಾಗಿ ಇಂದು ದಲಿತ ಸಂಘಟನೆಯ ಹಿರಿಯರು,ಯುವಕರು ಸೇರಿ ಸಭೆ ನಡೆಸಿದ್ದೇವೆ.ಮುಂದಿನ ದಿನಗಳಲ್ಲಿ ಯಾವುದೇ ಪಕ್ಷದಲ್ಲಿ ಹುದ್ದೆಗಳನ್ನು ನಿರ್ವಹಿಸುತ್ತಿದ್ದವರಿಗೆ ಸಂಘಟನೆಯ ಜವಾಬ್ದಾರಿ ನೀಡಬಾರದು ಎಂದು ನಿರ್ದಾರ ಮಾಡಿದ್ದೇವೆ ಎಂದು ತಿಳಿಸಿದರು.ನಮ್ಮ ಸಮುದಾಯದಲ್ಲಿರುವ ಹಿರಿಯರ ಮೇಲೆ ಅಪಾರವಾದ ಗೌರವವಿದೆ ಆದರೆ ಒಂದು ರಾಜಕೀಯ ಪಕ್ಷದಲ್ಲಿದ್ದುಕೊಂಡು ಸಂಘಟನೆ ಕಟ್ಟುವುದರಿಂದ ಸಮುದಾಯದ ಅಭಿಪ್ರಾಯ ಬೇರೆಯಾಗಿರುತ್ತದೆ ಆದ್ದರಿಂದ ತಾಲೂಕಿನಲ್ಲಿ ನಮ್ಮ ದಲಿತ ಸಮುದಾಯದ ಹಿರಿಯರು ಶ್ರಮ ವಹಿಸಿ ಸಂಘಟನೆ ಕಟ್ಟಿದ್ದಾರೆ ಅದನ್ನು ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದ್ದೆ  ಎಂದು ಹೇಳಿದರು .

 

ಸಭೆಯಲ್ಲಿ ಹಿರಿಯ ದಲಿತ ಮುಖಂಡ ವಳಲಹಳ್ಳಿ ವೀರೇಶ್,ಬೆಳಗೋಡು ಬಸವರಾಜ್,ಸಮಾಜಿಕ ಹೋರಾಟಗಾರ ,ಗ್ರಾಪಂ ಸದಸ್ಯ ಅಚ್ಚರಡಿ ಮೋಹನ್,ಹಾನುಬಾಳು ಸುರೇಶ್,ಹಾದಿಗೆ ವೆಂಕಟೇಶ್,ಹಾಡ್ಯ ನಾಗರಾಜ್,ವಡೂರು ಹಾಲಪ್ಪ  ಸೇರಿದಂತೆ ಇನ್ನು ಮುಂತಾದ ದಲಿತ ಸಂಘಟನೆಯ ಹಿರಿಯರು,ಯುವಕರು ಭಾಗವಹಿಸಿದ್ದರು.

RELATED ARTICLES
- Advertisment -spot_img

Most Popular